Viral Video: ಪ್ರೀತಿಯಿಂದ ಸಾಕಿದ ನಾಯಿಯ ಮೇಲೆ ಭಯಾನಕ ದಾಳಿ, ಮಾಲೀಕರ ಕಣ್ಣು ಮುಂದೆಯೇ ನಡೆಯಿತು ಅನಾಹುತ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 28, 2023 | 1:34 PM

ಪ್ರೀತಿಯಿಂದ ಸಾಕಿದ ಪ್ರಾಣಿಗಳನ್ನು ಕಳೆದುಕೊಂಡಾಗ ಆಗುವ ದುಃಖ ಸಾಕಿ ನೋಡಿದವರಿಗೆ ಗೊತ್ತು. ಅಂತಹ ಮನಕಲುಕುವ ವೀಡಿಯೊ ಒಂದು ಇಲ್ಲಿದೆ ನೋಡಿ.

Viral Video: ಪ್ರೀತಿಯಿಂದ ಸಾಕಿದ ನಾಯಿಯ ಮೇಲೆ ಭಯಾನಕ ದಾಳಿ, ಮಾಲೀಕರ ಕಣ್ಣು ಮುಂದೆಯೇ ನಡೆಯಿತು ಅನಾಹುತ
ನಾಯಿ
Follow us on

ನಮ್ಮ ಮನೆಯಲ್ಲೇ ಸಾಕಿದ ಪ್ರಾಣಿಗಳಿಗೆ ಏನಾದರೂ ಸ್ವಲ್ಪ ತೊಂದರೆಯಾದರೂ ಎಷ್ಟು ಬೇಸರವಾಗುತ್ತದೆ ಎಂಬುದು ಅದನ್ನು ಲಾಲನೆ ಪಾಲನೆ ಮಾಡಿದವರಿಗೆ ಗೊತ್ತು. ಇಂತಹ ಹೃದಯ ವಿದ್ರಾವಕ ಘಟನೆ ಯುಕೆಯಲ್ಲಿ ನಡೆದಿದೆ. ಪ್ರೀತಿಯಿಂದ ಸಾಕಿದ್ದ ನಾಯಿ ಮನೆಯಿಂದ ಹೊರಗೆ ಬರುತ್ತಿದ್ದಂತೆ, ಅವರ ಮನೆಯ ಹೊರಗಿದ್ದ ಪಿಟ್ ಬುಲ್ ಜಾತಿಯ ನಾಯಿಗಳು ನಮ್ಮ ಮನೆಯ ನಾಯಿಗೆ ಕಚ್ಚಿದೆ. ಮನೆಯವರು ಈ ನಾಯಿಯನ್ನು ಪ್ರೀತಿಯಿಂದ ರಾಕಿ ಎಂದು ಕರೆಯುತ್ತಿದ್ದರು. ಈ ಅನಾಹುತದಿಂದ ನಾಯಿ ಮಾಲೀಕರು ಆಘಾತಕ್ಕೊಳಗಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ದಕ್ಷಿಣ ಲಂಡನ್​​ನ ಕ್ಯಾಂಬರ್ವೆಲ್​​ನಲ್ಲಿ ಸೋಮವಾರ ಈ ದಾಳಿ ನಡೆದಿದ್ದು, ಮಹಿಳೆ ತನ್ನ ಸಾಕು ನಾಯಿ ರಾಕಿಯೊಂದಿಗೆ ಮನೆಯಿಂದ ಹೊರಬಂದಾಗ ಮನೆಯ ಮುಂದಿದ್ದ ಎರಡು ನಾಯಿಗಳು ದಾಳಿ ಮಾಡಿದೆ. ಮಹಿಳೆ ತಕ್ಷಣ ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ, ರಾಕಿಯ ಬೆನ್ನುಮೂಳೆ ಮುರಿದಿದ್ದು ಶ್ವಾಸಕೋಶಕ್ಕೂ ಬಲವಾದ ಪೆಟ್ಟು ಬಿದ್ದ ಕಾರಣ ಅದನ್ನು ಊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಅದೇ ದಿನ ರಾತ್ರಿ ರಾಕಿ ಮನೆಯಲ್ಲೇ ಸಾವನ್ನಪ್ಪಿದೆ.

ರಾಕಿಯ ಮೇಲೆ ದಾಳಿ ಮಾಡಿದ ನಾಯಿಗಳು ಕಾರಣವಿಲ್ಲದೆ ಹೀಗೆ ಮಾಡಿವೆ. ಇದರಲ್ಲಿ ನಮ್ಮ ರಾಕಿಯದ್ದು ಯಾವುದೇ ತಪ್ಪಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಇನ್ಸ್ಟಾಗ್ರಾಮ್​​ನಲ್ಲಿ ಮಹಿಳೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಪಿಟ್ ಬುಲ್ ಜಾತಿಯ ನಾಯಿಗಳನ್ನು ಬೆಲ್ಟ್ ಹಿಡಿದು ಆ ಸ್ಥಳದಿಂದ ಎಳೆದುಕೊಂಡು ಹೋಗುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ;Viral Video: ಡಾಕ್ಟರ್ ಆದ ಪುಟ್ಟ ಹುಡುಗ! ಅವರ ಮನೆ ನಾಯಿನೇ ಅವನಿಗೆ ಪೇಶೆಂಟ್; ಹೇಗಿದೆ ನೋಡಿ ಈ ಜೋಡಿ

ರಾಕಿ ಮಾಲಕರು ಬಿಬಿಸಿಗೆ ತಿಳಿಸಿದ ವರದಿಯಲ್ಲಿ ಮಹಿಳೆ ಘಟನೆ ಬಗ್ಗೆ ವಿವರ ನೀಡಿದ್ದು, ಎರಡು ನಾಯಿಯಲ್ಲಿ ಒಂದು ನಾಯಿ ರಾಕಿಯ ಕಡೆ ಬಂದು ಅವನನ್ನು ಹಿಂದಿನಿಂದ ಹಿಡಿದುಕೊಂಡಿತು. ನಾನು ಮತ್ತು ತನ್ನ ತಂದೆ ನಾಯಿಯನ್ನು ದೂರ ಎಳೆಯಲು ಪ್ರಯತ್ನಿಸಿದ್ದೇವೆ ಆದರೆ ಅದು ಬಿಡಲೇ ಇಲ್ಲ. ರಾಕಿ ಏನು ಮಾಡಲಾಗದೆ ಕೂಗುತ್ತಲೇ ಇದ್ದ. ಬಳಿಕ ರಾಕಿ ರಕ್ತಸ್ರಾವದಿಂದ ನೆಲದ ಮೇಲೆ ಮಲಗಿದ್ದಾಗ, ಆದರೆ ಈ ಎರಡು ನಾಯಿಗಳ ಮಾಲಿಕ ತನ್ನ ನಾಯಿಯನ್ನು ಎಳೆದುಕೊಂಡು ಅಲ್ಲಿಂದ ಹೊರಟು ಹೋದರು. ನಾನು ರಾಕಿಯನ ಪಕ್ಕದಲ್ಲಿ ಕುಳಿತು ಅಳುತ್ತಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

ಈ ಬಗ್ಗೆ ರಾಕಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು. ಆದರೆ ಈ ಬಗ್ಗೆ ಪೊಲೀಸರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ. ರಾಕಿಗೆ ನ್ಯಾಯ ಕೊಡಿಸಲು ನಾಯಿ ಮತ್ತು ಅವುಗಳ ಮಾಲಕರನ್ನು ಹುಡುಕಲು ಪ್ರಯತ್ನಿಸುತ್ತೇವೆ. ನೀವು ನಮಗೆ ಸಹಾಯ ಮಾಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ;