ವಿಶ್ವದ ಅತೀ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣಕ್ಕೆ ವಿಶೇಷ ಅನುಕೂಲ ಕಲ್ಪಿಸಿದ ವಿಮಾನ ಸಂಸ್ಥೆ

| Updated By: ಶ್ರೀದೇವಿ ಕಳಸದ

Updated on: Nov 08, 2022 | 12:00 PM

World’s Tallest Woman : ಈಕೆ 2014ರಲ್ಲಿ ವಿಶ್ವದ ಅತೀ ಎತ್ತರದ ಹದಿಹರೆಯದ ಹುಡುಗಿ ಎಂದು ಗಿನ್ನೀಸ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರ ಬೆರಳುಗಳ ಉದ್ದ 4.40 ಇಂಚು, ಬೆನ್ನಿನ ಉದ್ದ 23.58 ಇಂಚು. ವಿಮಾನದಲ್ಲಿ 6 ಆಸನಗಳನ್ನು ತೆಗೆದು ವಿಶೇಷ ಆಸನವನ್ನು ಇವರಿಗಾಗಿ ಕಲ್ಪಿಸಲಾಗಿತ್ತು.

ವಿಶ್ವದ ಅತೀ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣಕ್ಕೆ ವಿಶೇಷ ಅನುಕೂಲ ಕಲ್ಪಿಸಿದ ವಿಮಾನ ಸಂಸ್ಥೆ
Worlds Tallest Woman Achieves New Heights Makes Maiden Flight Travel With Special Arrangements
Follow us on

Viral Video : ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಅನುಕೂಲವನ್ನು ಕಲ್ಪಿಸಿಕೊಡುವುದು ವಿಮಾನ ಸಂಸ್ಥೆಯ  ಕರ್ತವ್ಯ. ಈ ನಿಟ್ಟಿನಲ್ಲಿ ಹೆಚ್ಚು ಪ್ರಯಾಣಿಕಸ್ನೇಹಿಯಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ಅನೇಕ ವಿಮಾನ ಸಂಸ್ಥೆಗಳು ಆಗಾಗ ಸುದ್ದಿಯಾಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ನೋಡಿ. ವಿಶ್ವದ ಅತೀ ಎತ್ತರದ ಮಹಿಳೆಯ ಮೊದಲ ವಿಮಾನ ಪ್ರಯಾಣಕ್ಕೆ ಟರ್ಕಿಶ್ ಏರ್​ಲೈನ್ಸ್​ ಅನುಕೂಲ ಮಾಡಿಕೊಟ್ಟಿದೆ. ಗಿನ್ನೀಸ್​ ವಿಶ್ವ ದಾಖಲೆ ಮಾಡಿರುವ ​7 ಅಡಿ ಎತ್ತರದ ರುಮೆಯ್ಸಾ  ಗೆಲ್ಗಿ ಅವರಿಗೆ ಆರಾಮದಾಯಕವಾಗಿ ಪ್ರಯಾಣ ಮಾಡಲು ಈ ವಿಮಾನ ಸಂಸ್ಥೆಯು ವಿಶೇಷ ವ್ಯವಸ್ಥೆ ಕಲ್ಪಿಸುವ ಮೂಲಕ ಗಮನ ಸೆಳೆದಿದೆ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇಸ್ತಾನ್​ಬುಲ್​ನ ಟರ್ಕಿಯಿಂದ ಸ್ಯಾನ್​ ಫ್ರಾನ್ಸಿಸ್ಕೋಗೆ ಮೊದಲ ಸಲ ವಿಮಾನ ಪ್ರಯಾಣ ಮಾಡುವಲ್ಲಿ ರುಮೇಯ್ಸಾ ಯಶಸ್ವಿಯಾಗಿದ್ದಾರೆ. ಟರ್ಕಿಶ್​ ಏರ್​ಲೈನ್ಸ್​ ಎಕಾನಾಮಿ ಕ್ಲಾಸ್​ನಲ್ಲಿ 6 ಆಸನಗಳನ್ನು ತೆಗೆದು ಆ ಜಾಗದಲ್ಲಿ ಇವರಿಗಾಗಿಯೇ ವಿಶೇಷ ವ್ಯವಸ್ಥೆಯನ್ನು ಮಾಡಿತ್ತು. ‘ಇದು ನನ್ನ ಮೊದಲ ವಿಮಾನ ಪ್ರಯಾಣ. 14 ಗಂಟೆಗಳ ಈ ಪ್ರಯಾಣ ಬಹಳ ಆರಾಮದಾಯಕವಾಗಿತ್ತು. ಈ ಪ್ರಯಾಣಕ್ಕೆ ಇನ್ನು ಅಂತ್ಯವಿರುವುದಿಲ್ಲ. ಇದನ್ನು ಸುಗಮವಾಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ ರುಮೇಯ್ಸಾ.

ಈಕೆ 2014ರಲ್ಲಿ ವಿಶ್ವದ ಅತೀ ಎತ್ತರದ ಹದಿಹರೆಯದ ಹುಡುಗಿ (ಆಗ 17 ವರ್ಷ) ಎಂದು ಗಿನ್ನೀಸ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆದರೆ ಇವರು ವೀವರ್ ಸಿಂಡ್ರೋಮ್​ ಎಂಬ ಆನುವಂಶಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಮೂಳೆಯ ಬೆಳವಣಿಗೆಗೆ ಸಂಬಂಧಿಸಿದ್ದಾಗಿದೆ. ಇವರ ಬೆರಳುಗಳ ಉದ್ದ 4.40 ಇಂಚು ಮತ್ತು ಬೆನ್ನಿನ ಉದ್ದ 23.58 ಇಂಚುಗಳು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 11:59 am, Tue, 8 November 22