Dogs: ಇಲ್ಲಿ ಒಂದು ನಾಯಿ ಮೂಗು ಮತ್ತು ಹಣೆಯ ಮಧ್ಯಭಾಗದಲ್ಲಿ ಪ್ಲಾಸ್ಟಿಕ್ ಗ್ಲಾಸಿನೊಳಗೆ ನೀರನ್ನಿಟ್ಟುಕೊಂಡು ನೆಲದ ಮೇಲೆ ನಡೆಯುತ್ತಿದೆ. ಇನ್ನೊಂದು ಹಗ್ಗದ ಮೇಲೆ ನಡೆಯುತ್ತಿದೆ. ಇದೇ ನಿಜವಾದ ಬ್ಲಾಲೆನ್ಸಿಂಗ್ ಆ್ಯಕ್ಟ್ (Balancing Act) ಎನ್ನುತ್ತಿದೆ ನೆಟ್ ಜನತೆ. ಆದರೆ ನಾಯಿಪ್ರಿಯರು ಮಾತ್ರ ಗರಂ ಆಗಿದ್ದಾರೆ! ಎಂದಿಗೂ ನಾಯಿಗಳು ಇಂಥದೆಲ್ಲವನ್ನೂ ಮಾಡಲ ಇಚ್ಛಿಸುವುದಿಲ್ಲ. ಇದು ಅವುಗಳ ಮೂಲ ಸ್ವಭಾವವೂ ಅಲ್ಲ. ಇವುಗಳನ್ನು ಹೀಗೆ ಹಿಂಸಿಸಬೇಡಿ, ಅವುಗಳ ಪಾಡಿಗೆ ಬದುಕಲು ಬಿಟ್ಟುಬಿಡಿ ಎಂದು ಕಮೆಂಟ್ ದಾಳಿ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಕೆಲವರು, ಇವುಗಳನ್ನು Working Dog ಎನ್ನುತ್ತಾರೆ. ಹಿನ್ನೆಲೆ ತಿಳಿಯದೇ ಅಸಭ್ಯವಾಗಿ ಪ್ರತಿಕ್ರಿಯಿಸುವುದನ್ನು ನೀವುಗಳು ನಿಲ್ಲಿಸಿ ಎಂದಿದ್ದಾರೆ. ಈ ಪೋಸ್ಟ್ಗೆ ಉದ್ದಕ್ಕೂ ಪ್ರತಿಕ್ರಿಯೆಗೆ ಪ್ರತಿದಾಳಿ ಸಾಗಿದೆ.
ಮತ್ತೊಂದು ನಾಯಿ ಈ ಕೆಳಗಿನ ವಿಡಿಯೋದಲ್ಲಿ ಮೂಗು ಮತ್ತು ಹಣೆಯ ಮಧ್ಯದ ಜಾಗದಲ್ಲಿ ಪ್ಲಾಸ್ಟಿಕ್ ಗ್ಲಾಸಿನೊಳಗೆ ನೀರನ್ನಿಟ್ಟುಕೊಂಡು ಎರಡು ಹಗ್ಗಳ ಮೇಲೆ ನಡೆಯುತ್ತಿದೆ. ಬಡಪಾಯಿ ನಾಯಿಯನ್ನು ನೋಡಿ, ಎಷ್ಟೊಂದು ಹೆದರಿಕೊಂಡಿದೆ ಅದು, ಸರ್ಕಸ್ ಪ್ರಾಣಿ ಅಲ್ಲ ಇದು ಎಂದಿದ್ದಾರೆ ಒಂದಿಷ್ಟು ಜನ. ಇದರಲ್ಲಿ ಮಜಾ ಎನ್ನಿಸುವಂಥದ್ದೇನ ಇಲ್ಲ, ಇದು ಪ್ರಾಣಿಹಿಂಸೆ ಎಂದಿದ್ದಾರೆ ಕೆಲವರು. ಅತ್ಯದ್ಭುತವಾದ ನಾಯಿ ಇದು, ನಾನಿದನ್ನು ಹತ್ತಾರು ಬಾರಿ ನೋಡಿದೆ ಎಂದಿದ್ದಾರೆ ಹಲವರು. ನಾಯಿಗಳಿಗೆ ಹೀಗೆಲ್ಲ ದಂಡಿಸುವುದರಿಂದ ಅವು ಮನುಷ್ಯರನ್ನು ಕಚ್ಚುತ್ತವೆ ಎಂದಿದ್ದಾರೆ ಮತ್ತೊಂದಿಷ್ಟು ಜನ.
Working Dogs ತಳಿಗಳು ಜಗತ್ತಿನಾದ್ಯಂತ ಕಂಡುಬರುತ್ತವೆ. ಅವುಗಳ ಹೆಸರೇ ಸೂಚಿಸುವಂತೆ ಅವು ದುಡಿಯುವ ನಾಯಿಗಳು. ಈ ತಳಿಯ ನಾಯಿಗಳು ಕಠಿಣ ಪರಿಶ್ರಮಿಗಳು. ಪೊಲೀಸ್ ಇಲಾಖೆ, ಸೇನಾದಳದಲ್ಲಿ ಇವುಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅಥವಾ ಕುರಿ ಮತ್ತು ಇತರೇ ಸಾಕುಪ್ರಾಣಿಗಳ ರಕ್ಷಣೆಗೆ ಇವುಗಳನ್ನು ಸಾಕಲಾಗುತ್ತದೆ. ಇವುಗಳಿಗೆ ನಿಯಮಿತವಾದ ವ್ಯಾಯಾಮ, ತರಬೇತಿಗಳ ಮೂಲಕ ಪಳಗಿಸಲಾಗಿರುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:28 pm, Thu, 6 July 23