ಜೀವನಲ್ಲಿ ಸಣ್ಣ ಸಣ್ಣ ವಿಷಯಗಳನ್ನೂ ಆನಂದಿಸುವುದನ್ನು ಕಲಿತುಕೊಳ್ಳಬೇಕು ಆಗ ಬದುಕು ಸುಂದರ ಎನಿಸುತ್ತದೆ. ಅದರಲ್ಲೂ ದಂಪತಿಯ ನಡುವೆ ಸರ್ಪೈಸ್ ಗಿಫ್ಟ್, ಪಾರ್ಟಿಗಳು ಇರಲೇಬೇಕು ಆಗ ಸಂಗಾತಿಯೊಂದಿಗೆ ಬಂಧ ಇನ್ನಷ್ಟು ಬೆಸೆಯಲಿದೆ. ಸಂಗಾತಿಯ ಸಣ್ಣ ಉಡುಗೊರೆಯನ್ನು ಸಂಭ್ರಮಿಸಿದರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ. ಇದೀಗ ಪತ್ನಿಯ ಸರ್ಪೈಸ್ ಗಿಫ್ಟ್ ನೋಡಿ ಪತಿಯೊಬ್ಬ ಖುಷಿಯಿಂದ ಕಣ್ಣೀರು ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ.
ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋ ಹಂಚಿಕೊಳ್ಳಲಾಗಿದೆ. ಬೆಬಿ ಬರ್ನೆಟ್ ಎನ್ನುವ ಬಳಕೆದಾರರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು ಕ್ರಿಸ್ಮಸ್ ಶುಭಾಶಯವನ್ನು ಕೋರಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕ್ರಿಸ್ ಮಸ್ ಟೋಪಿ ರೀತಿಯ ಪ್ಯಾಕ್ನಲ್ಲಿದ್ದ ಗಿಫ್ಟ್ ಅನ್ನು ತೆಗೆಯುತ್ತಾನೆ. ಗಿಪ್ಟ್ ಓಪನ್ ಮಾಡುತ್ತಿದ್ದಂತೆ ಆತನ ಕಣ್ಣುಗಳಲ್ಲಿ ನೀರು ತುಂಬುತ್ತದೆ. ನಂತರ ಗಿಫ್ಟ್ ಅನ್ನು ಓಪನ್ ಮಾಡಿ ಅದರಲ್ಲಿದ್ದ ರಿಂಗ್ ಅನ್ನು ಕೈಗೆ ಧರಿಸುತ್ತಾನೆ. ಈ ವೇಳೆ ಆತನ ಕಣ್ಣುಗಳಲ್ಲಿ ಖುಷಿಯ ಕಣ್ಣಿರು ಹರಿಯುವುದನ್ನು ಕಾಣಬಹುದು. ಅಚಾನಕ್ ಆಗಿ ಪತಿ ಮದುವೆಯ ಉಂಗುರವನ್ನು ಕಳೆದುಕೊಂಡ ಕಾರಣ ಈ ಪುಟ್ಟ ಗಿಫ್ಟ್ ಎಂದು ಬರ್ನೆಟ್ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಗಂಡ ಹೆಂಡತಿಯ ಪ್ರೀತಿಯ ಬಂಧ ನೋಡಿ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರೀತಿ, ಬಾಂಧವ್ಯ ಎಂದರೆ ಹೀಗಿರಬೆಕು ಎಂದು ನೆಟ್ಟಿಗು ಕಾಮೆಂಟ್ ಮಾಡಿದ್ದಾರೆ. ಹೃದಯ ಸ್ಪರ್ಶಿ ವೀಡಿಯೋ 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು, ಸಾಕಷ್ಟು ಬಾರಿ ರೀ ಶೇರ್ ಆಗಿದೆ.
ಇದನ್ನೂ ಓದಿ:
Video Viral: ಮಳೆಯ ನೀರಿನೊಂದಿಗೆ ಆಕಾಶದಿಂದ ಬಿದ್ದ ಮೀನುಗಳು: ವೀಡಿಯೋ ವೈರಲ್