ಕೋಚೆಲ್ಲಾ ಸಂಗೀತೋತ್ಸವದಲ್ಲಿ ಜೆಫ್ ಬೆಜೋಸ್; ಅಮೆಜಾನ್‌ನಲ್ಲಿ ಬೆಜೋಸ್ ಧರಿಸಿದ ಶರ್ಟ್ ಬೆಲೆ ನೋಡಿ ನೆಟ್ಟಿಗರು ಶಾಕ್!
ಅಮೆಜಾನ್ ಸಿಇಒ ಜೆಫ್ ಬೆಜೋಸ್ ಮತ್ತು ಅವರ ಗರ್ಲ್ ಫ್ರೆಂಡ್ ಲಾರೆನ್ ಸ್ಯಾಂಚೆಜ್ ಅವರು ಕೋಚೆಲ್ಲಾ ವ್ಯಾಲಿ ಮ್ಯೂಸಿಕ್ ಅಂಡ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ ಬ್ಯಾಡ್ ಬನ್ನಿ ಪ್ರದರ್ಶನದಲ್ಲಿ ಪಾಲ್ಗೊಂಡರು. ಆದರೆ ಜೆಫ್ ಬೆಜೋಸ್ ಧರಿಸಿದ ‘$12 ಶರ್ಟ್’ ಎಂದು ನೆಟ್ಟಿಗರ ಗಮನ ಸೆಳೆದಿದೆ
ಅಮೆಜಾನ್ ಸಿಇಒ (Amazon CEO) ಮತ್ತು ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಇತ್ತೀಚೆಗೆ ಮುಕ್ತಾಯಗೊಂಡ ಕೋಚೆಲ್ಲಾ ವ್ಯಾಲಿ ಸಂಗೀತ ಮತ್ತು ಕಲಾ ಉತ್ಸವದಲ್ಲಿ (Coachella Valley Music and Arts Festival) ಅವರ ಗೆಳತಿ ಲಾರೆನ್ ಸ್ಯಾಂಚೆಜ್ (Lauren Sanchez)ಅವರೊಂದಿಗೆ ಭಾಗವಹಿಸಿದ್ದರು ಆದರೆ ಬೆಜೋಸ್ ಧರಿಸಿದ 981 ರೂ. ಬೆಲೆ ಬಾಳುವ ಹವಾಯಿಯನ್ ಶರ್ಟ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದೆ. ಜೆಫ್ ಬೆಜೋಸ್ ಮತ್ತು ಅವರ ಗೆಳತಿ ಬಹುಶಃ ಬ್ಯಾಡ್ ಬನ್ನಿಯ ರಹಸ್ಯ ಅಭಿಮಾನಿಗಳಾಗಿರಬಹುದು ಅಥವಾ ರಾಪರ್‌ನ ಕೋಚೆಲ್ಲಾ ಪ್ರದರ್ಶನದ ಸಮಯದಲ್ಲಿ ಕ್ರಿಸ್ ಜೆನ್ನರ್ ಮತ್ತು ಕೋರೆ ಗ್ಯಾಂಬಲ್ ಅವರೊಂದಿಗಿನ ಈ ಜೋಡಿಯ ಸಂವಹನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಬದಲು, ನೆಟ್ಟಿಗರು $ 125 ಶತಕೋಟಿ ಆಸ್ತಿಯ ಒಡೆಯ ಸಾಮಾನ್ಯ ಚಿಟ್ಟೆ ಪ್ರಿಂಟ್ ಇರುವ ಶರ್ಟ್ ಧರಿಸಿರುವುದರ ಬಗ್ಗೆ ಜನ ಹೆಚ್ಚು ಮಾತನಾಡಿದ್ದಾರೆ.
ಇದಕ್ಕೆ ಕಾರಣ, ರೆಡಿಟ್ನ ಬಳಕೆದಾರರು ಜೆಫ್ ಧರಿಸಿದ ಹವಾಯಿಯನ್ ಶರ್ಟ್ ಅನ್ನು ಅಮೆಜಾನ್ ಅಲ್ಲಿ ಹುಡುಕಿದಾಗ ಅವರಿಗೆ ಅದೇ ಪ್ರಿಂಟ್ ಶರ್ಟ್ ಕೇವಲ $12 ಡಾಲರ್ಗೆ ಸಿಗುತ್ತಿರುವುದು ಕಂಡುಬಂದಿದೆ, ಅಂದರೆ ಕೇವಲ ರೂ. 981. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬೆಜೋಸ್ ಅವರ ಈ ಆಯ್ಕೆ ಜನರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಹಾಗು ಕೆಲವರು ಪ್ರಶಮಸೆಯನ್ನು ವ್ಯಕ್ತಪಡಿಸಿದ್ದಾರೆ.
Absolutely love that Bezos went to Coachella and did the same thing I would do – wore a $15 Hawaiian shirt from Amazon.https://t.co/CcQIDK2uGV pic.twitter.com/x8zGzWs5S9
— Sheel Mohnot (@pitdesi) April 24, 2023
ಇನ್ನು ಕೆಲವರು ನೋಡಲು ಒಂದೇ ತಾರಾ ಇದ್ದರು ಈ ಉಡುಪಿನ ಬೆಲೆ ಇಷ್ಟು ಕಡಿಮೆ ಇರಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಮತ್ತೊಬ್ಬ ಬಳೆಕೆದಾರ, “ಜೆಫ್ ನಾನು ಮಾಡುವ ಕೆಲಸವನ್ನೇ ಮಾಡಿದ್ದಾರೆ, ನಾನು ಕೂಡ ಈ ರೀತಿಯ ಉಡುಪನ್ನೇ ಆರಿಸಿಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತನ್ನ 6 ಪತ್ನಿಯರೊಂದಿಗೆ ಒಟ್ಟಿಗೆ ಮಲಗಲು 81 ಲಕ್ಷ ರೂ ವೆಚ್ಚದ ಹಾಸಿಗೆ ಖರೀದಿಸಿದ ವ್ಯಕ್ತಿ
TMZ ವರದಿಯ ಪ್ರಕಾರ, ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ಅವರು ಏಪ್ರಿಲ್ 21 ರಂದು ಖಾಸಗಿ SUV ಯಲ್ಲಿ ಇಂಡಿಯೊದಲ್ಲಿನ ಕೋಚೆಲ್ಲಾ ಸ್ಥಳವಾದ ಎಂಪೈರ್ ಪೋಲೊ ಕ್ಲಬ್ ಅಲ್ಲಿ ಕಾಣಿಸಿಕೊಂಡರು. ನಂತರ ಈ ಜೋಡಿ ಮುಖ್ಯ ವೇದಿಕೆಗೆ ಹಿಂತಿರುಹಗಳು ರಹಸ್ಯ ಮಾರ್ಗದಲ್ಲಿ, ಬೆಂಗಾವಲು ಮೂಲಕ ಹಿಂತಿರುಗಿದರು, ಅಲ್ಲಿ ಅವರು ಬ್ಯಾಡ್ ಬನ್ನಿ ಈವೆಂಟ್‌ನ ಪಾಲ್ಗೊಂಡರು.