ಅನಿರೀಕ್ಷಿತವಾಗಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬರೋಬ್ಬರಿ 8 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಮಹಿಳೆಯೋರ್ವರು ರಕ್ಷಿಸಿ ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಓಡಿಶಾ ರಾಜ್ಯದ ಮಯೂರ್ಭಂಜ್ ಎಂಬ ಪ್ರದೇಶದಲ್ಲಿ ಶನಿವಾರದಂದು (ಮೇ 5) ಈ ಘಟನೆ ನಡೆದಿದೆ. ಸಸ್ಮಿತೆ ಗೋಚ್ಚಾತ್ ಎಂಬ ಮಹಿಳೆಯೇ ಕಿಂಗ್ ಕೋಬ್ರಾಕ್ಕೆ ಹೆದರದೇ ಹಾವನ್ನು ರಕ್ಷಿಸಿದವರು.
ಮನೆಯೊಳಗೆ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಸಸ್ಮಿತಾ ಗೋಚ್ಚಾತ್ ಅವರಿಗೆ ಮನೆಯ ಹೊರಗೆ ಆಡುತ್ತಿದ್ದ ತಮ್ಮ 2 ವರ್ಷದ ಮಗುವಿನ ಅಳು ಕೇಳಿಸಿದೆ. ಮಗು ಏಕೆ ಅಳುತ್ತಿದೆ ಎಂದು ನೋಡಲು ಮನೆಯಿಮದ ಹೊರಬಂದ ಸಸ್ಮಿತಾ ಗೋಚ್ಚಾತ್ ಮತ್ತು ಅವರ ಪತಿ ಅಕಿಲ್ ಮುಂಡಾ ಅವರಿಗೆ ತಮ್ಮ ಮಗುವಿನ ಬಳಿಯೇ ಕಾಳಿಂಗ ಸರ್ಪ ಇರುವುದು ಕಾಣಿಸಿತು. ಒಮ್ಮೆ ಗಾಬರಿಗೊಂಡರೂ ತಡಮಾಡದೇ, ಅಕಿಲ್ ಮುಂಡಾ ಮಗುವನ್ನು ಎತ್ತಿಕೊಂಡು ದೂರ ಸರಿದರು. ಜತೆಗೆ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ತಕ್ಷಣವೇ ಅಲ್ಲಿಗೆ ಕರೆತಂದರು. ಆದರೆ ಸಸ್ಮಿತಾ ಮಾತ್ರ ಹೆದರದೇ ಅಲ್ಲೇ ನಿಂತರು. ಈವರೆಗೆ, ತಮ್ಮ ಜೀವಮಾನದಲ್ಲಿ ಒಮ್ಮೆಯೂ ಚಿಕ್ಕ ಕೇರೆಹಾವನ್ನೂ ಹಿಡಿದು ಗೊತ್ತಿರದ ಅವರು, ಆ ಕ್ಷಣ 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದೇಬಿಟ್ಟರು.
ನಾನು ಈವರೆಗೂ ಯಾವುದೇ ಹಾವನ್ನೂ ಹಿಡಿದಿರಲಿಲ್ಲ. ಆದರೆ ಕಾಳಿಂಗ ಸರ್ಪವನ್ನು ಹಿಡಿದು ಅದರ ಮೂಲ ನೆಲೆಗೆ ಬಿಟ್ಟಿದ್ದೇವೆ. ಈ ಕಾರ್ಯಕ್ಕೆ ನಮ್ಮ ಮನೆಯವರು, ಊರವರು ಮತ್ತು ವಿಶೇಷವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹಾಯ ಮಾಡಿದ್ದಾರೆ ಎಂದು ಸಸ್ಮಿತಾ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Odisha: A woman rescued a King Cobra who entered a residential area in Mayurbhanj
“It was found in front of a house of a local. I rescued it and released it in its habitat with the help of the forest department and Range Officer,” said Sasmita Gochhait (05.06) pic.twitter.com/dCfsaAkrSs
— ANI (@ANI) June 5, 2021
ಇದನ್ನೂ ಓದಿ: Noor Jahan Mango: ಒಂದು ಮಾವಿನ ಹಣ್ಣಿಗೆ 500ರಿಂದ ಸಾವಿರ ರೂಪಾಯಿ! ಅಬ್ಬಬ್ಬಾ, ಎಲ್ಲಿ ಸಿಗುತ್ತದೆ ಈ ಮಾವು?
ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲೇಬೇಕು: ಸಿಎಂ ಯಡಿಯೂರಪ್ಪ ಆಪ್ತರಿಂದ ನಿರ್ಧಾರ
(Women rescued 8 feet King Cobra in Odisha)