
ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು. ಕೆಲವೊಮ್ಮೆ ನೀವು ಮಾಡುವ ಸಣ್ಣ ತಪ್ಪು ಇಲ್ಲೊಬ್ಬರ ಜೀವಕ್ಕೆ ಕುತ್ತು ತರಬಹುದು. ಅಂತದ್ದೇ ವಿಡಿಯೋ ಒಂದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಎಲ್ಲೆಂದರಲ್ಲಿ ಕಾರು ನಿಲ್ಲಿಸಿ, ಕೆಲವೊಮ್ಮೆ ರಸ್ತೆಬದಿಯಲ್ಲಿ ನಿಲ್ಲಿಸಿ ಹಿಂದಿನಿಂದ ಬರುವ ವಾಹನಗಳತ್ತ ಕಣ್ಣು ಹಾಯಿಸದೆ, ಕಾರು ಬಾಗಿಲು ತೆರೆದು ಕೆಳಗಿಳಿಯಲು ಯತ್ನಿಸುವ ಕೆಲವರನ್ನು ನೀವು ಗಮನಿಸಿರಬಹುದು. ಇದು ಎಷ್ಟು ಅಪಾಯಕಾರಿ ಎಂಬುದನ್ನು ಈ ವೈರಲ್ ವೀಡಿಯೊದಲ್ಲಿ ಕಾಣಬಹುದು.
ವಿಡಿಯೋದಲ್ಲಿ ರಸ್ತೆಬದಿಯಲ್ಲಿ ಕಾರು ನಿಂತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಒಬ್ಬ ಸ್ಕೂಟಿಯಲ್ಲಿ ಹಿಂದಿನಿಂದ ಬರುತ್ತಾನೆ. ಆದರೆ ಕಾರಿನಲ್ಲಿ ಕುಳಿತವನು ಯಾರು ಬರುತ್ತಿದ್ದಾರೆಂದು ಹಿಂದೆ ನೋಡದೆ ಕಾರು ಡೋರ್ ತೆಗೆದು ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದಂತೆ, ಕೂಡಲೇ ಹಿಂದಿನಿಂದ ಬಂದ ಸ್ಕೂಟಿ ಚಾಲಕ ಕಾರಿನ ಡೋರ್ ತಾಗಿ ರಸ್ತೆಗೆ ಬೀಳುತ್ತಾನೆ. ಆಗಲೇ ಮುಂದಿನಿಂದ ವೇಗವಾಗಿ ಬಂದ ವಾಹನ ಸ್ಕೂಟಿ ಚಾಲಕ ಮೈ ಮೇಲೆ ಹಾದು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೆ ಪತಿಗೆ ವಿಚ್ಛೇದನ ನೀಡಿದ ಪತ್ನಿ; ಕಾರಣ ತಿಳಿದರೆ ನೀವು ಶಾಕ್ ಆಗುದಂತೂ ಖಂಡಿತಾ
ಟ್ವಿಟರ್ನಲ್ಲಿ @1000waystod1e ಎಂಬ ಖಾತೆಯಲ್ಲಿ ಈ ವಿಡಿಯೋ ನಿನ್ನೆ(ನ.07) ಹಂಚಿಕೊಂಡಿದ್ದು, ಇದೀಗಾಗಲೇ 7.6 ಮಿಲಿಯನ್ ಅಂದರೆ 76 ಲಕ್ಷ ಜನರು ವೀಕ್ಷಿಸಿದ್ದಾರೆ. ಇದಲ್ಲದೇ 10 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.ಅದೇ ಸಮಯದಲ್ಲಿ, ವೀಡಿಯೊವನ್ನು ನೋಡಿದ ನಂತರ, ಹಲವು ಜನರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘ಸ್ಕೂಟರ್ ಓಡಿಸುತ್ತಿದ್ದವರು ಬದುಕಿದ್ದಾರಾ?’ ಎಂದು ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ‘ಈ ವಿಡಿಯೋ ನಕಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ತೋರಿಸಿರುವ ಅಪಘಾತ ಅಸಲಿಯೋ, ನಕಲಿಯೋ ಎಂಬುದು ತಿಳಿದಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: