Viral video: ಮಾವಿನಹಣ್ಣಿನ ಹಪ್ಪಳ ತಯಾರಿಸುವುದು ಹೇಗೆ? ಈ ವೈರಲ್ ವೀಡಿಯೊ ನೋಡಿ

ನಾವು ಬಾಲ್ಯದಲ್ಲಿ ಇಷ್ಟಪಟ್ಟು ತಿನ್ನುತ್ತಿದ್ದ ಮಾವಿನಹಣ್ಣಿನ ಪಾಪಡ್ ಕ್ಯಾಂಡಿಯನ್ನು ಯಾವ ರೀತಿ ಮಾಡುವುದು ಎಂದು ನಿಮಗೆ ತಿಳಿದಿದೆಯೇ? ಫುಡ್ ಎಕ್ಸ್ಫ್ಲೋರರ್ ಲಲಿತ್ ಎಂಬ ಇನ್ಸ್ಟಾಗ್ರಾಮ್ ಪೇಜ್​​ನಲ್ಲಿ ಹರಿಬಿಡಲಾದ ಮಾವಿನಹಣ್ಣಿನ ಹಪ್ಪಳ ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

Viral video: ಮಾವಿನಹಣ್ಣಿನ ಹಪ್ಪಳ ತಯಾರಿಸುವುದು ಹೇಗೆ? ಈ ವೈರಲ್ ವೀಡಿಯೊ ನೋಡಿ
ವೈರಲ್ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 27, 2023 | 11:57 AM

ಹಣ್ಣುಗಳ ರಾಜ ಎಂದು ಮಾವಿನಹಣ್ಣಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಈ ಕಾಲೋಚಿತ ಹಣ್ಣನ್ನು ಜನರು ಚಪ್ಪರಿಸಿಕೊಂಡು ತಿನ್ನುತ್ತಾರೆ. ದೇಶ ವಿದೇಶಗಳಲ್ಲಿ ತರಹೇವಾರಿ ಪ್ರಭೇದದ ಮಾವಿನಹಣ್ಣುಗಳನ್ನು ಬೆಳೆಸಲಾಗುತ್ತದೆ. ಅಲ್ಪೊನ್ಸೊ, ಚೌಸಾ, ಬಾದಾಮಿ, ಸಫೇದಾ, ನೀಲಂ, ರಸಪುರಿ, ದಶೇರಿ, ಹಿಮ್ಸಾಗರ್, ಲಾಂಗ್ರಾ, ಕೇಸರ್, ತೋತಾಪುರಿ ಇತ್ಯಾದಿ ಅನೇಕ ಬಗೆಯ ಮಾವಿನ ಹಣ್ಣುಗಳಿವೆ. ಒಂದಕ್ಕಿಂತ ಒಂದು ವಿಭಿನ್ನ ರುಚಿಯನ್ನು ನೀಡುತ್ತದೆ. ಈ ಸಿಹಿ ಮತ್ತು ಹುಳಿ ಮಿಶ್ರಿತವಾದ ರಸಭರಿತ ಹಣ್ಣು ಬೇಸಿಗೆಯಲ್ಲಿ ತಿನ್ನಲು ಉತ್ತಮವಾಗಿದೆ. ಜೊತೆಗೆ ಇದರಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಮಾವಿನ ಹಣ್ಣಿನ ಜ್ಯೂಸ್ ಮಿಲ್ಕ್ ಶೇಕ್, ಐಸ್ ಕ್ರೀಮ್, ಕೇಕ್, ಚಾಕೊಲೇಟ್, ಹಪ್ಪಳ ಹೀಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಹಪ್ಪಳವು ಆಮ್ ಪಾಪಡ್ ಅಂತಾನೆ ದೇಶದಾತ್ಯಂತ ಹೆಸರುವಾಸಿಯಾಗಿದೆ. ಇನ್ನೂ ಈ ಪಾಪಡ್ ಕ್ಯಾಂಡಿ ಅಂತೂ ಎಲ್ಲರಿಗೂ ಅಚ್ಚುಮೆಚ್ಚು. ಕೆಲವು ಹಪ್ಪಳಗಳು ಸಿಹಿ, ಹುಳಿ ಮತ್ತು ಖಾರ ಮಿಶ್ರಿತವಾಗಿದ್ದರೆ, ಒಂದಿಷ್ಟು ಮಾವಿನ ಹಣ್ಣಿನ ಹಪ್ಪಳಗಳು ಬರೀ ಸಿಹಿಯಾಗಿರುತ್ತವೆ. ಈ ಹಪ್ಪಳಗಳನ್ನು ಕ್ಯಾಂಡಿ ರೀತಿಯಲ್ಲಿ ತಿನ್ನುತ್ತಾರೆ. ಆದರೆ ಅದನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಇತ್ತೀಚಿಗೆ ಮಾವಿನಹಣ್ಣಿನ ಹಪ್ಪಳ ತಯಾರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫುಡ್ ಎಕ್ಸ್ಫ್ಲೋರರ್ ಲಲಿತ್ ಎಂಬ ಇನ್ಸ್ಟಾಗ್ರಾಮ್ ಪೇಜ್​​​ನಲ್ಲಿ ಮಾವಿನಹಣ್ಣಿನ ಹಪ್ಪಳ ತಯಾರಿಸುವ ವಿಡಿಯೋವನ್ನು ಮೋಸ್ಟ್ ಫೆಮಸ್ ಮ್ಯಾಂಗೋ ಪಾಪಡ್ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್ ಮಾಡಲಾಗಿದೆ. ಹಪ್ಪಳವನ್ನು ತಯಾರಿಸುವ ಪ್ರತಿಯೊಂದು ಹಂತವನ್ನು ಕೂಡಾ ವಿವರವಾಗಿ ಈ ವಿಡಿಯೋದಲ್ಲಿ ಕಾಣಬಹುದು. ಮೊದಲಿಗೆ ಕಾರ್ಖಾನೆಯ ಕೆಲಸಗಾರರು ಮಾವಿನಹಣ್ಣನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಕಟ್ ಮಾಡಿ, ಇನ್ನೊಬ್ಬ ಕೆಲಸಗಾರರಿಗೆ ತುಂಡರಿಸಿದ ಮಾವಿನಹಣ್ಣುಗಳನ್ನು ವರ್ಗಾಯಿಸುತ್ತಾರೆ. ಅವರು ಆ ಮಾವಿನಹಣ್ಣನ್ನು ಒಂದು ಯಂತ್ರಕ್ಕೆ ಹಾಕುತ್ತಾರೆ. ಆ ಯಂತ್ರದಲ್ಲಿ ಮಾವಿನಹಣ್ಣಿನ ಪ್ಯೂರಿ ತಯಾರಾಗಿ ಅದು ದೊಡ್ಡ ಪಾತ್ರೆಯೊಳಗೆ ಬಂದು ಬೀಳುತ್ತಾರೆ. ಆ ಪಾತ್ರೆಯಿಂದ ರಸವನ್ನು ತೆಗೆದು ಇನ್ನೊಂದು ಪಾತ್ರೆಗೆ ವರ್ಗಾಯಿಸಿ ಅದಕ್ಕೆ ಸಕ್ಕರೆಯನ್ನು ಸುರಿದು ತಮ್ಮ ಕೈಗಳಿಂದ ಅದನ್ನು ಬೆರೆಸುತ್ತಾರೆ. ನಂತರ ಚೆನ್ನಾಗಿ ಬಿಸಿಲು ಬೀಳುವ ಪ್ರದೇಶದಲ್ಲಿ ಒಂದಷ್ಟು ದೊಡ್ಡ ಹಾಳೆಗಳನ್ನು ಹಾಕಿ ಅದರ ಮೇಲೆ ಈ ಪ್ಯೂರಿಯನ್ನು ಕೆಲಸಗಾಗರು ಸುರಿಯುತ್ತಾರೆ. ಮತ್ತು ಅವುಗಳನ್ನು ಚೆನ್ನಾಗಿ ಒಂದೇ ರೀತಿಯಲ್ಲಿ ಹರಡುತ್ತಾರೆ. ಮತ್ತು ಇನ್ನೊಂದು ಕಡೆಯಲ್ಲಿ ಒಣಗಿಸಿದ ಹಪ್ಪಳಗಳನ್ನು ಒಂದೇ ರೀತಿಯಲ್ಲಿ ತುಂಡರಿಸಿ ಅವುಗಳನ್ನು ಮಾರಾಟ ಮಾಡಲು ಚೆನ್ನಾಗಿ ಪ್ಯಾಕ್ ಮಾಡಿ ಇರಿಸಲಾಗಿದೆ.

View this post on Instagram

A post shared by @foodexplorerlalit

ಇದನ್ನೂ ಓದಿ:Viral Video: ಸ್ವತಃ ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದ ಆನೆ, ಇಲ್ಲಿದೆ ವೈರಲ್​​ವೀಡಿಯೊ

ಈ ವಿಡಿಯೋ 10.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 417 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಇನ್ನು ಕೆಲವರು ಹಪ್ಪಳ ತಯಾರಿಸುವಾಗ ನಿರ್ಲಕ್ಷಿಸಲಾದ ನೆರ್ಮಲ್ಯದ ಕುರಿತು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಕಾರ್ಮಿಕರ ಪರಿಶ್ರಮಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾದರು ಇಲ್ಲಿ ನೈರ್ಮಲ್ಯವು ಶೂನ್ಯವಾಗಿದೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾದರು ನೈರ್ಮಲ್ಯ ಸತ್ತು ಹೋಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಅವರೆಲ್ಲರೂ ಕಷ್ಟಪಟ್ಟು ದುಡಿಯುವ ಹಳ್ಳಿಯ ಜನರು, ಅದಕ್ಕಾಗಿಯೇ ಅವರು ನಮಗಿಂತ ಹೆಚ್ಚು ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಮತ್ತು ನಾವು ಯಾವಾಗಲೂ ನೈರ್ಮಲ್ಯದ ಬಗ್ಗೆ ಯೋಚಿಸುತ್ತೇವೆ. ಆದರೆ ನಾವುಗಳು 35 ವರ್ಷಕ್ಕಿಂತ ಮೊದಲೇ ಸಾಯುತ್ತಿದ್ದೇವೆ. ಎಂದು ಕಾರ್ಮಿಕರ ಶ್ರಮಕ್ಕೆ ಬೆಂಬಲ ಸೂಚಿಸಿ ಕಮೆಂಟ್ ಮಾಡಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ