ಜಗತ್ತಿನಲ್ಲಿ ಸಕ್ರಿಯವಾಗಿರುವ ಜ್ವಾಲಾಮುಖಿಗಳಲ್ಲಿ ಇಟಲಿಯ ಮೌಂಟಿ ಎಟ್ನಾ ಕೂಡ ಒಂದು. ಈ ಜ್ವಾಲಾಮುಖಿ ಈಗ ಸ್ಪೋಟಗೊಂಡಿದ್ದು, ಬರೋಬ್ಬರಿ 12 ಕಿಮೀ ದೂರದವರೆಗೆ ಹೊಗೆ ಆವರಿಸಿದೆ, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಸಲಿಯ ಸುತ್ತಮುತ್ತ ದಟ್ಟ ಹೊಗೆ ಕವಿದ ವಾತಾವರಣ ಕಾಣಿಸಿಕೊಂಡಿದ್ದು ಎಂದು ವರದಿಗಳು ತಿಳಿಸಿವೆ. ಆಕಾಶದಲ್ಲಿ ಕಪ್ಪು ಹೊಗೆಯನ್ನು ನೋಡಿ ಜನರು ಕೂಡ ದಿಗಿಲುಕೊಂಡಿದ್ದಾರೆ. ಟ್ವಿಟರ್ನಲ್ಲಿ ಎಎಫ್ಪಿ ನ್ಯೂಸ್ ಏಜೆನ್ಸಿ ಹೊಗೆ ಆವರಿಸಿದ ವಿಡಿಯೋ ಹಂಚಿಕೊಂಡಿದ್ದು ಜಗತ್ತಿನಾದ್ಯಂತ ವಿಡಿಯೋ ವೈರಲ್ ಆಗಿದೆ. ಈ ಕುರಿತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್ ಮತ್ತು ವಲ್ಕನಾಲಜಿ ಸಂಸ್ಥೆ ಮಾಹಿತಿ ನೀಡಿದೆ.
VIDEO: Italy’s Mount Etna spews smoke and ash.
Mount Etna, one of the world’s most active volcanoes, belches smoke and ashes in a new eruption, briefly forcing the closure of the airport of Catania in Sicily pic.twitter.com/5htm57WVFY
— AFP News Agency (@AFP) February 22, 2022
ವಿಡಿಯೋದಲ್ಲಿ ಕಪ್ಪು ಬಣ್ಣದಿಂದ ಕೂಡಿದ ದಟ್ಟವಾದ ಹೊಗೆ ಆಕಾಶದ ತುಂಬ ಹರಡಿಕೊಂಡಿರುವುದನ್ನು ಕಾಣಬಹುದು. ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹೊಗೆಯನ್ನು ನೋಡಿ ಜನರು ಕೂಡ ಅಚ್ಚರಿಗೊಂಡಿದ್ದಾರೆ. ತಕ್ಷಣಕ್ಕಡ ಯಾವುದೇ ಹಾನಿ ಅಥವಾ ಅಪಾಯ ಸಂಭವಿಸಿದ ಕುರಿತು ವರದಿಯಾಗಿಲ್ಲ. 1669ರಲ್ಲಿ ಈ ಜ್ವಾಲಾಮುಖಿ ಮೊದಲು ಉದ್ಭವವಾಗಿ ಕಾಣಿಸಿಕೊಂಡಿದ್ದು, ಆ ಸಂದರ್ಭದಲ್ಲಿ ಕೆಟನಿಯಾ ನಗರವನ್ನು ಸಂಪೂರ್ಣವಾಗಿ ನಾಶಗೊಳಿಸಿತ್ತು. ನಂತರದ ದಿನಗಳಲ್ಲಿ ಆಗಾಗ ಜ್ವಾಲಾಮುಖಿ ಸ್ಪೋಟಗೊಳ್ಳುತ್ತಿದ್ದು, ಅಲ್ಲಿಯ ಜನರೂ ಕೂಡ ಎಚ್ಚೆತ್ತುಕೊಂಡಿದ್ದಾರೆ.
ಇದನ್ನೂ ಓದಿ:
Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್