Viral Video: ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡಿದ ವಧು! ವಿಡಿಯೋ ವೈರಲ್

ಜುಲೈ ತಿಂಗಳಿನಲ್ಲಿಯೇ ವಿಡಿಯೋ ಕ್ಲಿಪ್ ಹಂಚಿಕೊಳ್ಳಲಾಗಿದೆ. ಆದರೆ ಇದೀಗ ಮತ್ತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಕೆಂಪು ಬಣ್ಣದ ಲೆಹೆಂಗಾ ತೊಟ್ಟ ವಧು ಪುಶ್ಅಪ್ ಮಾಡುತ್ತಿದ್ದಾಳೆ.

Viral Video: ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡಿದ ವಧು! ವಿಡಿಯೋ ವೈರಲ್
ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡಿದ ವಧು!
Edited By:

Updated on: Aug 04, 2021 | 1:45 PM

ವಧುವು ಲೆಹೆಂಗಾ ತೊಟ್ಟು ಪುಶ್ ಅಪ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ ಅನಾ ಅರೋರಾ ಸಾಂಪ್ರಾದಾಯಿಕ ಉಡುಪಿನಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಮೊದಲಿಗೆ ವಿಡಿಯೋ ಕ್ಲಿಪ್ ಹರಿಬಿಡಲಾಗಿದ್ದು, ಬಳಿಕ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹರಿದಾಡುತ್ತಿದೆ.

ಜುಲೈ ತಿಂಗಳಿನಲ್ಲಿಯೇ ವಿಡಿಯೋ ಕ್ಲಿಪ್ ಹಂಚಿಕೊಳ್ಳಲಾಗಿದೆ. ಆದರೆ ಇದೀಗ ಮತ್ತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಕೆಂಪು ಬಣ್ಣದ ಲೆಹೆಂಗಾ ತೊಟ್ಟ ವಧು ಪುಶ್ಅಪ್ ಮಾಡುತ್ತಿದ್ದಾಳೆ. ಅನಾ ಅರೋರಾ ಅವರು ಅಲಂಕಾರಗೊಂಡ ಇನ್ನಿತರ ಚಿತ್ರಗಳನ್ನೂ ಸಹ ಹರಿ ಬಿಟ್ಟಿದ್ದಾರೆ. ಆದರೆ ಪುಶ್ ಅಪ್ಸ್ ಮಾಡುತ್ತಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.


ಇನ್ಸ್ಟಾಗ್ರಾಂನಲ್ಲಿ 81,000 ಕ್ಕೂ ಫಾಲೋವರ್ಸ್​ಗಳನ್ನು ಹೊಂದಿರುವ ಅನಾ ಅರೋರಾ ಪಿಟ್ನೆಸ್ ಉತ್ಸಾಹಿ. ಫಿಟ್ನೆಸ್​ಗಾಗಿ ಅವರು ವ್ಯಾಯಾಮ ಮಾಡುತ್ತಿರುವ ಹಲವಾರು ಚಿತ್ರಗಳನ್ನು ಇನ್ಸ್ಟಾಗ್ರಾಂ ಪೋಸ್ಟ್​ನಲ್ಲಿ ನೋಡಬಹುದು. ವ್ಯಾಯಾಮ ಮಾಡುತ್ತಿರುವ ಫೋಟೋಗಳನ್ನು ಅವರು ಈ ಹಿಂದೆ ಪೋಸ್ಟ್ ಮಾಡಿದ್ದಾರೆ. ಅನಾ ಅರೋರಾ ಅವರು ಡಯೆಟಿಷಿಯನ್ ಮತ್ತು ಮಾಡೆಲ್ ಕೂಡಾ ಆಗಿದ್ದಾರೆ.

ಇದನ್ನೂ ಓದಿ:

Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್

Viral Video: ರೂಮ್ ತುಂಬಾ ಹೂವಿನ ಅಲಂಕಾರ ನೋಡಿ ಎಲ್ಲಿ ಮಲಗೋದು? ಎಂದ ವಧು; ವರನ ರಿಯಾಕ್ಷನ್ ವೈರಲ್