ಸಾವಿನೊಂದಿಗೆ (death) ಚೆಲ್ಲಾಟ ಅಂದರೆ ಇದೇ ಇರಬೇಕು ಮಾರಾಯ್ರೇ. ಈ ವಿಡಿಯೋ ನೋಡಿ, ಮಹಿಳೆಯೊಬ್ಬಳು ಕೂದಲೆಳೆಯ ಅಂತರದಲ್ಲಿ ನಿಶ್ಚಿತ ಸಾವಿನಿಂದ ಪಾರಾಗುತ್ತಾಳೆ. ಮಹಿಳೆಯ ಕುಟುಂಬವಲ್ಲದೆ ಬೇರೆ ಕೆಲವರು ಸಹ ಮತ್ತೊಂದು ಟ್ರ್ಯಾಕ್ ಗಳ (tracks) ಮೇಲೆ ನಿಂತಿರುವ ಟ್ರೈನಿಂದ ಇಳಿದಿದ್ದಾರೆ. ಯಾವುದೇ ಪ್ಲಾಟ್ ಫಾರ್ಮ್ (platform) ಕಾಣಿಸುತ್ತಿಲ್ಲವಾದ್ದರಿಂದ ಇದು ಯಾವ ಊರು ಅಂತ ನಮಗೆ ಗೊತ್ತಿಲ್ಲ. ಪ್ರಾಯಶಃ ಮಹಿಳೆ ಸೇರಿದಂತೆ ರೈಲಿನಿಂದ ಇಳಿದವರಿಗೆ ಅಲ್ಲಿಂದ ಮನೆ ಹತ್ತಿರವಾಗಬಹುದು. ಚಲಿಸದೆ ನಿಂತಿರುವ ಪಕ್ಕದ ಹಳಿಗಳ ಮೇಲೆ ಆ ಕಡೆಯಿಂದ ಮತ್ತೊಂದು ಟ್ರೈನ್ ಬರುತ್ತಿರುವುದು ವಿಡಿಯೋನಲ್ಲಿ ಕಾಣಿಸುತ್ತದೆ. ಅದು ಪಾಸ್ ಆಗುವ ಮೊದಲೇ ಹಳಿ ದಾಟಿದ್ದ ಮಹಿಳೆ ವಾಪಸ್ಸು ಬರುತ್ತಾಳೆ.
ಆಗಲೇ ಆ ಕಡೆಯಿಂದ ಟ್ರೈನು ಜೋರಾಗಿ ವಿಶಲ್ ಹಾಕುತ್ತಾ ಬಂದುಬಿಡುತ್ತದೆ. ಚೆನ್ನಾಗಿ ಗಮನಿಸಿ. ಮಹಿಳೆಯಿಂದ ಹಳಿ ದಾಟುವುದು ಕೇವಲ ಒಂದು ಕ್ಷಣ ತಡವಾಗಿದ್ದರೆ ರೈಲಿನಡಿ ಸಿಕ್ಕಿಬಿಡುತ್ತಿದ್ದಳು!
ज़िंदगी आपकी है. फ़ैसला आपका है. pic.twitter.com/eMrl65FiCj
— Awanish Sharan (@AwanishSharan) July 19, 2022
ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿರುವ ಸದರಿ ವಿಡಿಯೋ ವೈರಲ್ ಆಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ. ವಿಡಿಯೋವನ್ನು ಮಾಡಿರುವ ವ್ಯಕ್ತಿ ಹಳಿ ದಾಟುತ್ತಿರುವವರಿಗೆ ಮತ್ತೊಂದು ಕಡೆಯಿಂದ ಟ್ರೈನ್ ಬರುತ್ತಿರುವ ಬಗ್ಗೆ ಎಚ್ಚರಿಸುತ್ತಾನೆ. ಆಗಲೇ ಅವರೆಲ್ಲ ಗಾಬರಿಗೊಳಗಾಗುತ್ತಾರೆ.
ಅದೇ ಗಾಬರಿಯಲ್ಲಿ ಜನ ತಮ್ಮ ಸಾಮಾನುಗಳನ್ನು ಅತ್ತಿಂದಿತ್ತ ಬಿಸಾಡಲಾರಂಭಿಸುತ್ತಾರೆ. ಅಪಾಯದಿಂದ ಪಾರಾದ ಮಹಿಳೆ ಹಳಿ ದಾಟಲು ಪ್ರಯತ್ನಿಸುವ ಒಬ್ಬ ಹಿರಿಯ ಮಹಿಳೆಯನ್ನು (ಆಕೆಯ ಸಂಬಂಧಿಯಾಗಿರಬಹುದು) ತಡೆಯಲು ಈ ಕಡೆಗೆ ಧಾವಿಸುತ್ತಾಳೆ. ಆಕೆಯನ್ನು ಉಳಿಸುವ ಉದ್ದೇಶದಿಂದ ಆಕೆ ತನ್ನ ಜೀವವನ್ನು ತೀವ್ರ ಸ್ವರೂಪದ ಅಪಾಯಕ್ಕೊಡುತ್ತಾಳೆ. ಆಕೆಯೊಬ್ಬಳೇ ಅಂತಲ್ಲ ಹಳಿ ದಾಟಿದವರು ಕೂಡ ತಮ್ಮ ಜೀವವನ್ನು ರಿಸ್ಕ್ನಲ್ಲಿ ಹಾಕಿ ಹಾಗೆ ಮಾಡಿದ್ದಾರೆಂದರೆ ತಪ್ಪೆನಿಸದು.