Video Viral: ಸಫಾರಿಗೆ ಹೋದ ಪ್ರವಾಸಿಗರ ಮೇಲೆ ಎಗರಿದ ಹುಲಿ! ಇಲ್ಲಿದೆ ಭಯಾನಕ ವೀಡಿಯೊ

ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ನೀರಿಳಿಸಿದೆ. ವಾಹನದಲ್ಲಿದ್ದವರು ಜೀವ ಉಳಿಸಿಕೊಂಡು ಮನೆಗೆ ಬಂದರೆ ಸಾಕು ಎಂಬಂತೆ ಮಾಡಿ ಕಾಡಿನೊಳಗೆ ಹೋಗಿದೆ. ಈ ವಿಡಿಯೋ ಎಲ್ಲೆಡೆ ವೈರೆಲ್ ಆಗಿದೆ.

Video Viral: ಸಫಾರಿಗೆ ಹೋದ ಪ್ರವಾಸಿಗರ ಮೇಲೆ ಎಗರಿದ ಹುಲಿ! ಇಲ್ಲಿದೆ ಭಯಾನಕ ವೀಡಿಯೊ
ವೈರಲ್ ವೀಡಿಯೊ
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on:Oct 26, 2023 | 12:39 PM

ಸಫಾರಿ ಹೋಗುವುದೇ ಪ್ರಾಣಿಗಳನ್ನು ನೋಡಲು. ಆದರೆ ಕೆಲವು ಬಾರಿ ಹೆಚ್ಚು ಪ್ರಾಣಿಗಳು ಕಾಣಸಿಗುವುದಿಲ್ಲ. ಅದೃಷ್ಟ ಚೆನ್ನಾಗಿದ್ದರೆ ಹುಲಿ, ಸಿಂಹ ನೋಡಲು ಸಿಗಬಹುದು. ಆದರೆ ಇಲ್ಲೊಂದಿಷ್ಟು ಪ್ರವಾಸಿಗರಿಗೆ ಸಫಾರಿಗೆ ಹೋದ ಸಂದರ್ಭದಲ್ಲಿ ಮೈ ಜುಮ್ ಎನಿಸುವ ಘಟನೆ ನಡೆದಿದೆ. ಸಫಾರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರ ಗುಂಪೊಂದು ಅರಣ್ಯದ ಸೌಂದರ್ಯವನ್ನು ನೋಡುತ್ತ ಮುಂದೆ ಸಾಗುತ್ತಿದ್ದಾಗ ಅಲ್ಲಿಯೇ ಹಿಂಡಿನಲ್ಲಿದ್ದ ಹುಲಿ ಕೋಪಗೊಂಡು ದಾಳಿ ಮಾಡಲು ವಾಹನದ ಬಳಿ ಬಂದಿದೆ. ಡ್ರೈವರ್ ಅದು ದೂರದಲ್ಲಿ ಬರುವುದನ್ನು ನೋಡಿ ವಾಹನವನ್ನು ಹಿಂದಕ್ಕೆ ಮುಂದಕ್ಕೆ ವಾಹನ ಚಲಿಸಲು ಪ್ರಯತ್ನಿಸಿದ್ದು ಆದರೂ ವಾಹನದ ಬಳಿ ಬಂದು ಹುಲಿ ಘರ್ಜಿಸಿದೆ. ಇದರಿಂದ ಭಯಗೊಂಡ ವಾಹನದಲ್ಲಿ ಕುಳಿತ ಪ್ರವಾಸಿಗರು ಕಿರುಚಿದ್ದಾರೆ. ಈ ಭಯಾನಕ ದೃಶ್ಯವನ್ನು ಪ್ರವಾಸಿಗರೊಬ್ಬರು ವೀಡಿಯೊ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಭಾರೀ ವೈರಲ್ ಆಗಿದೆ. ಇಂಡಿಯಾ ಟುಡೇ ಗ್ರೂಪ್ ಪ್ರಕಾರ, ಈ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ನಡೆದಿದೆ.

ಇದನ್ನೂ ಓದಿ:Viral video: ಮಾವಿನಹಣ್ಣಿನ ಹಪ್ಪಳ ತಯಾರಿಸುವುದು ಹೇಗೆ? ಈ ವೈರಲ್ ವೀಡಿಯೊ ನೋಡಿ

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ವೀಡಿಯೊವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾಹನದಲ್ಲಿದ್ದ ವ್ಯಕ್ತಿಗಳು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿಯನ್ನು ಕಾಣುತ್ತಿದ್ದಂತೆ ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲು ಪ್ರಯತ್ನ ಮಾಡಿದ್ದಾರೆ. ಬಳಿಕ ನೋಡ ನೋಡುತ್ತಿದಂತೆ ಹುಲಿಯ ಜೋರಾಗಿ ಘರ್ಜಿಸುತ್ತಾ ವಾಹನದ ಬಳಿ ಬರುವಾಗ ಪ್ರವಾಸಿಗರು ಕಂಗಾಲಾಗಿ ಚೀರಿಕೊಂಡಿದ್ದಾರೆ. ಸಫಾರಿ ವಾಹನದ ಚಾಲಕ ಸ್ಮಾರ್ಟ್ ಆಗಿ ವಾಹನ ಚಲಾಯಿಸಿಕೊಂಡು ಬಂದಿದ್ದು, ಇದಕ್ಕೆ ಕೋಪಗೊಂಡ ಹುಲಿ ಮತ್ತೆ ಅಲ್ಲಿಂದ ಕಾಡಿನತ್ತ ಹೋಗಿದೆ. ಕಾಡಿನ ಪ್ರಾಣಿಗಳನ್ನು ನೋಡುವ ಉತ್ಸಾಹದಲ್ಲಿ ಕೆಲವೊಂದು ಬಾರಿ ಅಪಾಯವನ್ನು ಉಂಟು ಮಾಡಬಹುದು ಮತ್ತು ಅಲ್ಲಿ ಪ್ರಾಣಿಗಳ ಸಂಚಾರ ಹೇಗಿದೆ. ಅಲ್ಲಿ ವಾಸ ಮಾಡುತ್ತಿರುವ ಜನರ ದಿನನಿತ್ಯ ಚಟುವಟಿಕೆಯಲ್ಲಿ ಇಂತಹ ಅಪಾಯಗಳು ಹೇಗೆ ಬರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಸುಸಂತ ನಂದಾ ಈ ವಿಡಿಯೋ ಜತೆಗೆ ಇದಕ್ಕೆ ಶೀರ್ಷಿಕೆಯನ್ನು ನೀಡಿದ್ದಾರೆ. “ಸನ್ಯಾಸಿ ಕಿರಿಕಿರಿಗೊಂಡಿದ್ದಾರೆ. ಪ್ರತಿ ದಿನ ಗೊತ್ತುಪಡಿಸಿದ ಸಮಯದಲ್ಲಿ ಜನರು ನಿಮ್ಮ ಮನೆಗೆ ನುಗ್ಗಿದರೆ ನೀವು ಏನು ಮಾಡುತ್ತೀರಿ?” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 41 ಸಾವಿರ ಜನ ವೀಕ್ಷಿಸಿದ್ದು., ಹಲವಾರು ಬಳಕೆದಾರರು ಈ ವಿಡಿಯೋಗೆ ಕೆಮೆಂಟ್ ಮಾಡಿದ್ದು ಸರಕಾರ ಈ ನಿಯಮ ಬದಲಾಯಿಸಿ ಜನರು ಸಫಾರಿಗೆ ಹೋಗುವುದನ್ನು ತಡೆಯಬೇಕು ಎಂದಿದ್ದಾರೆ. ಇನ್ನು ಕೆಲವು ಬಳಕೆದಾರರು ಇಂತಹ ಸಫಾರಿಗಳಿಂದಲೇ ಹಣ ಬರುತ್ತಿದ್ದು ಹುಲಿಗಳ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ಮಾಡಿ

Published On - 1:32 pm, Thu, 27 April 23

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ