Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರದಲ್ಲಿರುವ ಒಂದು ಬೆಕ್ಕನ್ನು ಆಯ್ಕೆ ಮಾಡಿ, ನೀವು ನಾಯಕತ್ವ ಗುಣವನ್ನು ಹೊಂದಿರುವಿರಾ ಎಂಬುದನ್ನು ತಿಳಿಯಿರಿ

ಆಪ್ಟಿಕಲ್‌ ಇಲ್ಯೂಷನ್‌, ವ್ಯಕ್ತಿತ್ವ ಪರೀಕ್ಷೆ ಸಂಬಂಧಿಸಿದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಇದೇ ರೀತಿಯ ವ್ಯಕ್ತಿತ್ವ ಪರೀಕ್ಷೆಯ ಚಿತ್ರ ವೈರಲ್‌ ಆಗಿದೆ. ಆ ಫೋಟೋದಲ್ಲಿ ಮೂರು ಬೇರೆ ಬೇರೆ ಬಣ್ಣದ ಬೆಕ್ಕುಗಳಿದ್ದು, ಆ ಮೂರು ಬೆಕ್ಕುಗಳಲ್ಲಿ ನೀವು ನಿಮ್ಮಿಷ್ಟದ ಒಂದು ಬೆಕ್ಕನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ, ನಾಯಕತ್ವ ಗುಣ ಹೇಗೆ ಎಂಬುದನ್ನು ತಿಳಿಯಬಹುದಾಗಿದೆ.

Personality Test: ಈ ಚಿತ್ರದಲ್ಲಿರುವ ಒಂದು ಬೆಕ್ಕನ್ನು ಆಯ್ಕೆ ಮಾಡಿ, ನೀವು ನಾಯಕತ್ವ ಗುಣವನ್ನು ಹೊಂದಿರುವಿರಾ ಎಂಬುದನ್ನು ತಿಳಿಯಿರಿ
Personality Test
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Dec 15, 2024 | 2:50 PM

ಮಲಗುವ ಭಂಗಿಯಿಂದ, ನಡಿಗೆಯ ಶೈಲಿಯಿಂದ, ಮೊಬೈಲ್‌ ಹಿಡಿಯುವ ರೀತಿಯಿಂದ ಹಿಡಿದು ಕೈ ಬೆರಳು, ಮುಖ, ಕಿವಿಗಳ ಆಕಾರದಿಂದ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾದ ಹಾಗೇನೇ ಭ್ರಮೆಯನ್ನು ಉಂಟುಮಾಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ನೀಮಗೇನು ಕಾಣಿಸಿತು ಎಂಬುದರ ಆಧಾರದ ಮೇಲೆ ವ್ಯಕ್ತಿತ್ವ, ಗುಣವನ್ನು ತಿಳಿದುಕೊಳ್ಳಬಹುದಾದಂತಹ ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಕುತೂಹಲಕಾರಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಫೋಟೋ ವೈರಲ್‌ ಆಗಿದೆ. ಆ ಫೋಟೋದಲ್ಲಿ ಮೂರು ಬೇರೆ ಬೇರೆ ಬಣ್ಣದ ಬೆಕ್ಕುಗಳಿದ್ದು, ಆ ಮೂರು ಬೆಕ್ಕುಗಳಲ್ಲಿ ನೀವು ನಿಮ್ಮಿಷ್ಟದ ಒಂದು ಬೆಕ್ಕನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ, ನಿಮ್ಮ ನಾಯಕತ್ವ ಗುಣ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ.

ಈ ವೈರಲ್‌ ಫೋಟೋದಲ್ಲಿ ಬೂದು, ಕಪ್ಪು-ಬಿಳಿ ಮತ್ತು ಬಿಳಿ ಬಣ್ಣದ ಮೂರು ಬೆಕ್ಕುಗಳಿವೆ. ಈ ಮೂರು ಬೆಕ್ಕುಗಳಲ್ಲಿ ನಿಮ್ಮಿಷ್ಟದ ಒಂದು ಬೆಕ್ಕನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವ ಹೇಗೆ, ನಿಮ್ಮ ನಾಯಕತ್ವ ಗುಣ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಕಂದು ಬೆಕ್ಕು:

ನೀವೇನಾದರೂ ಕಂದು ಬೆಕ್ಕನ್ನು ಇಷ್ಟಪಟ್ಟು ಆಯ್ಕೆ ಮಾಡಿದ್ದರೆ, ನೀವು ಉತ್ತಮ ಚಾರ್ಮ್‌ ಮತ್ತು ಒಳ್ಳೆಯ ವರ್ಚಸ್ಸಿನೊಂದಿದೆ ನಾಯಕತ್ವದ ಗುಣವನ್ನು ಹೊಂದಿರುವವರಾಗಿರುತ್ತೀರಿ. ನಿಮ್ಮ ಸಾಮರ್ಥ್ಯದ ಮೂಲಕವೇ ನೀವು ಇತರರಿಗೆ ಸ್ಪೂರ್ತಿಯನ್ನು ನೀಡುವ ವ್ಯಕ್ತಿಯಾಗಿರುತ್ತೀರಿ. ನೀವು ಯಾವುದೇ ಹಿಂಜರಿಕೆಯಿಲ್ಲದೆ ಎಂತಹದ್ದೇ ಅಪಾಯಗಳನ್ನು ಬೇಕಾದರೂ ಎದುರಿಸುವ ಮತ್ತು ಒಂದು ತಂಡದ ನಾಯಕನಾಗಿ ತಂಡವನ್ನು ಪ್ರೇರೇಪಿಸುವ ಗುಣವನ್ನು ಹೊಂದಿರುತ್ತೀರಿ. ಆದರೆ ಕೆಲವೊಮ್ಮೆ ನಿಮ್ಮ ಅತಿಯಾದ ಉತ್ಸಾಹವು ನಿಮ್ಮನ್ನು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ನನ್‌ ಗಂಡ ನನಗಿಂತ ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

ಕಪ್ಪು-ಬಿಳಿ ಬೆಕ್ಕು:

ನೀವೇನಾದರೂ ಕಪ್ಪು-ಬಿಳಿ ಬಣ್ಣದ ಬೆಕ್ಕನ್ನು ಇಷ್ಟಪಟ್ಟು ಆಯ್ಕೆ ಮಾಡಿದ್ರೆ ನೀವು ಸಂಘಟಿತ ಮತ್ತು ಕಾರ್ಯತಂತ್ರವನ್ನು ರೂಪಿಸುವ ನಾಯಕತ್ವದ ಗುಣವನ್ನು ಹೊಂದಿರುವ ವ್ಯಕ್ತಿ ಎಂದು ಅರ್ಥ. ನೀವು ನಿಮ್ಮ ಶಿಸ್ತು, ಶಾಂತತೆಯ ಮೂಲಕ ಸಂಘಟಿತ ವಾತಾವರಣವನ್ನು ನಿರ್ಮಿಸುವವರಾಗಿರುತ್ತೀರಿ. ಜೊತೆಗೆ ನಿಮ್ಮ ಸ್ಥಿರವಾದ ಮನಸ್ಥಿತಿಯು ಎಂತಹದ್ದೇ ಒತ್ತಡದಲ್ಲಿಯೂ ಸಹ ನಿಮ್ಮ ಗಮನವನ್ನು ಕೇಂದ್ರಿಕರಿಸಲು ಸಹಾಯ ಮಾಡುತ್ತದೆ.

ಬಿಳಿ ಬೆಕ್ಕು:

ನೀವೇನಾದರೂ ಬಿಳಿ ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದ್ದರೆ ನೀವು ಸಹಾನುಭೂತಿಯ ಮತ್ತು ಬೆಂಬಲವನ್ನು ನೀಡುವ ನಾಯಕತ್ವ ಗುಣವನ್ನು ಹೊಂದಿದ್ದೀರಿ ಎಂದು ಅರ್ಥ. ನೀವು ನಿಮ್ಮ ಸಹಾನುಭೂತಿ ಮತ್ತು ಸಹಯೋಗದಿಂದ ತಂಡವನ್ನು ಕಟ್ಟುವಂತಹ ಸಾಮಾರ್ಥ್ಯವನ್ನು ಹೊಂದಿರುವ ವ್ಯಕ್ತಿಯಾಗಿರುತ್ತೀರಿ ಅಷ್ಟೇ ಅಲ್ಲದೆ ಇತರರ ಮಾತುಗಳನ್ನು ಆಲಿಸುವ ಮತ್ತು ಕಾಳಜಿಯೊಂದಿಗೆ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುವ ಸಾಮರ್ಥ್ಯ ನಿಮಗಿದೆ. ನಿಮ್ಮ ಗುಣಗಳೇ ಇತರರು ನಿಮ್ಮ ಮೇಲೆ ನಂಬಿಕೆ ಇಡುವಂತೆ ಮಾಡುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ