Viral Video: ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆಯ ಬಿಹು ನೃತ್ಯ ಪ್ರದರ್ಶನ; ವಿಡಿಯೋ ನೋಡಿ

ಮಹಿಳೆ ಮನಿಕೆ ಮಗೆ ಹಿತೆ ಹಾಡಿಗೆ ಬಿಹು ನೃತ್ಯವನ್ನು ಪ್ರದರ್ಶಿಸಿದ್ದಾರೆ. ಇದೀಗ ವಿಡಿಯೋ ಫುಲ್​ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ನೃತ್ಯ ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ.

Viral Video: ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆಯ ಬಿಹು ನೃತ್ಯ ಪ್ರದರ್ಶನ; ವಿಡಿಯೋ ನೋಡಿ
ಬಿಹು ನೃತ್ಯ
Edited By:

Updated on: Oct 22, 2021 | 12:46 PM

ವೈರಲ್ ವಿಡಿಯೋದಲ್ಲಿ ಗಮನಿಸುವಂತೆ ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆ ಬಿಹು ನೃತ್ಯ ಪ್ರದರ್ಶಿಸಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅಸ್ಸಾಂನ ಜಾನಪದ ಶೈಲಿಯ ಬಿಹು ನೃತ್ಯ ಪ್ರಕಾರವನ್ನು ಹಳದಿ ಬಣ್ಣದ ಸೀರೆಯುಟ್ಟ ಮಹಿಳೆ ಪ್ರದರ್ಶಿಸಿದ್ದಾಳೆ. ಜಾನಪದ ಶೈಲಿಯ ನೃತ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಸುಮಾರು 9,494 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ವಿಡಿಯೋದಲ್ಲಿ ಗಮನಿಸುವಂತೆ ಮಹಿಳೆ ಮನಿಕೆ ಮಗೆ ಹಿತೆ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಆದರೆ ಆ ಹಾಡಿನ ಜತೆ ಜಾನಪದ ಕಲಾ ಪ್ರಕಾರವಾದ ಬಿಹು ನೃತ್ಯವನ್ನು ಅವಳು ಪ್ರದರ್ಶಿಸಿದ್ದಾಳೆ. ಮನೆಯ ಟೆರೆಸ್​ನಲ್ಲಿ ನೃತ್ಯ ಮಾಡಿದ್ದು, ಅಂದರ ಹಳದಿ ಬಣ್ಣದ ಸೀರೆಯುಟ್ಟು ಮಹಿಳೆ ಹೆಜ್ಜೆ ಹಾಕಿದ್ದಾಳೆ. ನೆಟ್ಟಿಗರು ವಿಡಿಯೊ ನೋಡಿ ಮೆಚ್ಚಿಕೊಂಡಿದ್ದು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಾಮೆಂಟ್ ವಿಭಾಗದಲ್ಲಿ, ಅದ್ಭುತ ವಿಡಿಯೋವಿದು ಎಂದ ಅಭಿಪ್ರಾಯ ಕೇಳಿ ಬಂದಿದೆ. ಸುಂದರವಾಗಿದೆ ನೃತ್ಯ ಪ್ರಕಾರ ಎಂದು ಕೆಲವರು ಹೇಳಿದ್ದಾರೆ. ಮಹಿಳೆಯು ಸುಂದರವಾಗಿ ಅಭಿನಯ ಮಾಡುತ್ತಾ ಹೆಜ್ಜೆ ಹಾಕಿರುವುದು ಕೆಲವರಿಗೆ ತುಂಬಾ ಇಷ್ಟವಾಗಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮನಿಕೆ ಹಿತೆ ಮಗೆ ಹಾಡಿಗೆ ಹಲವರು ಹೆಜ್ಜೆ ಹಾಕಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಈ ಹಾಡು ಹೆಚ್ಚು ಜನಪ್ರಿಯತೆ ಗಳಿಸಿದ್ದು, ಕೆಲ ದಿನಗಳ ಹಿಂದಷ್ಟೆ ವಿಮಾನದಲ್ಲಿ ಗಗನಸಖಿ ಈ ಹಾಡಿಗೆ ನೃತ್ಯ ಮಾಡಿ ಗಮನ ಸೆಳೆದಿದ್ದರು. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು 60 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿತ್ತು.