Viral Video : ಇಷ್ಟಪಡುವವರ ಮನಸ್ಸನ್ನು ಗೆಲ್ಲಲು ಭಾವ ಮತ್ತು ಉತ್ತಮ ನಡೆವಳಿಕೆ ಸಾಕು. ಆದರೆ ಈಗಿನ ಯುವಪೀಳಿಗೆ ಹುಡುಗಿಯರ ಮನಸ್ಸನ್ನು ಗೆಲ್ಲಲು ಸಿನೆಮಾ ಪ್ರಭಾವದಿಂದ ಹುಚ್ಚುಸಾಹಸಕ್ಕೆ ಇಳಿದು ಪ್ರಾಣಾಪಾಯ ತಂದುಕೊಳ್ಳುತ್ತಿರುವುದನ್ನು ನೋಡಿದರೆ ಖೇದವೆನ್ನಿಸುತ್ತದೆ. ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹುಚ್ಚುಪ್ರೇಮಿಯೊಬ್ಬ ಬೈಕ್ ಸ್ಟಂಟ್ ಮಾಡಿ ಹುಡುಗಿಯನ್ನು ಒಲಿಸಿಕೊಳ್ಳುತ್ತೇನೆಂಬ ಭ್ರಮೆಗೆ ಬಿದ್ದು ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ಸಂದರ್ಭ ಸೃಷ್ಟಿಸಿಕೊಂಡಿದ್ದಾನೆ. ನೋಡಿ ವಿಡಿಯೋ.
ಹುಡುಗರಿಬ್ಬರು ದ್ವಿಚಕ್ರವಾಹನದ ಮೇಲೆ ಹೊರಟಿದ್ದಾರೆ. ಹಿಂದೆ ಕುಳಿತ ಹುಡುಗ ಚಲಿಸುತ್ತಿರುವ ಬೈಕಿನ ಮೇಲಿಂದ ಎದ್ದು ನಿಲ್ಲಲು ಹೋಗುತ್ತಾನೆ. ಆದರೆ ನಿಯಂತ್ರಣ ತಪ್ಪಿ ಹಿಮ್ಮುಖ ಮಾಡಿ ಬಿದ್ದುಬಿಡುತ್ತಾನೆ. ದೂರದಲ್ಲಿ ಮೂರು ಹುಡುಗಿಯರು ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸುಮಾರು 60,000 ಜನರನ್ನು ತಲುಪಿದೆ. ನೂರಾರು ಪ್ರತಿಕ್ರಿಯೆಗಳು ಈ ವಿಡಿಯೋಗೆ ವ್ಯಕ್ತವಾಗಿವೆ.
‘ಈ ಹುಡುಗ ಈ ಭಯಂಕರ ಅಪಘಾತವನ್ನು ಎಂದೂ ಮರೆಯುವುದಿಲ್ಲ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಇದು ತುಂಬಾ ಮುಜುಗರವನ್ನುಂಟು ಮಾಡುವ ವಿಷಯ’ ಇನ್ನೊಬ್ಬರು ಹೇಳಿದ್ದಾರೆ.
ಬೇಕಾ ಇಂಥ ಸ್ಟಂಟ್ಗಳು? ಹೀರೋಯಿಸಂ ತೋರಿಸುವ ಹುಚ್ಚು ಬೇಕಾ? ಯೋಚಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ