ಅಡ್ವಾನ್ಸ್​ ಹಣ ಹಿಂತಿರುಗಿಸದ ಮಾಲೀಕ: ಸಿಟ್ಟಿನಲ್ಲಿ ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಗೌನ್​ಗಳನ್ನು ಕತ್ತರಿಸಿದ ಮಹಿಳೆ

ಜಿಯಾಂಗ್ ಒಟ್ಟು 92, 813 ರೂ.ಗಳ ಬಟ್ಟೆಗಳನ್ನು ಆರ್ಡ್​ರ್​ ಮಾಡಿದ್ದರು. ನಂತರ ಆರ್ಡರ್​ ಕ್ಯಾನ್ಸಲ್​ ಮಾಡಿದ ಕಾರಣ ಅಡ್ವಾನ್​​ ಆಗಿ ನೀಡಿದ್ದ 40,837 ರೂಗಳನ್ನು ಅಂಗಡಿಯವರು ಜಿಯಾಂಗ್​ ಗೆ ವಾಪಸ್​ ನೀಡಬೇಕಿತ್ತು.

ಅಡ್ವಾನ್ಸ್​ ಹಣ ಹಿಂತಿರುಗಿಸದ ಮಾಲೀಕ: ಸಿಟ್ಟಿನಲ್ಲಿ ಅಂಗಡಿಯಲ್ಲಿದ್ದ 32 ವೆಡ್ಡಿಂಗ್ ಗೌನ್​ಗಳನ್ನು ಕತ್ತರಿಸಿದ ಮಹಿಳೆ
ವಡ್ಡಿಂಗ್​ ಗೌನ್​ ಕತ್ತರಿಸುತ್ತಿರುವ ಮಹಿಳೆ
Updated By: Pavitra Bhat Jigalemane

Updated on: Jan 18, 2022 | 10:39 AM

ಆರ್ಡರ್​ ಕ್ಯಾನ್ಸಲ್​ ಮಾಡಿದ ಮೇಲೆ  ಬಟ್ಟೆ ಆಂಗಡಿಯ ಮಾಲೀಕರು ಅಡ್ವಾನ್ಸ್ (Advance)​ ಹಣ ಮರುಪಾವತಿ ಮಾಡಲು ಒಪ್ಪದ ಕಾರಣ ಮಹಿಳೆಯೊಬ್ಬರು ಶಾಪ್​ನಲ್ಲಿದ್ದ 32 ವೆಡ್ಡಿಂಗ್​ ಗೌನ್ (Wedding gwons) ​ಗಳನ್ನು ಕತ್ತರಿಸಿ ಹಾಳು ಮಾಡಿದ ಘಟನೆ ನಡೆದಿದೆ. ಚೀನಾದಲ್ಲಿ ಈ ಘಟನೆ ನಡೆದಿದೆ. ಮಹಿಳೆ ದುಬಾರಿ ಬೆಲೆಯ ಗೌನ್​ಗಳನ್ನು ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮಹಿಳೆಯನ್ನು ಜಿಯಾಂಗ್ ಎಂದು ಗುರುತಿಸಲಾಗಿದೆ. ಚೀನಾದ ನೈಋತ್ಯ ನಗರವಾದ ಚಾಂಗ್‌ಕಿಂಗ್‌ (Chongqing )ನಲ್ಲಿರುವ ವೆಡ್ಡಿಂಗ್​ ಡ್ರೆಸ್​ ಸೆಲೂನ್​ನಲ್ಲಿ ಮಹಿಳೆ ಗೌನ್​ಗಳನ್ನು ಕತ್ತರಿಸಿದ್ದಾರೆ. ಘಟನೆ ಜನವರಿ 9 ರಂದು ನಡೆದಿದ್ದು, ಈಗ ಜಗತ್ತಿಲ್ಲಡೆ ವಿಡಿಯೋ ವೈರಲ್​ ಆಗಿದೆ.

ಜಿಯಾಂಗ್ ಒಟ್ಟು 92, 813 ರೂ.ಗಳ ಬಟ್ಟೆಗಳನ್ನು ಆರ್ಡ್​ರ್​ ಮಾಡಿದ್ದರು. ನಂತರ ಆರ್ಡರ್​ ಕ್ಯಾನ್ಸಲ್​ ಮಾಡಿದ ಕಾರಣ ಅಡ್ವಾನ್​​ ಆಗಿ ನೀಡಿದ್ದ 40,837 ರೂಗಳನ್ನು ಅಂಗಡಿಯವರು ಜಿಯಾಂಗ್​ ಗೆ ವಾಪಸ್​ ನೀಡಬೇಕಿತ್ತು. ಹೀಗಾಗಿ ಅದನ್ನು ಮಹಿಳೆ ಅಂಗಡಿಯಲ್ಲಿ ಕೇಳಿದಾಗ  ಹಣ ಮರುಪಾವತಿಗೆ ಮಾಲೀಕರು  ನಿರಾಕರಿಸಿದ್ದರು ಇದರಿಂದ ಕೋಪಗೊಂಡ ಮಹಿಳೆ ಒಟ್ಟು 8,12,063 ರೂಗಳಷ್ಟಾಗುವ 32 ಗೌನ್​​ಗಳನ್ನು ಕತ್ತರಿಸಿ ಹಾಳುಮಾಡಿದ್ದಾರೆ ಎಂದು ವರದಿ ತಿಳಿಸಿದೆ.  ವಿಡಿಯೋದಲ್ಲಿ ಮಹಿಳೆ  ಒಂದಾದ ಮೇಲೆ ಒಂದರಂತೆ ಗೌನ್​ಗೆ ಕತ್ತರಿ ಹಾಕಿ ಬಟ್ಟೆಯನ್ನು ಕತ್ತರಿಸುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ಚೈನೀಸ್​ ಸೋಷಿಯಲ್ ಮೀಡಿಯಾ ನೆಟ್ವರ್ಕ್​  ಟ್ವಿಟರ್​ ಖಾತೆ ಹಂಚಿಕೊಂಡಿದೆ.

ವಿಡಿಯೋದಲ್ಲಿ ಹಿನ್ನಲೆ ಧ್ವನಿಯಲ್ಲಿ ಮತ್ತೊಮ್ಮೆ ಯೋಚಿಸಿ ಇದು ಸಾವಿರಾರು ರೂ. ಬೆಲೆ ಬಾಳುವ ಬಟ್ಟೆಯಾಗಿದೆ ಎನ್ನುತ್ತಾರೆ. ಇದಕ್ಕೆ ಮಹಿಳೆ ಬಟ್ಟೆಗಳು ಹತ್ತು ಸಾವಿರಪಟ್ಟಿದ್ದರು ಚಿಂತೆಯಿಲ್ಲ ಎನ್ನುವುದನ್ನು ಕೇಳಬಹುದು.  ಅಷ್ಟೇ ಅಲ್ಲದೆ ಮಹಿಳೆ ಕೆಂಪು ಮತ್ತು ಬಂಗಾರ ಬಣ್ಣದ ದುಬಾರಿ ಗೌನ್​ ಒಂದನ್ನು ಸಂಪೂರ್ಣವಾಗಿ ಕತ್ತರಿಸಿ​ ಹಾಳು ಮಾಡಿದ್ದಾರೆ. ಘಟನೆಯ ಬಗ್ಗೆ  ಮಾಹಿತಿ ತಿಳಿದು ಪೊಲೀಸರು ಅಂಗಡಿಗೆ  ಬಂದು ಮಹಿಳೆಯನ್ನು ಬಂಧಿಸಿದ್ದರು ನಂತರ ಅವರು ಕ್ಷಮೆ ಕೇಳಿದ ಮೇಲೆ ಆಕೆಯನ್ನು ಮನೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:

Shocking Video: ನೋಡನೋಡುತ್ತಿದ್ದಂತೆ ಮೆಟ್ರೋ ರೈಲ್ವೆ ಹಳಿ ಮೇಲೆ ಮಹಿಳೆಯನ್ನು ತಳ್ಳಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ