
ವಿಶ್ವದಾದ್ಯಂತ ಕೊರೊನಾ ಹಾವಳಿಯಿಂದ ಶಾಲಾ ಕಾಲೇಜುಗಳು ಮುಚ್ಚಲ್ಪಟ್ಟವು. ಕೊವಿಡ್19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದಂತೆಯೇ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲಾಯಿತು. ಇಷ್ಟು ದಿನಗಳ ಕಾಲ ಮನೆಯಲ್ಲಿದ್ದ ಕೆಲ ಮಕ್ಕಳು ಶಾಲೆಗೆ ಹೋಗಲು ರಗಳೆ, ರಂಪಾಟ ಮಾಡುವ ಕೆಲವೊಂದಿಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆದ ಈ ವಿಡಿಯೋದ ದೃಶ್ಯವನ್ನು ಗಮನಿಸಿದರೆ, ಮಹಿಳೆ ಮಗುವನ್ನು ಶಾಲೆಗೆ ಕರೆತರುತ್ತಿದ್ದಾಳೆ. ಶಾಲೆಗೆ ಬರುವುದಿಲ್ಲ ಎಂದು ಹಠ ಮಾಡುತ್ತಿರುವ ತನ್ನ ಮಗನನ್ನು ಎತ್ತಿಕೊಂಡು ಬಂದಿದ್ದಾಳೆ. ತಾಯಿ ಮುಂದೆ ಹೋಗುತ್ತಿದ್ದಂತೆಯೇ ಹಿಂಬದಿಯಿಂದ ಇಬ್ಬರು ಬಾಲಕನನ್ನು ಎತ್ತಿಕೊಂಡು ಬರುತ್ತಿರುವ ದೃಶ್ಯ ವಿಡಿಯೋದಲ್ಲಿ ನೋಡಬಹುದು.
ಮಗ ಶಾಲೆಗೆ ಹೋಗುವುದಿಲ್ಲ ಎಂದು ಜೋರಾಗಿ ಕೂಗುತ್ತಿದ್ದಾನೆ. ಮಹಿಳೆ ಆತನನ್ನು ಶಾಲೆಗೆ ಕರೆತರಲು ಹರಸಾಹವನ್ನೇ ಪಟ್ಟಿದ್ದಾಳೆ. ಚಿಕ್ಕ ಮಕ್ಕಳ ವಿಡಿಯೋಗಳು ಹೆಚ್ಚು ಮನಸ್ಸು ಗೆಲ್ಲುವುದಂತೂ ಸತ್ಯ.
ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ತಮಾಷೆಯ ವಿಡಿಯೋ ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ. ನಮಗೆ ಶಾಲಾ ದಿನಗಳ ಹಳೆಯ ನೆನಪುಗಳೆಲ್ಲಾ ಮರುಕಳಿಸುತ್ತಿದೆ ಎಂದು ಓರ್ವರು ಹೇಳಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ:
Viral Video: ಹಾವು ನೋಡಿ ಕಂಗಾಲಾಗಿ ಕಿರುಚುತ್ತಾ ಓಡಿದ ಯುವತಿ ವಿಡಿಯೋ ವೈರಲ್
Viral Video: ಪ್ಯಾರಾಗ್ಲೈಡಿಂಗ್ ಮಾಡಿದ ಶ್ವಾನ; ನೆಟ್ಟಿಗರ ಮನಗೆದ್ದಿರುವ ಅಪರೂಪದ ವಿಡಿಯೊ ಇಲ್ಲಿದೆ
Published On - 12:52 pm, Sun, 12 September 21