ತಮಿಳುನಾಡಿನ ಮಧುರೈನ ಮಹಿಳೆಯೊಬ್ಬರು ‘ಮಟನ್ ಕೈಮಾ ಕೇಕ್’ ತಯಾರಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಹುಟ್ಟು ಹಬ್ಬದ ಕೇಕ್ ತಯಾರಿಸುವ ವೇಳೆ ಅದಕ್ಕೆ ಮಟನ್ ಬಳಸುತ್ತಿರುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿಧು ಸಿಂಗ್ ಎಂಬ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಖಾತೆ(vidhus.kitchen)ಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ಒಂದು ವಾರದಲ್ಲಿ 3.6 ಮಿಲಿಯನ್ ಅಂದರೆ 30ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಸಿರಪ್ ಬಾಟಲಿ ನುಂಗಿ ಸಂಕಷ್ಟಕ್ಕೆ ಸಿಲುಕಿದ ನಾಗಪ್ಪ; ರಕ್ಷಣೆಗೆ ಧಾವಿಸಿದ ಸ್ನೇಕ್ ಹೆಲ್ಪ್‌ಲೈನ್
ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಮಟನ್ ಕೈಮಾ ತಯಾರಿಸಿ ಅದನ್ನು ಕೇಕ್ ಕ್ರೀಮ್ ನಡುವೆ ಸುರಿದು ಕೇಕ್ ತಯಾರಿಸುತ್ತಿರುವುದನ್ನು ಕಾಣಬಹುದು. ಇದುವರೆಗೂ ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿ ವಿವಿಧ ಕಾಮೆಂಟ್‌ಗಳನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸಂಯೋಜನೆಗಳ ಆಹಾರದಲ್ಲಿ ಎಂದಿಗೂ ಪ್ರಯತ್ನಿಸಬಾರದು ಎಂದು ಸಾಕಷ್ಟು ಜನರು ಕಾಮೆಂಟ್ ಮೂಲಕ ಸಲಹೆ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ