Viral Video:’ಕೊರೋನಾ ವಡೆ’ ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ

ಮಹಿಳೆ ಒಬ್ಬರು ಕೊರೋನಾ ವಡಾ ಎನ್ನುವ ತಿನಿಸೊಂದನ್ನು ತಯಾರಿಸಿದ್ದಾರೆ. ತಿನಿಸನ್ನು ತಯಾರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರೇ ಹೌಹಾರಿದ್ದಾರೆ.

Viral Video:ಕೊರೋನಾ ವಡೆ ತಯಾರಿಸಿ ರೆಸಿಪಿ ವಿಡಿಯೋ ಹಂಚಿಕೊಂಡ ಮಹಿಳೆ
ಕೊರೋನಾ ವಡಾ
Edited By:

Updated on: Jan 22, 2022 | 6:04 PM

ಕಳೆದ ಎರಡು ವರ್ಷಗಳಿಂದ ಜಗತ್ತು ಕೊರೋನಾ (Corona)ದಿಂದ ಬೇಸತ್ತು ಹೋಗಿದೆ. ವೈರಸ್​ ಹೇಗಿರಬಹುದೆಂದು ಕಲ್ಪಿಸಿಕೊಂಡು ಹಲವಾರು ಮೇಮೇಗಳು ಬಂದುಹೋಗಿವೆ. ಇನ್ನು ಬರುತ್ತಲೇ ಇದೆ. ಏಕೆಂದರೆ ಕೊರೋನಾ ಓಮಿಕ್ರಾನ್ (Omicron)​ ರೂಪ ಪಡೆದು ಜನರನ್ನು ಕಾಡುತ್ತಿದೆ. ಈ ನಡುವೆ ಕೊರೋನಾವನ್ನೇ ವಿವಿಧ ರೀತಿಯಲ್ಲಿ  ಟ್ರೋಲ್​ ಮಾಡಲಾಗಿದೆ. ಇಲ್ಲೊಂದು ವಿಡಿಯೋ ಕೊರೋನಾ ವೈರಸ್​ ಅನ್ನೇ ನಾಚಿಸುವಂತೆ ಮಾಡಿದೆ. ಹೌದು ಮಹಿಳೆ ಒಬ್ಬರು ಕೊರೋನಾ ವಡಾ (Corona Vada) ಎನ್ನುವ ತಿನಿಸೊಂದನ್ನು ತಯಾರಿಸಿದ್ದಾರೆ. ತಿನಿಸನ್ನು ತಯಾರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರೇ ಹೌಹಾರಿದ್ದಾರೆ.

ವಿಡಿಯೋದಲ್ಲಿ ಮೊದಲು ಅಕ್ಕಿಹಿಟ್ಟಿಗೆ ಜೀರಿಗೆ, ಉಪ್ಪು, ನೀರು ಹಾಕಿ ವಿಶ್ರಣಮಾಡಿ ಬೌಲ್​ ನಲ್ಲಿ ಇರಿಸುತ್ತಾರೆ. ನಂತರ ಒಗ್ಗರಣೆ ಪಾತ್ರೆಗೆ ಒಗ್ಗರಣೆ ಹಾಕಿ ಬೇಯಿಸಿದ ಆಲೂಗಡ್ಡೆಯನ್ನು ಹಾಕುತ್ತಾರೆ. ಅದು ಆಲೂಗಡ್ಡೆ ಪಲ್ಯವಾಗುತ್ತದೆ, ನಂತರ ಕಲಸಿಟ್ಟ ಅಕ್ಕಿ ಹಿಟ್ಟಿನ ಒಳಗೆ ಆಲೂಗಡ್ಡೆ ಪಲ್ಯವನ್ನು ತುಂಬಿಸಿ ಅಕ್ಕಿಯಲ್ಲಿ ಹೊರಳಾಡಿಸುತ್ತಾರೆ. ನಂತರ ಅದನ್ನು ಕುಕ್ಕರ್​ನಲ್ಲಿಟ್ಟು ಬೇಯಿಸುತ್ತಾರೆ. ಅಕ್ಕಿಯಲ್ಲಿ ನೆನೆಸಿದ ಕಾರಣ ಅದು ಅನ್ನವಾಗಿ ಕೊರೋನಾ  ವೈರಸ್​ನಂತೆ ಕಾಣುತ್ತದೆ. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋಕ್ಕೆ ಭಾರತದ ಮಹಿಳೆ ಎಲ್ಲದರ ರುವಾರಿ ಎಂದು ಕ್ಯಾಪ್ಷನ್​ ನೀಡಲಾಗಿದೆ. ಸದ್ಯ ವಿಡಿಯೋ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.ವಿಡಿಯೋವನ್ನು mimipi ಎನ್ನುವ ಟ್ವಿಟರ್​ ಬಳಕೆದಾರರು ಹಂಚಿಕೊಂಡಿದ್ದಾರೆ, ಈ ಆಹಾರವನ್ನು ನೀವೂ ತಯಾರಿಸಿ ಸವಿಯಬಹುದಾಗಿದೆ.

ವಿವಿಧ ರೀತಿಯ ಆಹಾರಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲ ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಕೆಲವು ದಿನಗಳ ಹಿಂದೆ ನೂಡಲ್ಸ್​ನಲ್ಲಿ ಮಹಿಳೆಯೊಬ್ಬರು ಸ್ಕಾರ್ಪ್​ ಹೊಲಿದ ಮಹಿಳೆಯ ವಿಡಿಯೋ ವೈರಲ್​ ಆಗಿತ್ತು.

ಇದನ್ನೂ ಓದಿ:

Viral Video: ಮೊಬೈಲ್​ನಲ್ಲಿ ತಮ್ಮದೇ ರೀತಿ ಇರುವ ಪ್ರಾಣಿಗಳನ್ನು ನೋಡಿ ಗೊಂದಲಕ್ಕೊಳಗಾದ ಕೋತಿಗಳು

Published On - 6:03 pm, Sat, 22 January 22