ಅನಿಮಲ್ ಸಿನಿಮಾದಿಂದ ಸ್ಫೂರ್ತಿ ಪಡೆದ ಜೋಡಿ, ಚಲಿಸುವ ಮೆಷಿನ್ ಗನ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ
ಕೆಲವರು ಮದುವೆ ಮಂಟಪಕ್ಕೆ ಎಂಟ್ರಿ ನೀಡುವ ವಿಡಿಯೋಗಳು ತುಂಬಾ ಡಿಫೆರೆಂಟ್ ಆಗಿರುತ್ತವೆ. ರೆಡ್ ಕಾರ್ಪೆಟ್, ಬೈಕ್, ತಾವರೆ ಹೂವಿನ ಮಧ್ಯೆ, ಕುದುರೆ ಏರಿ ಎಂಟ್ರಿ ಕೊಡುವುದನ್ನು ನೋಡಿರಬಹುದು. ಆದರೆ ಇಲ್ಲೊಂದು ಜೋಡಿ ಚಲಿಸುವ ಸ್ಟೀಲ್ ಮೆಷಿನ್ ಗನ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ವಧುವರರ ಎಂಟ್ರಿ ನೋಡಿ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಕೆಲ ಮದುವೆಗಳು ವಿಶೇಷತೆಗಳಿಂದ ಸದ್ದು ಮಾಡುತ್ತವೆ. ಕೆಲ ಜೋಡಿಗಳು ಸಿಂಪಲ್ ಆಗಿ ಮದುವೆಯಾಗಿ ಗಮನ ಸೆಳೆದರೆ, ಇನ್ನು ಕೆಲ ಜೋಡಿಗಳು ವಿಭಿನ್ನವಾಗಿ ಮದುವೆ ಮಂಟಪಕ್ಕೆ ಎಂಟ್ರಿ ಕೊಡುವ ಮೂಲಕ ಸದ್ದು ಮಾಡುತ್ತಾರೆ. ಈಗಾಗಲೇ ವಧು ವರರು ಮದುವೆ ಮಂಟಪಕ್ಕೆ ಮೆರವಣಿಗೆಯ ಮೂಲಕ ಇಲ್ಲವಾದರೆ ಕಾರು, ಬುಲೆಟ್ ಬೈಕ್, ಸೈಕಲ್, ಜೆಸಿಬಿ ಹೀಗೆ ವಿಭಿನ್ನವಾಗಿ ಎಂಟ್ರಿ ಕೊಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಜೋಡಿಯು ಚಲಿಸುವ ಸ್ಟೀಲ್ ಮೆಷಿನ್ ಗನ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು saini5019 ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಈ ಜೋಡಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್‌ನ ಹಿಟ್ ಚಿತ್ರ ʼಅನಿಮಲ್ʼನಿಂದ ಸ್ಫೂರ್ತಿ ಪಡೆದಿದ್ದು, ಚಲಿಸುವ ಮೆಷಿನ್ ಗನ್‍ನ ಏರಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ನವಜೋಡಿಯು ದೈತ್ಯ ಮಷಿನ್ ಗನ್ ಬ್ಯಾರೆಲ್ ಹಿಂದೆ ಕುಳಿತಿರುವುದನ್ನು ಕಾಣಬಹುದು. ಈ ವಿಡಿಯೋ 2 ಮಿಲಿಯನ್ಸ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಮುಂದೆಯೇ ಜಿಂಕೆಯನ್ನು ಬೇಟೆಯಾಡಿದ ಹುಲಿರಾಯ, ವಿಡಿಯೋ ವೈರಲ್
ನೆಟ್ಟಿಗರೊಬ್ಬರು, ʼʼಏನು!! ಸೇಡು ಅಥವಾ ಅಧಿಕಾರಕ್ಕಾಗಿ ಜನರನ್ನು ಕೊಲ್ಲುವ ಪಾತ್ರವಾಗಲು ನೀವು ಬಯಸುತ್ತೀದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ʼʼಅವಳು ತನ್ನ ಜೀವನದ ಮುಂದಿನ ಯುದ್ಧಕ್ಕೆ ತಯಾರಾಗುತ್ತಿದ್ದಾಳೆʼʼ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼʼಮದುವೆ ಅಥವಾ ಯುದ್ಧ?ʼʼ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ