AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತಲೆನೋವು ಅಂದ್ರೂ ರಜೆ ಕೊಡಲ್ಲ ಮ್ಯಾನೇಜರ್; ಸ್ಕ್ರೀನ್ ಶಾಟ್ ಹಂಚಿಕೊಂಡು ವಾಸ್ತವ ಸ್ಥಿತಿ ಬಿಚ್ಚಿಟ್ಟ ಉದ್ಯೋಗಿ

ಕೆಲಸದಲ್ಲಿರುವವರಿಗೆ ರಜೆ ಕೇಳುವುದೇ ದೊಡ್ಡ ಸವಾಲಿನ ಕೆಲಸ. ಹುಷಾರಿಲ್ಲ ಅಂದ್ರೂ ರಜೆ ಸಿಗಲ್ಲ. ಇಲ್ಲೊಬ್ಬ ಉದ್ಯೋಗಿಯೂ ಇದೇ ಪರಿಸ್ಥಿತಿಯಾಗಿದೆ. ಹೌದು, ತಲೆನೋವಿನಿಂದ ಮ್ಯಾನೇಜರ್ ಬಳಿ ರಜೆ ಕೇಳಿದ್ದು, ಆದ್ರೆ ಈ ವ್ಯಕ್ತಿಗೆ ಆಫೀಸಿಗೆ ಬಂದು ಕೆಲಸ ಮಾಡುವಂತೆ ಮ್ಯಾನೇಜರ್ ಹೇಳಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Viral: ತಲೆನೋವು ಅಂದ್ರೂ ರಜೆ ಕೊಡಲ್ಲ ಮ್ಯಾನೇಜರ್; ಸ್ಕ್ರೀನ್ ಶಾಟ್ ಹಂಚಿಕೊಂಡು ವಾಸ್ತವ ಸ್ಥಿತಿ ಬಿಚ್ಚಿಟ್ಟ ಉದ್ಯೋಗಿ
ಸಾಂದರ್ಭಿಕ ಚಿತ್ರ Image Credit source: Pinterest
ಸಾಯಿನಂದಾ
|

Updated on:Oct 08, 2025 | 11:22 AM

Share

ಏನೇ ಹೇಳಿ ನಮ್ಮ ಬಾಸ್ ಒಂದೇ ಒಂದು ರಜೆ ಕೇಳಿದ್ರು ಕೊಡಲ್ಲ. ಹುಷಾರಿಲ್ಲ ಅಂದ್ರೂ ಆಫೀಸಿಗೆ ಬನ್ನಿ ಹೇಳ್ತಾರೆ. ಈ ರೀತಿ ಹೇಳುವ ಉದ್ಯೋಗಿಗಳನ್ನು ನೀವು ನೋಡಿರುತ್ತೀರಿ. ಹೌದು, ಉದ್ಯೋಗದಲ್ಲಿರುವವರಿಗೆ (employee) ಬಾಸ್ ನಿಂದ ರಜೆ ಕೇಳುವುದೇ ಕಷ್ಟದ ಕೆಲಸ. ಒಂದು ವೇಳೆ ರಜೆ ಕೊಟ್ಟರೂ ಆ ದಿನದ ಕೆಲಸವನ್ನು ಹಿಂದಿನ ದಿನ ಮುಗಿಸಿ ಕೊಡಲೇಬೇಕು ಎಂದು ಕಂಡೀಷನ್ ಹಾಕುವುದಿದೆ. ಅನಾರೋಗ್ಯ ಸಮಸ್ಯೆ ಎಂದೇಳಿದ್ರೂ ಸುಳ್ಳು ಹೇಳುತ್ತಾರೆ ಅಂದುಕೊಳ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿಯ ಪರಿಸ್ಥಿತಿ ಹೇಗಿದೆ ಅಂದ್ರೆ ತನ್ನ ಮ್ಯಾನೇಜರ್ ಬಳಿ ಹುಷಾರಿಲ್ಲ ಎಂದು ರಜೆ ಕೇಳಿದ್ರು ಕ್ಯಾರೇ ಅನ್ನಲ್ಲ ಎನ್ನುವಂತದ್ದಾಗಿದೆ. ತಲೆನೋವಿನಿಂದಾಗಿ ಉದ್ಯೋಗಿಯೂ ಭಾರತೀಯ ಮ್ಯಾನೇಜರ್ ಬಳಿ ಅನಾರೋಗ್ಯ ರಜೆ ಕೇಳಿದ್ದು, ಆದರೆ ಮ್ಯಾನೇಜರ್ ಮಾತ್ರ ಕರುಣೆಯಿಲ್ಲದೇ ಆಫೀಸ್‌ಗೆ ಬಂದು ಕೆಲಸ ಮಾಡಿ ಖಡಕ್ ಆಗಿ ಹೇಳಿದ್ದಾರೆ. ಭಾರತೀಯ ಮ್ಯಾನೇಜರ್ ಜತೆಗೆ ತಾನು ನಡೆಸಿದ ಸಂಭಾಷಣೆಯ ಸ್ಕ್ರೀನ್ ಶಾಟ್ ಹಂಚಿಕೊಂಡು ರಜೆ ಕೇಳಿದಾಗ ಉದ್ಯೋಗ ಸ್ಥಳದಲ್ಲಿನ ವಾಸ್ತವ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್‌ ಕೊಟ್ಟ ರಿಪ್ಲೈ ನೋಡಿ

‘r/IndianWorkplace’ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ತನ್ನ ಮ್ಯಾನೇಜರ್ ಜೊತೆಗಿನ ಸ್ಕ್ರೀನ್ ಶಾಟ್ ಹಂಚಿಕೊಂಡು ರಜೆ ಕೇಳಿದಾಗ ಮ್ಯಾನೇಜರ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ನೀವಿಲ್ಲಿ ನೋಡಬಹುದು. ಈ ಪೋಸ್ಟ್ ಗೆ ನಾನು ರಜೆ ಕೇಳಿದಾಗ ನನ್ನ ಮ್ಯಾನೇಜರ್, ತಲೆನೋವು ಇದ್ರೆ ಹೇಗೆ ಕೆಲಸ ಮಾಡುತ್ತಾರೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ.

ಈ ವಾಟ್ಸಪ್ ಸ್ಕ್ರೀನ್ ಶಾಟ್ ನಲ್ಲಿ ಮ್ಯಾನೇಜರ್ ಉದ್ಯೋಗಿಗೆ ಔಷಧಿ ತೆಗೆದುಕೊಂಡು ಕಚೇರಿಗೆ ಬನ್ನಿ, ಇದು ಕೇವಲ ತಲೆನೋವು ಎಂದಿದ್ದು, ಇದಕ್ಕೆ ಉದ್ಯೋಗಿ ನಾನು ಡೋಲೋ ತೆಗೆದುಕೊಂಡು ನೋಡುತ್ತೇನೆ ಎಂದು ಉತ್ತರಿಸಿರುವುದನ್ನು ಕಾಣಬಹುದು. ಸರಿ ಆಫೀಸಿಗೆ ಬನ್ನಿ ಎಂದು ಬಾಸ್ ಹೇಳುತ್ತಿದ್ದಂತೆ ತಲೆನೋವು ಇನ್ನೂ ಇದೆ, ನಾನು ಕಚೇರಿಗೆ ಬರಲು ಆಗುವುದಿಲ್ಲ ಎಂದು ನೇರವಾಗಿ ಹೇಳುವುದನ್ನು ನೀವಿಲ್ಲಿ ನೋಡಬಹುದು. ಆದರೆ ನೀವು ಔಷಧಿ ತೆಗೆದುಕೊಳ್ಳಿ, ತಲೆನೋವಿಗೆ ಒಂದು ದಿನ ರಜೆ ಸಿಗುವುದಿಲ್ಲ. ಇದು ಶಾಲೆ ಅಲ್ಲ ಎಂದು ಖಡಕ್ ಆಗಿ ಮ್ಯಾನೇಜರ್ ಹೇಳಿದ್ದಾರೆ.

ಇದನ್ನೂ ಓದಿ
Image
ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
Image
ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ
Image
ಅಮೆರಿಕದಲ್ಲಿ ಶಿಕ್ಷಣ ಪಡೆದ್ರು ಸಿಗದ ಉದ್ಯೋಗ, ಈ ಯುವಕನ ಪರಿಸ್ಥಿತಿ ನೋಡಿ
Image
ನಿಮ್ಗೆ ಈ ಕಂಪನಿಯಲ್ಲಿ ಕೆಲಸ ಸಿಗಲ್ಲ ಎಂದು ಯುವತಿಗೆ ಹೇಳಿದ ಸಂದರ್ಶಕ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

My manager when I ask for a leave byu/Warthei inIndianWorkplace

ಕೊನೆಗೆ ಮ್ಯಾನೇಜರ್ ಪ್ರತಿಕ್ರಿಯೆಗೆ ನಾನು ಸ್ವಲ್ಪ ಸಮಯದ ಹಿಂದೆ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನೀವು ಈ ಕಂಪನಿಯ ಭಾಗವಾಗಿದ್ದೀರಿ. ಅಗತ್ಯವಿದ್ದರೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ, ಆದರೆ ಕಚೇರಿಗೆ ಬನ್ನಿ ಎಂದು ಮ್ಯಾನೇಜರ್ ಕರುಣೆಯಿಲ್ಲದೇ ಪ್ರತಿಕ್ರಿಯೆ ನೀಡುವುದನ್ನು ಕಾಣಬಹುದು. ಕೊನೆಗೆ ಮ್ಯಾನೇಜರ್ ವರ್ತನೆಯಿಂದ ಬೇಸೆತ್ತ ಉದ್ಯೋಗಿಯೂ ಮರುಮಾತನಾಡದೇ ಪ್ರಯತ್ನಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ.

ಇದನ್ನೂ ಓದಿ:Viral: ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು ನಾನು ಎಂದಿಗೂ ರಜೆ ಕೇಳುವುದಿಲ್ಲ. ಆದರೆ ನಾನು ರಜೆ ತೆಗೆದುಕೊಂಡು ತಿಳಿಸುತ್ತೇನೆ. ಸರಿದೂಗಿಸಲು ಇತರ ದಿನಗಳಲ್ಲಿ ನಾನು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಕೆಲಸದ ಸ್ಥಳದ ಇಂತಹ ವರ್ತನೆಗಳು ದೊಡ್ಡ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಕೆಲವು ವ್ಯವಸ್ಥಾಪಕರು ಉದ್ಯೋಗಿಗಳ ಆರೋಗ್ಯ ಸಮಸ್ಯೆಗಳನ್ನು ಕ್ಷುಲ್ಲಕವೆಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಆರೋಗ್ಯಕ್ಕಿಂತ ಕೆಲಸ ಮುಖ್ಯವಲ್ಲ, ಇಂತಹ ಸಂದರ್ಭಗಳು ಎದುರಾದಾಗ ರಜೆ ತೆಗೆದುಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:17 am, Wed, 8 October 25