
ಈಗಿನ ಕಾಲದಲ್ಲಿ ಕೈಯಲ್ಲಿ ದುಡ್ಡಿದ್ರೆ ಮಾತ್ರ ರಾಜ ಮರ್ಯಾದೆ. ಹೀಗಾಗಿ ಒಳ್ಳೆಯ ಸಂಬಳದ ಕೆಲಸ ಗಿಟ್ಟಿಸಿಕೊಂಡು ಲೈಫ್ ಸೆಟ್ಲ್ ಆಗಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ಕಡಿಮೆ ಸಂಬಳ ಇದ್ರೂ ತೊಂದರೆ ಇಲ್ಲ, ರಾತ್ರಿ ಹಗಲು ನಿದ್ದೆ ಬಿಟ್ಟು ಕೆಲ್ಸ ಮಾಡ್ತಾರೆ. ಆದರೆ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಸೇರಿದಂತೆ ಇನ್ನಿತ್ತರ ಸಮಸ್ಯೆಗಳಿಂದ ಉದ್ಯೋಗ ತೊರೆಯುವುದಿದೆ. ಆದರೆ ಗೂಗಲ್ ಕಂಪನಿಯಲ್ಲಿ (Google company) ಕೆಲಸ ಮಾಡುತ್ತಿರುವ ಫ್ಲಾರೆನ್ಸ್ ಪೊಯ್ರೆಲ್ (Florence Poirel) ಎನ್ನುವ ಮಹಿಳೆ 3.4 ಕೋಟಿ ಸಂಬಳದ ಉದ್ಯೋಗ ತ್ಯಜಿಸಿದ್ದಾರೆ. ಅವರ ಈ ನಿರ್ಧಾರ ಹಿಂದಿನ ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಮಾಹಿತಿ ಇಲ್ಲಿದೆ
ಗೂಗಲ್‌ನ ಜ್ಯೂರಿಚ್ ಕಚೇರಿಯ ಸೀನಿಯರ್ ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಫ್ಲಾರೆನ್ಸ್ ಪೊಯ್ರೆಲ್ ಅವರು ತನ್ನ ಕೆಲಸದಿಂದಾಗಿ ಬಾಯ್ ಫ್ರೆಂಡ್ ಜೊತೆಗೆ ಸಮಯ ಕಳೆಯಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಕೆಲಸ ಹಾಗೂ ವೈಯುಕ್ತಿಕ ಜೀವನವನ್ನು ಸಾಧ್ಯವಾಗಲಿಲ್ಲ. ಇನ್ನು ಸಮತೋಲಿತ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಲು ಬಯಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿರುವುದಾಗಿ ಸಿಎನ್‌ಬಿಸಿ ವರದಿ ಮಾಡಿದೆ.
ಈ ಕಾರ್ಪೊರೇಟ್ ಜೀವನದಲ್ಲಿ ಯಾವುದೇ ಅತೃಪ್ತಿ ಹೊಂದಿಲ್ಲ. ನಾನು ಕೆಲಸ ತೊರೆಯುವಾಗ ಸ್ವಲ್ಪವೂ ದಣಿದಿರಲಿಲ್ಲ. ನಾನು ಕೆಲಸ ಮಾಡುವ ತಂಡವು ಹಾಗೂ ಕೆಲಸ ಅದ್ಭುತವಾಗಿತ್ತು, ಆದರೆ ನನಗೆ ಸ್ಪಷ್ಟತೆಯ ಕೊರತೆಯಿತ್ತು. ಆದರೆ ನಾನು ಪ್ರೀತಿಸುವ ಜನರೊಂದಿಗೆ ಕಳೆಯುವ ಸಮಯವೇ ಅತ್ಯಂತ ಮುಖ್ಯ ಎಂದು ನಾನು ಅರಿತುಕೊಂಡೆ. ಇನ್ನು ನನ್ನ ಸಂಗಾತಿಯೂ ಕೂಡ ಗೂಗಲ್‌ನಲ್ಲಿ ಕೆಲಸ ಮಾಡುತ್ತಾರೆ. ಅವರು ನನಗಿಂತ 17 ವರ್ಷ ಹಿರಿಯರು. ಅವರೊಂದಿಗೆ ಸಮಯ ಕಳೆಯಲು ನಾನು ನಿವೃತ್ತಿಯಾಗುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Viral: ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
ನಾನು ತುಂಬಾ ಸುಲಭವಾಗಿ ಬೇಸರಗೊಳ್ಳುತ್ತೇನೆ ಎಂದು ಭಾವಿಸಿದೆ. ಆದರೆ ನಾನು ನಿರ್ಧಾರ ತೆಗೆದುಕೊಂಡು ಒಂದೂವರೆ ವರ್ಷಗಳು ಕಳೆದಿವೆ, ನಾನು ಬೇಸರ ಪಡುವ ಸಮಯ ಇನ್ನೂ ಬಂದಿಲ್ಲ. ಜೀವನದಲ್ಲಿ ಕೆಲವು ವಿಷಯ ಗಳಿಂದ ಪಾಠ ಕಲಿತಿದ್ದೇನೆ. ಈ ಜೀವನ ಚಿಕ್ಕದು ಹಾಗೂ ಸುಂದರವಾಗಿದ್ದು, ನಮ್ಮ ಹೆಚ್ಚಿನ ಸಮಯವನ್ನು ಕೆಲಸದಲ್ಲೇ ಕಳೆಯುತ್ತೇವೆ. ಆದರೆ ಈ ಸಮಯವನ್ನು ತಮ್ಮ ಆತ್ಮೀಯರೊಂದಿಗೆ ಅನುಭವದೊಂದಿಗೆ ಕಳೆದರೆ ಜೀವನ ಸೊಗಸಾಗಿರುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ