Viral Video: ಟ್ರಕ್ ಹಿಂಭಾಗದಿಂದ ವಿಚಿತ್ರ ಶಬ್ದಗಳು! ಟಾರ್ಪಾಲೀನ್ ತೆಗೆದು ನೋಡಿದಾಗ ಬೆಚ್ಚಿಬಿದ್ದ ಜನ

ಹಾವುಗಳು ಭಯಾನಕವಾಗಿ ಹೆದರಿಸುತ್ತಾ.. ತೆವಳುತ್ತಲೇ ಸಾಗುತ್ತವೆ. ಆದರೆ ಅವೆಲ್ಲಿಯಾದರೂ ಬಚ್ಚಿಟ್ಟುಕೊಂಡು ಹೋಗುವುದನ್ನು ನೋಡಿದ್ದೀರಾ?

Viral Video: ಟ್ರಕ್ ಹಿಂಭಾಗದಿಂದ ವಿಚಿತ್ರ ಶಬ್ದಗಳು! ಟಾರ್ಪಾಲೀನ್ ತೆಗೆದು ನೋಡಿದಾಗ ಬೆಚ್ಚಿಬಿದ್ದ ಜನ
ಟ್ರಕ್ ಹಿಂಭಾಗದಿಂದ ವಿಚಿತ್ರ ಶಬ್ದಗಳು! ಟಾರ್ಪಾಲೀನ್ ತೆಗೆದು ನೋಡಿದಾಗ ಬೆಚ್ಚಿಬಿದ್ದ ಜನ
Edited By: ಸಾಧು ಶ್ರೀನಾಥ್​

Updated on: Aug 16, 2022 | 4:15 PM

ಮಾರು ದೂರದಿಂದ ಹಾವು ಕಂಡರೆ ಸಾಕು.. ಜನ ಭಯಬೀತರಾಗಿ ಎದ್ನೋ ಬಿದ್ನೋ ಎಂದು ಓಡುತ್ತಾರೆ. ಅಂತಹ ಭಯಾನಕ ಹಾವು ನಮ್ಮ ಹತ್ತಿರವೇ ಬಂದರೆ.. ಇನ್ನೇನಿದೆ? ಹೃದಯ ಕಳಚಿಬಿದ್ದಂತಹ ಅನುಭವವಾದೀತು ಅಷ್ಟೆ. ಏಕೆಂದರೆ ಹಾವುಗಳು ಭಯಾನಕವಾಗಿ ತೆವಳಿಕೊಂಡು ಸಾಗುವ ಸರೀಸೃಪ ಜಾತಿಗೆ ಸೇರಿದ ಪ್ರಾಣಿ. ಆದರೆ ಅವೆಲ್ಲಿಯಾದರೂ ಅಡಗಿಕೊಳ್ಳುತ್ತವೆಯೇ? ನಿಜಾ ಹಾವುಗಳು ಬಿಲಗಳಲ್ಲಿ. ಅಂಕೊಡೊಂಕು ಜಾಗಗಳಲ್ಲಿ ಬಚ್ಚಿಟ್ಟುಕೊಳ್ಳುತ್ತವೆ. ಆದರೆ ಈ ಪ್ರಕರಣದಲ್ಲಿ ಹಾವು ಬಚ್ಚಿಟ್ಟುಕೊಂಡಿದ್ದಾದರೂ ಎಲ್ಲಿ ಗೊತ್ತಾ?

ವಿವರಗಳಿಗೆ ಹೋಗುವುದಾದರೆ… ಥಾಯ್ಲೆಂಡ್‌ನ ಸೂರತ್ ಥಾನಿ ಎಂಬ ವ್ಯಕ್ತಿ ಕೆಲಸ ಮುಗಿಸಿ ತನ್ನ ಟ್ರಕ್​ನಲ್ಲಿ ಮನೆಗೆ ಮರಳುತ್ತಿದ್ದ. ಆದರೆ ರಸ್ತೆಯ ಮಧ್ಯದಲ್ಲಿ ಟ್ರಕ್‌ನ ಹಿಂಬದಿಯಿಂದ ವಿಚಿತ್ರ ಶಬ್ದಗಳು ಬರುತ್ತಿರುವುದನ್ನು ಜನ ಗಮನಿಸಿದರು. ರಾತ್ರಿ ಆಗಿದ್ದರಿಂದ ಅದರ ಕಡೆ ಹೆಚ್ಚು ಗಮನ ಹರಿಸಲಾಗಲಿಲ್ಲ. ಮನೆ ತಲುಪಿದ ನಂತರ.. ಟ್ರಕ್ ನಿಲ್ಲಿಸುವಾಗ.. ಆ ಶಬ್ದಗಳು ಜೋರಾಗಿ ಬರತೊಡಗಿದವು. ಇನ್ನು ಲಾಭವಿಲ್ಲ ಎಂದುಕೊಂಡು ಹಿಂದೆ ಇದ್ದ ಟಾರ್ಪಾಲಿನ್ ತೆಗೆದು ನೋಡಿದಾಗ ಏನಾಗುತ್ತದೆ ಗೊತ್ತಾ? ಕಂಡಿದ್ದಾದರೂ ಏನು ಗೊತ್ತಾ? ಬರೋಬ್ಬರಿ 12 ಅಡಿಯ ಬೃಹತ್ ನಾಗರಹಾವು ಕಾಣಿಸಿತು! ಕೂಡಲೇ ಹಾವು ಹಿಡಿಯುವವರಿಗೆ ಮಾಹಿತಿ ನೀಡಿ.. ಜಾಣತನದಿಂದ ಹಾವನ್ನು ಹಿಡಿಯಲಾಯಿತು. ನಂತರ ಅದನ್ನು ಕಾಡಿಗೆ ಬಿಟ್ಟರು ಅಂದುಕೊಳ್ಳಿ.

ಏತನ್ಮಧ್ಯೆ, ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿವೆ. ಈ ವಿಡಿಯೋಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ ಈ ವಿಡಿಯೋ. ಒಮ್ಮೆ ಅದನ್ನು ನೀವೂ ನೋಡಿ.

To read more in Telugu click here

Web contact

TV9 Kannada

Read More
Follow Us