ಹಾರರ್ ಸಿನಿಮಾ ನೋಡುವುದರಿಂದ ತೂಕ ಇಳಿಸಿಕೊಳ್ಳಬಹುದು: ಅಧ್ಯಯನ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 22, 2023 | 6:06 PM

ನೀವು ಬಹಳ ಇಷ್ಟಪಟ್ಟು ವೀಕ್ಷಿಸುವಂತಹ ಹಾರರ್ ಚಲನಚಿತ್ರಗಳು ತೂಕ ಇಳಿಕೆಗೆ ಬಹಳ ಸಹಕಾರಿ ಎಂಬುದು ನಿಮಗೆ ತಿಳಿದಿದೆಯಾ. ವಿಚಿತ್ರವೆನಿಸಿದರೂ ಇದು ಸತ್ಯ. ಇತ್ತೀಚಿನ ಅಧ್ಯಯನವೊಂದು  ಹಾರರ್  ಚಲನಚಿತ್ರವನ್ನು ವೀಕ್ಷಣೆ ಮಾಡುವುದರಿಂದ ಹೆಚ್ಚಿನ ಕ್ಯಾಲೋರಿಗಳನ್ನು ಸುಡಬಹುದು. ಇದರಿಂದ ಸುಲಭವಾಗಿ ದೇಹ ತೂಕವನ್ನು ಇಳಿಸಿಕೊಳ್ಳಬಹುದು ಎಂಬುದನ್ನು ಕಂಡುಹಿಡಿದಿದೆ. 

ಹಾರರ್ ಸಿನಿಮಾ ನೋಡುವುದರಿಂದ ತೂಕ ಇಳಿಸಿಕೊಳ್ಳಬಹುದು: ಅಧ್ಯಯನ
ಸಾಂದರ್ಭಿಕ ಚಿತ್ರ
Follow us on

ನಿಮಗೆ ಭಯಾನಕವಾದ ಹಾರರ್ ಚಲನಚಿತ್ರಗಳನ್ನು ವೀಕ್ಷಿಸುವುದೆಂದರೆ  ಇಷ್ಟನಾ? ಹಾಗಿದ್ದಲ್ಲಿ ಈ ನಿಮ್ಮ ನೆಚ್ಚಿನ ಹವ್ಯಾಸವು ತೂಕ ಇಳಿಕೆಗೆ ತುಂಬಾ ಸಹಕಾರಿಯಾಗಿದೆ. ಅರೇ ತೂಕ ಇಳಿಕೆಗೂ ಹಾರರ್ ಸಿನೆಮಾ ವೀಕ್ಷಣೆಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿದ್ದೀರಾ?  ವಿಚಿತ್ರವಾದರೂ ಇದು ಸತ್ಯ.  ಇತ್ತೀಚಿನ ಅಧ್ಯಯನವೊಂದು   ಭಯಾನಕ ಹಾರರ್  ಚಲನಚಿತ್ರವನ್ನು ವೀಕ್ಷಣೆ ಮಾಡುವುದರಿಂದ ಸುಮಾರು  ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಸುಲಭವಾಗಿ ದೇಹ ತೂಕವನ್ನು ಇಳಿಸಿಕೊಳ್ಳಲು ಸಾಧ್ಯ ಎಂಬುದನ್ನು  ಕಂಡುಹಿಡಿದಿದೆ.

ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾನಿಲಯದ  ಈ ಸಂಶೋಧನೆಯ  ಪ್ರಕಾರ, 90 ನಿಮಿಷಗಳ ಕಾಲ ಭಯಾನಕ  ಹಾರರ್ ಸಿನೆಮಾವನ್ನು ವೀಕ್ಷಿಸುವುದರಿಂದ  ಸುಮಾರು 150 ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತದೆ.  ಇದು 30 ನಿಮಿಷಗಳ ವಾಕಿಂಗ್ನಷ್ಟೆ ಪರಿಣಾಮಕಾರಿಯಾಗಿದೆ ಎಂಬುದನ್ನು ಹೇಳಿದೆ.

ಮೂವಿ ರೆಂಟಲ್ ಕಂಪೆನಿ ಲವ್ ಫಿಲ್ಮ್ನ ಪ್ರಯೋಜಕತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ  ಹತ್ತು ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು.  ಆ 10 ಜನರು  10 ವಿಭಿನ್ನ ಭಯಾನಕ ಹಾರರ್ ಚಲನಚಿತ್ರಗಳನ್ನು  ಹೃದಯ ಬಡಿತ, ಆಮ್ಲಜನಕದ ಸೇವನೆ ಮತ್ತು ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯನ್ನು ಅಳೆಯುವ ಸಾಧನಗಳನ್ನು ಧರಿಸಿ ವೀಕ್ಷಿಸಿದರು.  ಇದರ ಸಹಾಯದಿಂದ ಹಾರರ್ ಚಲನಚಿತ್ರ ವೀಕ್ಷಿಸುವುದರಿಂದ ವೀಕ್ಷಕರ  ಹೃದಯದ ಬಡಿತ ಮತ್ತು ಚಯಾಪಚಯಕ್ರಿಯೆಯು ಹೆಚ್ಚುತ್ತದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.  ಹಾರರ್ ಚಲನಚಿತ್ರಗಳ ಪರಿಣಾಮವಾಗಿ ಒಬ್ಬ ವ್ಯಕ್ತಿ ಹೆಚ್ಚಿನ ಕ್ಯಾಲೋರಿಗಳನ್ನು ಸುಡಲು ಸಾಧ್ಯವಾಗುತ್ತದೆ  ಮತ್ತು ಬರ್ನ್ ಮಾಡಲಾದ ಕ್ಯಾಲೋರಿಗಳ ಸಂಖ್ಯೆಯು ಚಲನಚಿತ್ರ ಮತ್ತು ವ್ಯಕ್ತಿಯನ್ನು ಅವಲಂಬಿಸಿ ಬದಲಾಗುತ್ತದೆ. ಹೀಗಿದ್ದರೂ  90 ನಿಮಿಷಗಳ ಕಾಲ ಭಯಾನಕ ಚಲನಚಿತ್ರವನ್ನು ವೀಕ್ಷಿಸುವುದರಿಂದ   ಸರಾಸರಿ 150 ಕ್ಯಾಲೋರಿಗಳನ್ನು ಸುಡಬಹುದು  ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಈ ಮಹಿಳೆಗೆ 38 ಹಲ್ಲುಗಳು, ಇದೀಗ ಈಕೆಯ ಹಲ್ಲು ವಿಶ್ವ ದಾಖಲೆಗೆ ಸೇರಿದೆ  

ಅಧ್ಯಯನವು ಕ್ಯಾಲೋರಿಗಳನ್ನು ಕಡಿಮೆ ಮಾಡುವ  ವಿಷಯದಲ್ಲಿ ಟಾಪ್-10 ಭಯಾನಕ  ಹಾರರ್ ಚಲನಚಿತ್ರಗಳನ್ನು ಆಯ್ಕೆ ಮಾಡಿದೆ.  ಅದರಲ್ಲಿ ದಿ ಶೈನಿಂಗ್ (184 ಕ್ಯಾಲೋರಿಗಳು), ಜಾಸ್ (161 ಕ್ಯಾಲೋರಿಗಳು) ಮತ್ತು ದಿ ಎಕ್ಸಾರ್ಸಿಸ್ಟ್ (158 ಕ್ಯಾಲೋರಿ)  ಈ ಮೂರು ಚಲನಚಿತ್ರಗಳು ಹೆಚ್ಚು ಕ್ಯಾಲೋರಿಗಳನ್ನು ಸುಡಲು ಸಹಕಾರಿಯಾಗಿದೆ ಎಂದು ಅಧ್ಯಯನದಲ್ಲಿ ಕಂಡುಹಿಡಿಯಲಾಗಿದೆ.
“ವಿಶೇಷವಾಗಿ ಈ ಭಯಾನಕ ಚಲನಚಿತ್ರಗಳು ನೋಡುಗರ ಹೃದಯ ಬಡಿತ ಮತ್ತು ಅಡ್ರಿನಾಲಿನ್  ಹಾರ್ಮೋನು ಮಟ್ಟವನ್ನು ಹೆಚ್ಚಿಸಲು ಕಾರಣವಾದ  ಬೆಚ್ಚಿಬೀಳಿಸುವ (ಜಂಪ್-ಸ್ಕೇರ್)  ಭಯಾನಕ  ಕ್ಷಣಗಳನ್ನು  ಒಳಗೊಂಡಿದೆ.  ಭಯದ ಕಾರಣ ಅಡ್ರಿನಾಲ್ ಹಾರ್ಮೋನ್ ಬಿಡುಗಡೆಯಾದಾಗ, ಇದರಿಂದ ಹಸಿವು ಕಡಿಮೆಯಾಗುತ್ತದೆ ಮತ್ತು ಇದು ಚಯಾಪಚಯಕ್ರಿಯೆಯನ್ನು ವೇಗಗೊಳಿಸುತ್ತದೆ. ಮುಖ್ಯವಾಗಿ ಇದು ಕ್ಯಾಲೋರಿಗಳನ್ನು ಸುಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ” ಎಂದು   ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾನಿಲಯದ ಸೆಲ್ ಮೆಟಬಾಲಿಸಂ ಮತ್ತು ಪಿಸಿಯೋಲಾಜಿ ವಿಭಾಗದ ಹಿರಿಯ ಉಪನ್ಯಾಸಕ ಡಾ. ರಿಚರ್ಡ್ ಮೆಕೆಂಜಿ ವಿವರಿಸಿದ್ದಾರೆ.

ಹಾರರ್ ಚಲನಚಿತ್ರಗಳನ್ನು ವೀಕ್ಷಿಸುವುದು ಕ್ಯಾಲೋರಿಗಳನ್ನು ಕಡಿಮೆ ಹಾಗೂ ತೂಕವನ್ನು ಇಳಿಸಿಕೊಳ್ಳಲು ಇರುವ ಮೋಜಿನ ಹಾಗೂ ಸುಲಭವಾದ ಮಾರ್ಗವಾಗಿದೆ.  ಕೇವಲ ಚಲನಚಿತ್ರವನ್ನು ವೀಕ್ಷಿಸಿದರೆ ಸಾಲದು ನಿಯಮಿತ ದೈಹಿಕ ಚಟುವಟಿಕೆಗಳನ್ನು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಸಹ ಮುಖ್ಯವಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ