Viral Video: ಡಾಕ್ಟರ್ ಆದ ಪುಟ್ಟ ಹುಡುಗ! ಅವರ ಮನೆ ನಾಯಿನೇ ಅವನಿಗೆ ಪೇಶೆಂಟ್; ಹೇಗಿದೆ ನೋಡಿ ಈ ಜೋಡಿ

ಒಂದು ಮುದ್ದಾದ ವೀಡಿಯೋದಲ್ಲಿ ಪುಟ್ಟ ಹುಡುಗ ವೈದ್ಯನಂತೆ ನಟಿಸುತ್ತಾ ತನ್ನ ನಾಯಿಯ ತಪಾಸಣೆ ಮಾಡುತ್ತಿದ್ದಾನೆ. ಇವರಿಬ್ಬರ ಜೋಡಿ ನೋಡಿದವರು ಮಂತ್ರಮುಗ್ಧ ರಾಗಿದ್ದಾರೆ. ವಿಡಿಯೋ ಮುಗಿಯೋದೇ ಗೊತ್ತಾಗಲ್ಲ ಎಷ್ಟು ಚೆನ್ನಾಗಿದೆ ಈ ವಿಡಿಯೋ.

Viral Video: ಡಾಕ್ಟರ್ ಆದ ಪುಟ್ಟ ಹುಡುಗ! ಅವರ ಮನೆ ನಾಯಿನೇ ಅವನಿಗೆ ಪೇಶೆಂಟ್; ಹೇಗಿದೆ ನೋಡಿ ಈ ಜೋಡಿ
Viral VideoImage Credit source: Twitter
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on:Apr 27, 2023 | 7:04 PM

ನೀವು ಬೆಳಿಗ್ಗೆಯಿಂದ ಸಪ್ಪಗಿದ್ದೀರಾ? ಹಾಗಾದರೆ ಈ ವಿಡಿಯೋ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ಒಂದು ಪುಟ್ಟ ಹುಡುಗ ತುಂಬಾ ಚೆನ್ನಾಗಿ ವೈದ್ಯರಂತೆ ನಟಿಸುತ್ತಾ ತಮ್ಮ ಮನೆಯ ನಾಯಿಯ ತಪಾಸಣೆ ಮಾಡುತ್ತಿದ್ದಾನೆ. ನೀವು ಈ ವೀಡಿಯೋವನ್ನು ನೋಡಿ ಮುಗಿಸುವುದರೊಳಗೆ ನಿಮ್ಮ ಮುಖದ ಮೇಲೆ ಒಂದು ವಿಶಾಲವಾದ ನಗು ಮೂಡದೆ ಇರೋದಕ್ಕೆ ಸಾಧ್ಯನೇ ಇಲ್ಲ.

ಈ ಮುದ್ದಾದ ವೀಡಿಯೊವನ್ನು @buitengebieden ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಾಯಿ ಮತ್ತು ಮಗು ಆಟವಾಡುವ ಪ್ರದೇಶದಲ್ಲಿ ಕುಳಿತಿರುವುದನ್ನು ತೋರಿಸಲಾಗುತ್ತದೆ. ಹುಡುಗ ಬೆಂಚಿನ ಮೇಲಿ ಕುಳಿತುಕೊಂಡಿದ್ದು ನಾಯಿ ನೆಲದ ಮೇಲೆ ಅವನನ್ನೇ ನೋಡುತ್ತಾ ಕುಳಿತಿದೆ. ವೀಡಿಯೋ ಮುಂದುವರಿಯುತ್ತಿದಂತೆ ಆ ಹುಡುಗ ತನ್ನ ಪಕ್ಕದಲ್ಲಿರುವ ಆಟಿಕೆಗಳನ್ನು ಒಂದೊಂದಾಗಿ ತೆಗೆದುಕೊಂಡು ತನ್ನ ಮುದ್ದಾದ ನಾಯಿಯ ತಪಾಸಣೆ ಮಾಡುತ್ತಿರುವಂತೆ ನಟಿಸುತ್ತಿದ್ದಾನೆ. ಈ ವೀಡಿಯೋ ಹಂಚಿಕೊಂಡವರು ಇದಕ್ಕೆ ಮುದ್ದಾದ ಶೀರ್ಷಿಕೆಯನ್ನೂ ನೀಡಿದ್ದು “ಭವಿಷ್ಯದ ಪಶುವೈದ್ಯರು ಮತ್ತು ಅವರ ರೋಗಿ” ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 15 ನಿಮಿಷಗಳಲ್ಲಿ ಎಟಿಎಂ ಒಡೆಯುವುದನ್ನು ಯುವಕರಿಗೆ ಹೇಳಿಕೊಟ್ಟ ‘ಎಟಿಎಂ ಬಾಬಾ’; ಲಕ್ನೋ ಪೊಲೀಸರು ಶಾಕ್

ಈ ಪೋಸ್ಟ್ ಈಗಾಗಲೇ ಮೂರು ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಹಲವಾರು ಮಂದಿ ಶೇರ್ ಮಾಡಿದ್ದು ಅತೀ ಹೆಚ್ಚು ಲೈಕ್ ಮತ್ತು ಕಾಮೆಂಟ್ ಗಳನ್ನು ಸಹ ಹೊಂದಿದೆ. ಈ ವೀಡಿಯೋಗೆ ಕಾಮೆಂಟ್ ಮಾಡಿದ ಹಲವಾರು ಜನ ಈ ನಾಯಿ ಮುದ್ದಾಗಿದೆ ನಮಗೆ ಬೇಕು ಎಂದಿದ್ದಾರೆ. ಇನ್ನು ಕೆಲವು ಬಳಕೆದಾರರು “ಮುದ್ದಾದ ಹುಡುಗ ಮತ್ತು ಅವನ ನಾಯಿ, ಅದನ್ನು ಪ್ರೀತಿಸಿ!” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ನಾಯಿಗೆ ತುಂಬಾ ತಾಳ್ಮೆ ಇದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ;

Published On - 7:04 pm, Thu, 27 April 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ