WhatsApp : ರಜಾ ಅರ್ಜಿಗೆ (Leave Application) ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟ್ಗಳು ವೈರಲ್ ಆಗಿರುವುದನ್ನು ಓದಿದ್ದೀರಿ. ಅದಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರದೊಳಗೂ ತೇಲಿದ್ದೀರಿ. ನಕ್ಕು ಹಗುರಾಗಿದ್ದೀರಿ. ಇದೀಗ ಮತ್ತೊಂದು ರಜಾ ವಿನಂತಿಯ ಸ್ಕ್ರೀನ್ ಶಾಟ್ ಟ್ವಿಟರ್ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಕಚೇರಿ ಮುಖ್ಯಸ್ಥರಿಗೆ ವಾಟ್ಸಪ್ ಮೂಲಕ ರಜಾ ವಿನಂತಿ ಮಾಡಿಕೊಂಡಿದ್ದಾರೆ. ಸಂವಹನ ಶೈಲಿಯನ್ನು ಗಮನಿಸಿ.
ಇದನ್ನೂ ಓದಿ— craziest interactions (@crazyinteract) June 5, 2023
ಮಹಿಳಾ ಉದ್ಯೋಗಿ : ಹಾಯ್ ಬಾಸ್
ಬಾಸ್ : ಯೆಸ್?
ಮಹಿಳಾ ಉದ್ಯೋಗಿ : ನಾನು ಗರ್ಭಿಣಿ
ಬಾಸ್ : ??
ಮಹಿಳಾ ಉದ್ಯೋಗಿ : ಆದ್ದರಿಂದ…
ಮಹಿಳಾ ಉದ್ಯೋಗಿ : ನನಗೆ ಕೆಲ ದಿನಗಳ ಮಟ್ಟಿಗೆ ರಜೆ ಬೇಕಿತ್ತು.
ಮಹಿಳಾ ಉದ್ಯೋಗಿ : ಈ ವಿಷಯವನ್ನು ನನ್ನ ಬಾಯ್ಫ್ರೆಂಡ್ ಜೊತೆ ಚರ್ಚಿಸುವುದಕ್ಕೆ.
ಮಹಿಳಾ ಉದ್ಯೋಗಿ : ದಯವಿಟ್ಟು ನನ್ನ ರಜಾಮನವಿಯನ್ನು ಸ್ವೀಕರಿಸಿ.
ಬಾಸ್ : ದಯವಿಟ್ಟು ಈ ವಿಷಯವನ್ನು ಮೊದಲು ನನ್ನ ಹೆಂಡತಿಯೊಂದಿಗೆ ಚರ್ಚಿಸಿ!! ಆರಂಭದ ಎರಡು ಮೆಸೇಜ್ಗಳನ್ನು ಆಕೆ ಓದಿದ್ದಾಳೆ. ಮತ್ತೆ ಯಾಕೆ ನೀವು ಒಂದೇ ಮೆಸೇಜ್ನಲ್ಲಿ ಈ ಎಲ್ಲಾ ವಿಷಯಗಳನ್ನು ಟೈಪ್ ಮಾಡುವುದಿಲ್ಲ?
ಇದನ್ನೂ ಓದಿ : Viral Video: ಮೆಕ್ಡೊನಾಲ್ಡ್ಸ್; ಡೇಟಿಂಗ್, ಪ್ರೇಮದ ಬೆಲೆ ಇಲ್ಲಿ ರೂ. 179?; ನೆಟ್ಟಿಗರ ಆಕ್ರೋಶ
ಇದು ಈ ಮೇಲಿನ ಟ್ವೀಟ್ನ ಅನುವಾದ. ಈ ಟ್ವೀಟ್ ಅನ್ನು ಈತನಕ ಸುಮಾರು 3.9 ಮಿಲಿಯನ್ ಜನರು ಓದಿದ್ದಾರೆ. 12 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 8,000 ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಬುಕ್ ಮಾರ್ಕ್ ಮಾಡಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ : Viral: “ಕಚರಾ” ಮರುಬಳಕೆ; ಝೊಮ್ಯಾಟೋದ ಕೀಳು ಅಭಿರುಚಿಯ ಜಾತೀವಾದಿ ಜಾಹೀರಾತು
ಈಕೆ ಒಂದೊಂದು ಮೆಸೇಜಿನ ಮಧ್ಯೆ ಒಂದು ನಿಮಿಷದ ಗ್ಯಾಪ್ ಕೊಡುತ್ತಾಳೆ ಎನ್ನುವುದಂತೂ ಖಾತ್ರಿ. ನನ್ನ ತಂದೆ ಒಂದೊಂದು ಪದವನ್ನು ಒಂದೊಂದು ಮೆಸೇಜ್ನಂತೆ ಕಳಿಸುತ್ತಾರೆ. ನನ್ನ ತಾಯಿಯ ಒಂದು ಮೆಸೇಜ್ ಇಡೀ ಪರದೆಯನ್ನು ತುಂಬಿಸಿರುತ್ತದೆ. ಒಂದೇ ಮೆಸೇಜಿನಲ್ಲಿ ಎಲ್ಲವನ್ನೂ ಟೈಪ್ ಮಾಡದವರನ್ನು ನಾನಂತೂ ದ್ವೇಷಿಸುತ್ತೇನೆ. ಇದು ನಿಜವಾದದ್ದಲ್ಲ. ವ್ಯೂವ್ಸ್ಗಾಗಿ ಸೃಷ್ಟಿಸಿದ್ದು… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಅನುಭಗಳನ್ನು ಹಂಚಿಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:53 pm, Thu, 8 June 23