ಕೊರೋನಾ (Corona) ಎಲ್ಲೆಡೆ ಹರಡುತ್ತಿದೆ. ಜನ ಕಾಯಿಲೆಯಿಂದ ಪಾರಾಗಲು ವ್ಯಾಕ್ಸಿನ್ಗಳನ್ನು ಪಡೆದುಕೊಂಡಿದ್ದರೂ ರೋಗಕ್ಕೆ ತುತ್ತಾಗುತ್ತಿದ್ದರೆ. ಇದರಿಂದ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಜನ ಹೋಗದಂತಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಪಶ್ಚಿಮ ಬಂಗಾಳದ ಜೋಡಿಯೊಂದು ಮದುವೆಯನ್ನು ವರ್ಚುವಲ್ ಆಗಿ ಆಗಲು ನಿರ್ಧರಿಸಿದ್ದಾರೆ. ಹೌದು, ಗೂಗಲ್ ಮೀಟ್ (Google Meet) ಮೂಲಕ ಸಂಬಂಧಿಕರನ್ನು ಆಹ್ವಾನಿಸಿ, ಊಟವನ್ನು ಜೊಮಾಟೋ (Zomato) ಮೂಲಕ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಸಂದೀಪನ್ ಸರ್ಕಾರ್ ಮತ್ತು ಅಧಿತಿ ದಾಸ್ ಎನ್ನುವ ಜೋಡಿ ಇದೇ ಜನವರ 24ರಂದು ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೋನಾ ಗಣನೀಯ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಹೀಗಾಗಿ ಸಂದೀಪನ್ ಹಾಗೂ ಅಧಿತಿ ಗೂಗಲ್ ಮೀಟ್ನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.
ಸದ್ಯ ಇವರ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ನ್ಯೂಸ್ 18 ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ಮಾತನಾಡಿದ ವರ ಸಂದೀಪನ್ ಕಳೆದ ವರ್ಷವೇ ಮದುವೆಯಾಗಲು ನಿರ್ಧರಿಸಿದ್ದೆವು. ಆದರೆ ಕೊರೋನಾ ಕಾರಣದಿಂದ ಸಾಧ್ಯವಾಗಿರಲಿಲ್ಲ. ಅಲ್ಲದೇ ಸ್ವತಃ ನಾನೇ ಸೋಂಕಿಗೆ ತುತ್ತಾದ ಕಾರಣ ಹಲವು ದಿನ ಐಸೋಲೇಷನ್ನಲ್ಲಿದ್ದೆ. ಈ ಬಾರಿಯೂ ಕೊರೋನಾ ಕಾಡುತ್ತಿದೆ. ಹೀಗಾಗಿ ವರ್ಚುವಲ್ ಮೂಲಕ ಮದುವೆಯಾಗಲು ನಿರ್ಧರಿಸದ್ದೇವೆ. ಮದುವೆಗೆ 450 ಜನರಿಗೆ ಗೂಗಲ್ ಮೀಟ್ ಲಿಂಕ್ಅನ್ನು ಕಳುಹಿಸಲಾಗುವುದು. ಊಟವನ್ನು ಜೊಮಾಟೋ ಮೂಲಕ ಸಂಬಂಧಿಕರ ಮನೆಗಳಿಗೇ ತಲುಪಿಸುವ ವ್ಯಸವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದೇ ಪದ್ಧತಿ ಜಾರಿಗೆ ಬಂದರೂ ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.
ಮದುವೆಯನ್ನು ಗೂಗಲ್ ಮೀಟ್ನಲ್ಲಿ ಪ್ರಸಾರ ಮಾಡಲು ಅಧಿತಿ ಹಾಗೂ ಸಂದೀಪ್ ಟೆಕ್ನಿಕಲ್ ಟೀಮ್ ಅನ್ನು ನೇಮಿಸಿದ್ದಾರೆ. ಅಧಿತಿ ಹಾಗೂ ಸಂದೀಪನ್ಗೆ ಫ್ಯಾಮಿಲಿ ಫ್ರೆಂಡ್ ಆಗಿರುವ ಗಾಯಕ ಸುರೋಜಿತ್ ಚಟರ್ಜಿ ಮಾತನಾಡಿ, ಇದು ಎಲ್ಲರೂ ಅನುಸರಿಬೇಕಾದ ಕ್ರಮವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದಿದ್ದಾರೆ. ಕೊರೋನಾ ಸಾಂಕ್ರಾಮಿಕ ವರ್ಕ್ ಫ್ರಾಮ್ ಹೋಮ್ ಎನ್ನುವ ಹೊಸ ಕಾನ್ಸೆಪ್ಟ್ಅನ್ನು ಜಾರಿಗೆ ತಂದಿದೆ. ಇನ್ನು ಮದುವೆ, ಸಮಾರಂಭಗಳನ್ನೂ ವರ್ಚುವಲ್ ಮೂಲಕ ನಡೆಸುವಂತಹ ದಿನಗಳು ಬಂದರೂ ಅಚ್ಚರಿಯಿಲ್ಲ.
ಇದನ್ನೂ ಓದಿ:
ಅಡ್ವಾನ್ಸ್ ಹಣ ಹಿಂತಿರುಗಿಸದ ಮಾಲೀಕ: ಸಿಟ್ಟಿನಲ್ಲಿ ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಗೌನ್ಗಳನ್ನು ಕತ್ತರಿಸಿದ ಮಹಿಳೆ
Published On - 11:25 am, Tue, 18 January 22