ಎಲ್ಲರಿಗೂ ಕೂಡ ತಾವು ಸುಂದರವಾಗಿ ಕಾಣಬೇಕು ಎನ್ನುವುದು ಇರುತ್ತದೆ. ಅದರಲ್ಲೂ ಈ ಹೆಣ್ಣು ಮಕ್ಕಳಿಗೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ಈಗಿನ ಹೆಣ್ಣು ಮಕ್ಕಳು ಸುಂದರವಾಗಿದ್ದರೂ ಮಾರುಕಟ್ಟೆಯಲ್ಲಿ ಸಿಗುವ ನಾನಾ ರೀತಿಯ ಉತ್ಪನ್ನಗಳ ಬಳಸುವುದಲ್ಲದೆ, ವಿವಿಧ ಬಗೆಯ ಸೌಂದರ್ಯ ವರ್ಧಕ ಚಿಕಿತ್ಸೆಗೆ ಒಳಗಾಗುತ್ತಾರೆ. ಅದಲ್ಲದೇ, ಫಿಲ್ಲರ್ ಮತ್ತು ಸರ್ಜರಿ ಮಾಡಿಸಿಕೊಂಡಿರುವ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುತ್ತಿರುತ್ತದೆ. ಹಾಗಾದ್ರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬರು ನೈಸರ್ಗಿಕವಾಗಿ ಮೆಣಸಿನಕಾಯಿಯ ಸಹಾಯದಿಂದ ಲಿಪ್ ಫಿಲ್ಲರ್ ಮಾಡಿದ್ದಾಳೆ.
ಇದೇನಪ್ಪಾ ನ್ಯಾಚುರಲ್ ಆಗಿ ಲಿಪ್ ಫಿಲ್ಲರ್ ಮಾಡಬಹುದಾ ಎನ್ನುವ ಪ್ರಶ್ನೆಯೊಂದು ಮೂಡಬಹುದು. ಹೌದು, ಈ ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ತನ್ನ ತುಟಿಗೆ ಹಸಿರು ಮೆಣಸಿನಕಾಯಿಯನ್ನು ಉಜ್ಜುವುದನ್ನು ನೋಡಬಹುದು. ನೈಸರ್ಗಿಕವಾಗಿ ಲಿಪ್ ಫಿಲ್ಲರ್ ತುಟಿಯನ್ನು ಪಡೆಯುವ ಸಲುವಾಗಿ ಈ ರೀತಿ ಮೆಣಸಿನಕಾಯಿಯನ್ನು ಉಜ್ಜಿಕೊಳ್ಳುತ್ತಿದ್ದಾಳೆ.
ಈ ವಿಡಿಯೋವನ್ನು ಶುಭಂಗಿ ಆನಂದ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಮಾರಂಭಕ್ಕೆ ಹೋಗಲು ತಯಾರಾಗಿದ್ದಾಳೆ. ಈ ನಡುವೆ ಲಿಪ್ ಫಿಲ್ಲರ್ ತುಟಿಗಾಗಿ ಹಸಿರು ಮೆಣಸಿನಕಾಯಿಯನ್ನು ಎರಡು ಭಾಗಗಳಾಗಿ ಕತ್ತರಿಸಿ ತನ್ನ ತುಟಿಗಳಿಗೆ ಉಜ್ಜಲು ಪ್ರಾರಂಭಿಸುತ್ತಾಳೆ. ಮೆಣಸಿನಕಾಯಿಯನ್ನು ತುಟಿಗೆ ಉಜ್ಜಿದ ಕಾರಣ ಉರಿಯಿಂದಾಗಿ ತುಟಿಗಳು ಊದಿಕೊಂಡಿದ್ದು, ನೋಡಲು ಲಿಪ್ ಫಿಲ್ಲರ್ನಂತೆ ಕಾಣುತ್ತಿದೆ.
ಇದನ್ನೂ ಓದಿ: ಬ್ಯಾಂಕ್ನೊಳಗೆ ಬಂದು ಮಹಿಳಾ ಮ್ಯಾನೇಜರ್ನ ಫೋನ್ ಒಡೆದು ಬೆದರಿಕೆ ಹಾಕಿದ ವ್ಯಕ್ತಿ; ವಿಡಿಯೋ ವೈರಲ್
ಈ ವಿಡಿಯೋಗೆ 2 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು, ‘ಕಂಟೆಂಟ್ ಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಅಪಾಯಕಾರಿಯಾದ ಈ ಟ್ರಿಕ್ ಅನ್ನು ಬಳಸುವ ಮುನ್ನ ನೀವೊಮ್ಮೆ ವೈದ್ಯರನ್ನು ಸಂಪರ್ಕಿಸಿ’ ಎಂದಿದ್ದಾರೆ. ಇನ್ನೊಬ್ಬರು, ‘ಆಕೆಯ ತುಟಿಗೆ ಬಾಯ್ ಫ್ರೆಂಡ್ ಮುತ್ತು ಕೊಟ್ಟರೆ ಹೇಗೆ ಇರಬಹುದು ಒಮ್ಮೆ ಊಹಿಸಿ’ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ