AI: ಜಗತ್ತು ಇಂದು ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚೆಚ್ಚು ಅವಲಂಬನೆಗೊಳ್ಳುತ್ತಿದೆ. AI ಸೃಷ್ಟಿದಾತರೇ ಇದರ ತಾಳಕ್ಕೆ ತಕ್ಕಂತೆ ಕುಣಿಯುವ ಅನಿವಾರ್ಯತೆ ಉಂಟಾಗಿದ್ದು, ತಂತ್ರಜ್ಞರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತತ್ಪರಿಣಾಮವಾಗಿ ಎಐನೊಂದಿಗೆ ಕೆಲಸ ಮಾಡುವ ತಂತ್ರಜ್ಞರು (Software Engineer) ಗಂಭೀರವಾದ ಅಪಾಯಗಳಿಗೆ ಈಡಾಗಲಿದ್ಧಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ಒಂಟಿತನ, ನಿದ್ರಾಹೀನತೆಯಿಂದ ಬಳಲುವ ಅವರುಗಳು ಅದರಿಂದ ಹೊರಬರಲು ನಿತ್ಯವೂ ಮದ್ಯಸೇವನೆಗೆ ಈಡಾಗುತ್ತಿದ್ದಾರೆ ಎನ್ನುವ ವಿಷಯ ಕಳವಳವನ್ನುಂಟು ಮಾಡಿದೆ.
ಜಾರ್ಜಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಅಮೆರಿಕಾ, ತೈವಾನ್, ಇಂಡೋನೇಷಿಯಾ ಮತ್ತು ಮಲೇಷಿಯಾದ ಎಐನೊಂದಿಗೆ ಕೆಲಸ ಮಾಡುವ 166 ಜನರ ಮೇಲೆ ಪ್ರಯೋಗವನ್ನು ಕೈಗೊಂಡರು. ಕೆಲಸ ಮುಗಿದ ಮೇಲೆ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಾರೆ. ಆಗ ಮದ್ಯದ ಮೊರೆ ಹೋಗುತ್ತಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದರು.
ಇದನ್ನೂ ಓದಿ : Viral Video: ಕೇದಾರನಾಥ ಶಿವಲಿಂಗದ ಮೇಲೆ ನೋಟುಗಳನ್ನು ತೂರಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲು
ಕೃತಕ ಬುದ್ಧಿಮತ್ತೆಯೊಂದಿಗೆ (Artificial Intelligence) ಕೆಲಸ ಮಾಡುವವರು ಮನುಷ್ಯರೊಂದಿಗೆ ಬೆರೆಯಲು ಹಾತೊರೆಯುತ್ತಿರುತ್ತಾರೆ. ಇತರರಿಗೆ ಸಹಾಯ ಮಾಡುವಲ್ಲಿ ಸದಾ ಮುಂದೆ ಇರುತ್ತಾರೆ. ಅಲ್ಲದೆ ಸಾಮಾಜಿಕವಾಗಿ ತೊಡಗಿಕೊಳ್ಳಲು ಬಯಸುವ ಅವರು ಜನರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇಂಡೋನೇಷಿಯಾ, ಮಲೇಷಿಯಾದಲ್ಲಿರುವ ಆಸ್ತಿ ನಿರ್ವಹಣಾ ಕಂಪೆನಿಗಳು ಮತ್ತು ಸಾಫ್ಟ್ವೇರ್ ಕಂಪೆನಿಗಳು ನಡೆಸಿರುವ ಪ್ರಯೋಗಳಲ್ಲಿಯೂ ಇದೇ ಫಲಿತಾಂಶವು ಹೊರಬಿದ್ದಿದೆ.
ಇದನ್ನೂ ಓದಿ : Viral: 34 ವರ್ಷಗಳ ಹಿಂದಿನ ಸಂದೇಶವೊಂದು ಸಮುದ್ರ ದಂಡೆಯ ಮೇಲೆ ಸಿಕ್ಕಾಗ
ಇದನ್ನು ತಪ್ಪಿಸುವುದು ಹೇಗೆ?
ಸಂಶೋಧಕ ಪೋಕ್ ಮ್ಯಾನ್ ಟ್ಯಾಂಗ್, “ಟೆಕ್ ಕಂಪೆನಿಗಳು ಮಾನವ ಧ್ವನಿ ವೈಶಿಷ್ಟ್ಯಗಳನ್ನು ಹೊಂದಿರುವಂಥ AI ಅನ್ನು ತಯಾರಿಸಬಹುದು. ಆಗ ಇದರೊಂದಿಗೆ ಕೆಲಸ ಮಾಡುವವರು ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಭಾವಿಸಲಾರರು. ಜೊತೆಗೆ ಮನುಷ್ಯರೊಂದಿಗಿನ ಸಂವಹನದ ಅನುಭವವನ್ನು ಇದು ನೀಡುವಂತಾಗಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಮನುಷ್ಯರು AIನೊಂದಿಗೆ ಕನಿಷ್ಟ ಸಮಯವನ್ನು ಕಳೆಯುವುದು ಒಳ್ಳೆಯದು. ಅಲ್ಲದೆ, ತಂತ್ರಜ್ಞರನ್ನು ಇತರರೊಂದಿಗೆ ಬೆರೆಯಲು ಅವಕಾಶ ಕಲ್ಪಿಸಬೇಕು.
ಏನೇ ಆಗಲಿ ಎಐ ತನ್ನಿಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುತ್ತದೆ. ಇದನ್ನು ಭವಿಷ್ಯದಲ್ಲಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಂಶೋಧಕರು ಚಿಂತಿತರಾಗಿದ್ಧಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ