ರಷ್ಯಾದಲ್ಲಿ ಮಹಿಳೆಯೊಬ್ಬರು ನಾಲ್ಕು ವರ್ಷಗಳ ಕಾಲ ತನ್ನ ಪತಿಯ ಶವದೊಂದಿದೆ ಮಲಗುತ್ತಿದ್ದು, ಪುರಾತನ ಈಜಿಪ್ಟ್ನ ಮಮ್ಮಿಯಿಂದ ಪ್ರೇರಿತವಾದ ನಿಗೂಢ ಆಚರಣೆಗಳನ್ನು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 50 ವರ್ಷದ ಸ್ವೆಟ್ಲಾನಾ ಎಂಬ ಮಹಿಳೆ ತನ್ನ ಗಂಡನ ಶವವನ್ನು ನಾಲ್ಕು ವರ್ಷಗಳಿಂದ ತಮ್ಮ ಹಾಸಿಗೆಯಲ್ಲಿ ಇಟ್ಟುಕೊಂಡಿದ್ದಾಳೆ ಮತ್ತು ಯಾರಿಗೂ ಹೇಳದಂತೆ ತನ್ನ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಳು. ಇದಲ್ಲದೇ ಯಾರಿಗಾದರೂ ಹೇಳಿದರೆ ಅನಾಥಾಶ್ರಮಕ್ಕೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಳು ಎಂಬುದು ಇದೀಗಾ ಬೆಳಕಿಗೆ ಬಂದಿದೆ.
2020ರ ಡಿಸೆಂಬರ್ನಲ್ಲಿ ಗಂಡನ ಹೆಂಡತಿಯ ನಡುವೆ ಜಗಳ ನಡೆದಿದ್ದು, ಆದರೆ ಇದಕ್ಕಿದಂತೆ ತನ್ನ ಪತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆಂದು ಮಹಿಳೆ ಹೇಳಿಕೊಂಡಿದ್ದಾಳೆ. ಆದರೆ ನಿಖರ ಕಾರಣ ಎನೆಂದು ತಿಳಿದುಬಂದಿಲ್ಲ. ಮಹಿಳೆ ತನ್ನ ಗಂಡನ ದೇಹವನ್ನು ಕಂಬಳಿಯಲ್ಲಿ ಸುತ್ತಿ ತನ್ನ ಕೋಣೆಗೆ ತೆಗೆದುಕೊಂಡು ಹೋಗಿ 4ವರ್ಷಗಳಿಂದ ತನ್ನ ಜೊತೆಗೆ ಇಟ್ಟುಕೊಂಡಿದ್ದಾಳೆ.
ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್ನ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ!
4 ವರ್ಷಗಳಿಂದ ಬೆದರಿಕೆಯಿಂದಲೇ ಜೀವನ ನಡೆಸುತ್ತಿದ್ದ11 ವರ್ಷದ ಅವಳಿ ಗಂಡು ಮಕ್ಕಳು ಮತ್ತು 17 ಮತ್ತು 8 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳನ್ನು ಭೇಟಿ ಮಾಡಿದ ಸಾಮಾಜಿಕ ಕಾರ್ಯಕರ್ತರು ಇತ್ತೀಚೆಗೆ ಶವವನ್ನು ಪತ್ತೆ ಮಾಡಿದ್ದಾರೆ. ಮನೆಯನ್ನು ಹುಡುಕಿದಾಗ, ಪೋಲೀಸರಿಗೆ ಅನೇಕ ನಿಗೂಢ ವಸ್ತುಗಳು ಪತ್ತೆಯಾಗಿವೆ. ಪತಿಯ ಪಾದಗಳಲ್ಲಿ ಈಜಿಪ್ಟ್ ಶಿಲುಬೆ, ಟ್ಯಾರೋ ಕಾರ್ಡ್‌ಗಳು, ತಾಯತಗಳು ಮತ್ತು ಪ್ರಾಣಿಗಳ ತಲೆಬುರುಡೆಗಳ ಚಿತ್ರಗಳನ್ನು ಕಂಡು ತನಿಖಾ ತಂಡ ಬೆಚ್ಚಿಬಿದ್ದಿದೆ.
4ವರ್ಷಗಳಿಂದ ಪತಿಯ ಪರಿಚಯಸ್ಥರು ಆತನ ಬಗ್ಗೆ ಕೇಳಿದಾಗ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಟಿಬೆಟ್‌ನಲ್ಲಿ ಆರೋಗ್ಯ ಪರ್ಯಾಯ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಹೇಳಿರುವುದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 7 February 24