ಸಾಮಾನ್ಯವಾಗಿ ಎಲ್ಲರ ಮನೆಯ ಫ್ರಿಜ್ನಲ್ಲಿ ಮೊಸರು, ಹಾಲು, ಹಣ್ಣು, ತರಕಾರಿಗಳು, ಉಪ್ಪಿನಕಾಯಿ ಇತರೆ ಆಹಾರ ಪದಾರ್ಥಗಳಿಂದ ತುಂಬಿರುತ್ತದೆ. ಆದರೆ ಈ ಮಹಿಳೆಯ ಮನೆಯ ಫ್ರಿಜ್ನಲ್ಲಿತ್ತು ಸತ್ತ ಪ್ರಾಣಿಗಳು. ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನ 40 ವರ್ಷದ ಮಹಿಳೆ ಎಮಿಲಿ ಉಲುಸಿಯಸ್. ಈಕೆ ಮೊದಲು ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.
ಇದಾಗ ಬಳಿಕ ಆಕೆ ಸತ್ತ ಪ್ರಾಣಿಗಳ ಶವಗಳ ಸಂಗ್ರಹಣೆಯನ್ನು ಮಾಡುತ್ತಾರೆ. ಆದರೆ ಯಾವುದೇ ಕೆಟ್ಟ ಉದ್ದೇಶಗಳು ಇವರಲ್ಲಿಲ್ಲ, ಹಾಗೆಯೇ ಇವರು ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದಿಲ್ಲ.
ಮೃತ ಪ್ರಾಣಿಗಳನ್ನು ಕಲಾಕೃತಿಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ಅವರಿಗಿದೆ. ಪ್ರಾಣಿಗಳು ಈಗ ಕೊಳೆಯುವ ಬದಲು ಸುಂದರ ಕಲಾಕೃತಿಯಾಗಿ ಮಾರ್ಪಡುತ್ತಿದೆ. ಹಾವುಗಳನ್ನು ಹಿಡಿದು ಗಾಜಿನ ಜಾಡಿಗಳಲ್ಲಿ ಹಾಗೂ ಸುಗಂಧ ದ್ರವ್ಯದ ಬಾಟಲಿಗಳಲ್ಲಿ ಬುವುದು ಹಾಗೂ ಕೀಗಳು , ಆಭರಣಗಳನ್ನು ತಯಾರಿಸಲಾಗುತ್ತದೆ. ಅವರ ಈ ಕಲಾಕೃತಿಗಳ ಬೆಲೆ 2,500 ರಿಂದ 4,2000ವರೆಗೆ ಇರುತ್ತದೆ.
ಮತ್ತಷ್ಟು ಓದಿ:ಶ್ರದ್ಧಾ ರೀತಿಯಲ್ಲೇ ಮತ್ತೊಂದು ಕೊಲೆ: ಢಾಬಾದ ಫ್ರಿಡ್ಜ್‌ನಲ್ಲಿ ಬಾಲಕಿಯ ಶವ ಪತ್ತೆ
ಈಗಾಗಲೇ ಸಾವಿರಾರು ಕಲಾಕೃತಿಗಳು ಮಾರಾಟಗೊಂಡಿವೆ, 5 ಸ್ಟಾರ್ ವಿಮರ್ಶೆಗಳು ಕೂಡ ದೊರೆತಿದೆ. ಈಲ್ ಲೈಟ್ ಬಲ್ಬ್, ಮಮ್ಮಿಫೈಡ್ ಬರ್ಡ್ ಹಾಗೂ ಸತ್ತ ಹೆಬ್ಬಾವಿರುವ ವೈನ್ ಬಾಟಲಿಗಳು ಕೂಡ ಇವೆ.
ಅವರು ತಮ್ಮ ವೃತ್ತಿಪರ ಪ್ರಯಾಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 2.8 ಮಿಲಿಯನ್ ವೀಕ್ಷಣೆಗಳನ್ನು ಪಡೆಯಿತು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ