ಮಧ್ಯಪ್ರದೇಶ: ಸಾರ್ವಜನಿಕವಾಗಿ ವ್ಯಕ್ತಿಯ ಬಳಿ ಪ್ಯಾಂಟ್​ ಸ್ವಚ್ಛಗೊಳಿಸಿಕೊಂಡ ಮಹಿಳಾ ಪೊಲೀಸ್​ ಅಧಿಕಾರಿ

| Updated By: Pavitra Bhat Jigalemane

Updated on: Jan 12, 2022 | 12:16 PM

ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ವ್ಯಕ್ತಿಯೊಬ್ಬ ಬಳಿ ತನ್ನ ಪ್ಯಾಂಟ್​ಅನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಮಧ್ಯಪ್ರದೇಶ: ಸಾರ್ವಜನಿಕವಾಗಿ ವ್ಯಕ್ತಿಯ ಬಳಿ ಪ್ಯಾಂಟ್​ ಸ್ವಚ್ಛಗೊಳಿಸಿಕೊಂಡ ಮಹಿಳಾ ಪೊಲೀಸ್​ ಅಧಿಕಾರಿ
ಮಹಿಳಾ ಅಧಿಕಾರಿಯ ಪ್ಯಾಂಟ್​ ಕ್ಲೀನ್​ ಮಾಡುತ್ತಿರುವುದು
Follow us on

ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನ ಬಳಿ ತನ್ನ ಪ್ಯಾಂಟ್​ಅನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು. ಮಹಿಳಾ ಪೊಲೀಸ್​ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವ್ಯಕ್ತಿ ಗಾಡಿ ತಿರುಗಿಸುವ ವೇಳೆ ಆಕೆಯ ಪ್ಯಾಂಟ್​ಗೆ ಕೆಸರು ತಾಗಿಸಿದ್ದಾನೆ ಎಂದು ವ್ಯಕ್ತಿಯ ಬಳಿ ಕಾಲನ್ನು ಬಟ್ಟೆಯಿಂದ ಒರೆಸುವಂತೆ ಕೇಳಿದ್ದು ಆತ ಸ್ವಚ್ಛಗೊಳಿಸಿದ್ದಾನೆ. ಸಾರ್ವಜನಿಕವಾಗಿ ದರ್ಪ ತೋರಿದ ಮಹಿಳಾ ಪೊಲೀಸ್​ ಅನ್ನು ಹೋಮ್​ ಗಾರ್ಡ್​ ಪೊಲೀಸ್​  ಶಶಿಕಲಾ ಎಂದು ಗುರುತಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಆಕೆಯ ಬಟ್ಟೆಗೆ ಕೆಸರು ತಾಗಿರುವುದು ಎಲ್ಲಿಯೂ ಕಾಣುವುದಿಲ್ಲ.  7 ಸೆಕೆಂಡ್​ಗಳ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಗ್ಗಿ ಕೆಂಪು ಬಟ್ಟೆಯಲ್ಲಿ ಮಹಿಳಾ ಪೊಲೀಸ್​ ಅಧಿಕಾರಿಯ ಬಿಳಿಯ ಪ್ಯಾಂಟನ್ನು ಒರೆಸುವುದನ್ನು ಕಾಣಬಹುದು. ವಿಡಿಯೋದ ಕೊನೆಯಲ್ಲಿ ಆಕೆ ಆತನ ಕೆನ್ನೆಗೆ ಹೊಡೆಯುತ್ತಾಳೆ. ಆದರೆ ಮಹಿಳಾ ಅಧಿಕಾರಿ ಮುಖಕ್ಕೆ ಸ್ಕಾರ್ಪ್​ ಧರಿಸಿದ್ದ ಕಾರಣ ಆಕೆಯ ಮುಖವನ್ನು ಗುರುತಿಸಲು ಸಾಧ್ಯವಾಗಿವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮದ್ಯಪ್ರದೇಶದ ರೇವಾ ಎಸ್​ಪಿ ಶಿವಕುಮಾರ್​ ಮಾತನಾಡಿ, ಯಾರಾದರು ಘಟನೆಯ ಬಗ್ಗೆ ದೂರು ನೀಡಿದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಜನರನ್ನು ಕಾಯುವ ಪೊಲೀಸರೇ ಸಾರ್ವಜನಿಕವಾಗಿ ಜನರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಮಹಿಳಾ ಪೊಲೀಸ್​ ಅಧಿಕಾರಿ ನಡೆಗೆ ಖಂಡನೆ ವ್ಯಕ್ತವಾಗಿದೆ.

ಇದನ್ನೂ ಓದಿ:

ತಾಯಿಯನ್ನು ಪ್ರೀತಿಯಿಂದ ಮುದ್ದಾಡಿದ ಹುಲಿ ಮರಿ: ವಿಡಿಯೋ ವೈರಲ್​