ತರುಣಿಯೊಬ್ಬಳಿಗೆ ಡೇಟಿಂಗ್​ ಸಲಹೆ ನೀಡಿದ ಜೋ ಬೈಡನ್, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ

| Updated By: ಶ್ರೀದೇವಿ ಕಳಸದ

Updated on: Oct 17, 2022 | 10:42 AM

Biden Offers Dating Advice : ‘ನಿಮಗೆ 30 ವರ್ಷಗಳಾಗುವವರೆಗೂ ಯಾವ ಹುಡುಗರನ್ನೂ ಗಂಭೀರವಾಗಿ ಪರಿಗಣಿಸಬೇಡಿ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್,​ ತರುಣಿಯೊಬ್ಬಳಿಗೆ ಸಾರ್ವಜನಿಕವಾಗಿ ಡೇಟಿಂಗ್​ ಸಲಹೆ ನೀಡಿದ್ದಾರೆ.

ತರುಣಿಯೊಬ್ಬಳಿಗೆ ಡೇಟಿಂಗ್​ ಸಲಹೆ ನೀಡಿದ ಜೋ ಬೈಡನ್, ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆ
Biden Offers Dating Advice To Young Girl
Follow us on

Viral Video : ‘ನಿಮಗೆ 30 ವರ್ಷಗಳಾಗುವತನಕ ಯಾವ ಹುಡುಗರನ್ನೂ ಗಂಭೀರವಾಗಿ ಪರಿಗಣಿಸಬೇಡಿ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತರುಣಿಯೊಬ್ಬಳಿಗೆ ಸಾರ್ವಜನಿಕವಾಗಿ ಸಲಹೆ ನೀಡದ್ದಾರೆ. ಕ್ಯಾಲಿಫೋರ್ನಿಯಾದ ಐರ್ವಿನ್​ ವ್ಯಾಲಿ ಕಮ್ಯೂನಿಟಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬೈಡನ್​ ಹೀಗೊಂದು ಅನಿರೀಕ್ಷಿತ ಡೇಟಿಂಗ್ ಸಲಹೆ ಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ

ಬೈಡನ್​ ಜೊತೆ ಫೋಟೋ ತೆಗೆಸಿಕೊಳ್ಳಲು ಬಂದ ಈ ತರುಣಿಗೆ, ಹೀಗೊಂದು ಸಲಹೆ ಸಿಗಬಹುದು ಎಂಬ ನಿರೀಕ್ಷೆಯೇ ಇರಲಿಲ್ಲ. ಆಕೆಯ ಭುಜ ಬಳಿಸಿದ ಬೈಡನ್​, ‘30 ಆಗುವತನಕ ಯಾವ ಹುಡುಗರನ್ನೂ ಗಂಭೀರವಾಗಿ ಪರಿಗಣಿಸಬೇಡಿ ಈ ವಿಷಯವನ್ನು ನನ್ನ ಹೆಣ್ಣುಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೂ ಹೇಳಿದ್ದೇನೆ’ ಎನ್ನುತ್ತಾರೆ. ಆಗ  ಆಕೆ ಕೊಂಚ ಗಲಿಬಿಲಿಗೆ ಬೀಳುತ್ತಾಳೆ. ನಂತರ ‘ಹಾಗೇ ಆಗಲಿ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ’ ಎಂದು ನಗುತ್ತ ಉತ್ತರಿಸುತ್ತಾಳೆ.

ಈ ವಿಡಿಯೋ ಅನ್ನು 5.2 ಮಿಲಿಯನ್​ ವೀಕ್ಷಕರು ನೋಡಿದ್ದಾರೆ. ನೆಟ್ಟಿಗರು ತಮ್ಮ ಅಸಮಾಧಾನವನ್ನು ರೀಟ್ವೀಟ್ ಮಾಡುವುದರ ಮೂಲಕ ವ್ಯಕ್ತಪಡಿಸಿದ್ಧಾರೆ. ಈ ವಿಡಿಯೋ ನೋಡಲು ತುಂಬಾ ಕಿರಿಕಿರಿ ಎನ್ನಿಸುತ್ತದೆ, ಸಾರ್ವಜನಿಕವಾಗಿ ಮಕ್ಕಳೊಂದಿಗೆ ಅವರು ಹೀಗೆ ವರ್ತಿಸಿದ್ದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಮಕ್ಕಳೊಂದಿಗೆ ಬೈಡನ್​ ಹೀಗೆ ವರ್ತಿಸಲು ಅನುವು ಮಾಡಿಕೊಡುತ್ತೀರಾ?’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ಡೇಟಿಂಗ್ ಬಗ್ಗೆ ಮಾತನಾಡಲು ಯಾವ ವಯಸ್ಸಿನವರಿಗೂ ಮುಜುಗರವಾಗುತ್ತದೆ. ಅಂಥದ್ದರಲ್ಲಿ ಈ ವಯಸ್ಸಾದ ವ್ಯಕ್ತಿ ಹೀಗೆ ತರುಣಿಯ ಭುಜದ ಮೇಲೆ ಕೈಹಾಕಿ ಮಾತನಾಡುವುದೆಂದರೆ…’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತೊಬ್ಬರು. ಅಲ್ಲೊಬ್ಬರು ಇಲ್ಲೊಬ್ಬರು, ‘ನಿಮ್ಮ ಸಲಹೆ ಸರಿಯಾಗಿದೆ’ ಎಂದಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:37 am, Mon, 17 October 22