Video: ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು; ವಿಡಿಯೋ ನೋಡಿ
ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ, "ದಿ ಅಮೇರಿಕನ್ ಡ್ರೀಮ್" ವಿಶ್ವದ ಅತಿ ಉದ್ದದ ಕಾರು. ಜೇ ಓಹ್ರ್‌ಬರ್ಗ್ ನಿರ್ಮಿಸಿದ ಈ ಕಾರು 1986ರಲ್ಲಿ 60 ಅಡಿ ಉದ್ದವಿತ್ತು, ಈಗ 100 ಅಡಿ 1.5 ಇಂಚು ಉದ್ದವಿದೆ. 75 ಕ್ಕೂ ಹೆಚ್ಚು ಜನ ಕುಳಿತುಕೊಳ್ಳಬಹುದಾದ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇದರ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ಲೇಖನ ವಿವರಿಸುತ್ತದೆ.
ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, “ದಿ ಅಮೇರಿಕನ್ ಡ್ರೀಮ್” ಎಂಬ ಕಾರು ವಿಶ್ವದ ಅತಿ ಉದ್ದದ ಕಾರು ಎಂಬ ಬಿರುದನ್ನು ಪಡೆದಿದೆ. ಕ್ಯಾಲಿಫೋರ್ನಿಯಾದ ಬರ್ಬ್ಯಾಂಕ್‌ನಲ್ಲಿ 1986 ರಲ್ಲಿ ಹೆಸರಾಂತ ಕಾರ್ ಕಸ್ಟಮೈಜರ್ ಜೇ ಓಹ್ರ್‌ಬರ್ಗ್ ಈ ಕಾರನ್ನು ತಯಾರಿಸಿದ್ದಾರೆ. “ದಿ ಅಮೇರಿಕನ್ ಡ್ರೀಮ್” ಆರಂಭದಲ್ಲಿ 18.28 ಮೀಟರ್ (60 ಅಡಿ) ಉದ್ದವಿತ್ತು, 26 ಚಕ್ರಗಳನ್ನು ಹೊಂದಿತ್ತು ಮತ್ತು ಒಂದು ಮುಂಭಾಗದಲ್ಲಿ ಮತ್ತು ಇನ್ನೊಂದು ಹಿಂಭಾಗದಲ್ಲಿ ಎರಡು V8 ಎಂಜಿನ್‌ಗಳಿಂದ ಚಲಿಸುತ್ತಿತ್ತು. ಬಳಿಕ 36 ವರ್ಷಗಳ ನಂತರ, ಈ ಕಾರನ್ನು ಸಂಪೂರ್ಣವಾಗಿ ಮಾಡಿಫೈ ಮಾಡಲಾಯಿತು. ಈಗ ಈ ಕಾರು 30.54 ಮೀಟರ್ (100 ಅಡಿ ಮತ್ತು 1.5 ಇಂಚು) ಉದ್ದವಿದೆ. ಈ ಕಾರಿನಲ್ಲಿ 75 ಕ್ಕೂ ಹೆಚ್ಚು ಕುಳಿತುಕೊಳ್ಳುವ ವ್ಯವಸ್ಥೆಯಿದೆ. ಜೊತೆಗೆ ಸಾಕಷ್ಟು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.
ಇದನ್ನೂ ಓದಿ: 119 ಕೋಟಿ ಖರ್ಚು ಮಾಡಿ ಹೊಸ ‘ನಗರ’ ನಿರ್ಮಿಸಿದ ಯೂಟ್ಯೂಬರ್
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 15, 2024 11:30 AM