ರಸ್ತೆ ಬದಿ ಬಿದ್ದು ಸಿಕ್ಕಿದ್ದ ಬೆಲೆಬಾಳುವ ಐಫೋನ್ ಒಂದನ್ನು ಯುವತಿಯೊಬ್ಬಳು ಪ್ರಮಾಣಿಕವಾಗಿ ಅದರ ಮಾಲೀಕನಿಗೆ ನೀಡಿದ್ದಾಳೆ. ಆದರೆ ಕಳೆದುಹೋದ ಪೋನ್ ಸಿಕ್ಕಿದ ಖುಷಿಗೆ ಆತ ಯುವತಿಗೆ ಧನ್ಯವಾದ ಹೇಳಿ ಕವರ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾನೆ. ಆದರೆ ಈ ಗಿಫ್ಟ್ ಆತನನ್ನು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಅಷ್ಟಕ್ಕೂ ಆತ ಕೊಟ್ಟ ಗಿಫ್ಟ್ ಏನು ಗೊತ್ತಾ?
ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಮಹಿಳೆಯೊಬ್ಬಳು ತನ್ನಗೆ ಬಿದ್ದು ಸಿಕ್ಕಿದ ಐಫೋನ್ ಅನ್ನು ಅದರ ಮಾಲೀಕನಿಗೆ ಹಿಂದಿರುಗಿಸಿದ ನಂತರ, ಆಕೆಗೆ ಕವರ್ ಒಳಗೆ 3,100 ಯುವಾನ್ ಅಂದರೆ ಇಲ್ಲಿನ 35ಸಾವಿರದಷ್ಟು ಹಣವನ್ನು ಗಿಫ್ಟ್ ಆಗಿ ನೀಡಿದ್ದಾನೆ. ತಾನು ಮಾಡಿದ ಉಪಕಾರಕ್ಕೆ ಆತ ದುಡ್ಡು ನೀಡಿರುವುದು ಯುವತಿಗೆ ಖುಷಿ ಕೊಟ್ಟಿದೆ. ಆದರೆ ಮನೆಗೆ ಬಂದು ನೋಡಿದರೆ ಯುವತಿಗೆ ಶಾಕ್ ಆಗಿದೆ. ಕವರ್ ಒಳಗೆ ಅಸಲಿ ನೋಟುಗಳ ಬದಲಿಗೆ ಖೋಟಾ ನೋಟುಗಳನ್ನು ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ವಿರುದ್ದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ.
ಇದನ್ನೂ ಓದಿ: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಶ್ವಾಸಕೋಶದಲ್ಲಿ ಜಿರಳೆ ಪತ್ತೆ
ವಂಚನೆಯಿಂದ ಅವಮಾನಿತಳಾದ ಮಹಿಳೆ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಫೋನ್‌ನ ಮಾಲೀಕ ಉದ್ದೇಶಪೂರ್ವಕ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹುನಾನ್ ಜಿಂಜೌ ಕಾನೂನು ಸಂಸ್ಥೆಯ ವಕೀಲರಾದ ಯಿ ಕ್ಸು ಪ್ರಕಾರ, ನಕಲಿ ಹಣವನ್ನು ಬಹುಮಾನವಾಗಿ ನೀಡುವುದನ್ನು ವಂಚನೆ ಎಂದು ಪರಿಗಣಿಸಿ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ