Viral : ಮಕ್ಕಳ ಜೀವನ ತಮಗಿಂತಲೂ ಚೆನ್ನಾಗಿರಬೇಕೆಂದು ಸಾಮಾನ್ಯವಾಗಿ ಪೋಷಕರು ಬಯಸುತ್ತಾರೆ. ಆ ಪ್ರಕಾರ ಜೀವನಕ್ಕೆ ಬೇಕಾದ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸುವುದರಲ್ಲಿಯೇ ಅವರು ತೊಡಗಿಕೊಂಡಿರುತ್ತಾರೆ. ಈ ವಿಡಿಯೋ ನೋಡಿ, ತಾಯಿ ತನ್ನ ಮಗನನ್ನು ಹಾಗೇ ಒಂದು ರೌಂಡ್ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾಳೆ. ಹೇಗಿದೆ ಈ ಮನೆ ಎಂದಾಗ ಚೆನ್ನಾಗಿದೆ ಎನ್ನುತ್ತಾನೆ. ಈ ಮನೆಗೆ ಹಿತ್ತಲಿದೆಯೇ ಎಂದು ಕೇಳುತ್ತಾನೆ, ಹೌದು ಎನ್ನುತ್ತಾಳೆ. ನಂತರ ಇದು ನಮ್ಮದೇ ಮನೆ ಎನ್ನುತ್ತಾಳೆ. ಆಗ ಮಗುವಿನ ಮುಖ ನೋಡಿ…
ಅಮ್ಮ ಹೀಗೆ ಸರ್ಪ್ರೈಝ್ ಕೊಟ್ಟಿದ್ದನ್ನು ನೋಡಿ ಮಗುವಿಗೆ ಖುಷಿಯಿಂದ ಕಣ್ಣು ಉಕ್ಕುತ್ತವೆ. ಈ ವಿಡಿಯೋ ಅನ್ನು 2.6 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಎಂಥ ಎಕ್ಸ್ಪ್ರೆಷನ್! ನಿಜಕ್ಕೂ ಇದು ಬಹಳ ಅಮೂಲವಾದ ಕ್ಷಣಗಳು ಎಂದಿದ್ದಾರೆ ಒಬ್ಬರು. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಅಭಿನಂದನೆ ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ಇದು ಹೆಮ್ಮೆ ಪಡುವಂಥ ವಿಷಯ. ಮಕ್ಕಳೂ ದೊಡ್ಡ ಮನೆಗಾಗಿ ಕನಸು ಕಾಣುತ್ತಿರುತ್ತವೆ. ಹಿತ್ತಲು ಇದೆಯೇ ಎಂದು ಕೇಳುತ್ತಾನೆಂದರೆ ನೋಡಿ, ಸೂಕ್ಷ್ಮ ಮನಸಿನ ಹುಡುಗ ಇವ ಎಂದಿದ್ದಾರೆ ಇನ್ನೂ ಒಬ್ಬರು. ಈ ತನಕ ನೀವಿಟ್ಟ ಹೆಜ್ಜೆಗಳು ಸೂಕ್ತವಾಗಿವೆ ಎನ್ನುವುದಕ್ಕೆ ಈ ಕ್ಷಣಗಳೇ ಪುರಾವೆ ಎನ್ನುತ್ತಾರೆ ಮಗದೊಬ್ಬರು. ನಾನೂ ಹೀಗೊಂದು ಕನಸು ಕಂಡಿದ್ದೇನೆ. ಜೀವನದಲ್ಲಿ ಇದು ಸಾಧ್ಯವಾಗುತ್ತದೆ ಎಂದಿದ್ದಾರೆ ಯಾರೋ ಒಬ್ಬರು.
ಏನು ಅನ್ನಿಸಿತು ಈ ವಿಡಿಯೋ ನೋಡಿ ನಿಮಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ