ವಿಮಾನಾಪಘಾತದಲ್ಲಿ 33,333 ಅಡಿ ಎತ್ತರದಿಂದ ಬಿದ್ದರೂ ಬದುಕುಳಿದ ಈ ಮಹಿಳೆ

Viral Video : 1972ರಲ್ಲಿ DC-9 ವಿಮಾನವು ಸ್ವೀಡನ್​-ಸರ್ಬಿಯಾದ ಮಧ್ಯೆ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಬ್ರೀಫ್​ಕೇಸ್​ನಲ್ಲಿ ಇರಿಸಿದ್ದ ಬಾಂಬ್​ ಸ್ಫೋಟಗೊಂಡಿತ್ತು. ಗಗನಸಖಿ ವೆಸ್ನಾ ವುಲೋವಿಕ್ಸ್​ ಮಾತ್ರ ಬದುಕುಳಿದಿದ್ದಳು.

ವಿಮಾನಾಪಘಾತದಲ್ಲಿ 33,333 ಅಡಿ ಎತ್ತರದಿಂದ ಬಿದ್ದರೂ ಬದುಕುಳಿದ ಈ ಮಹಿಳೆ
Guinness World Records shares story of woman who survived highest fall ever without parachute
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 07, 2022 | 5:37 PM

Viral Video : ವಿಮಾನ ಅಪಘಾತದಿಂದಾಗಿ 33,333 ಅಡಿ ಎತ್ತರದಿಂದ ಬಿದ್ದರೂ ವೆಸ್ನಾ ವುಲೋವಿಕ್ಸ್ ಎಂಬ ಮಹಿಳೆಯು ಬದುಕುಳಿದಿದ್ದಳು. ಈ ಹಳೆಯ ದುರ್ಘಟನೆ ಕುರಿತ ವಿಡಿಯೋ ಅನ್ನು ಗಿನ್ನೀಸ್​ ವಿಶ್ವ ದಾಖಲೆಯ ಟ್ವಿಟರ್​ ಪುಟದಲ್ಲಿ ಟ್ವೀಟ್ ಮಾಡಲಾಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ. ಏಕೆಂದರೆ ಈತನಕ ಅಷ್ಟು ಎತ್ತರದಿಂದ ಬಿದ್ದ ಅಥವಾ ಧುಮುಕಿದ ಯಾವ ಮನುಷ್ಯನೂ ಬದುಕುಳಿದ ಉದಾಹರಣೆಗಳಿಲ್ಲ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋ ನೋಡುತ್ತಿದ್ದಂತೆ ಆ ದಿನ ಏನು ನಡೆಯಿತೆಂದು ನಿಮಗರ್ಥವಾಗಿರುತ್ತದೆ. 1972ರಲ್ಲಿ DC-9 ವಿಮಾನವು ಸ್ವೀಡನ್​ನ ಸ್ಟಾಕ್​ಹೋಮ್​ ಮತ್ತು ಸರ್ಬಿಯಾದ ಬೆಲ್​ಗ್ರೇಡ್ ಮಧ್ಯೆ ಪ್ರಯಾಣಿಸುತ್ತಿದ್ದಾಗ ದುಷ್ಕರ್ಮಿಗಳು ಬ್ರೀಫ್​ಕೇಸ್​ನಲ್ಲಿ ಇರಿಸಿದ್ದ ಬಾಂಬ್​ ಸ್ಫೋಟಗೊಂಡು ಅನಾಹುತ ಸಂಭವಿಸಿತು. ಪರಿಣಾಮವಾಗಿ ಎಲ್ಲರೂ ಸಾವಿಗೀಡಾಗಿದ್ದರು. ಆದರೆ ಬದುಕುಳಿದಿದ್ದು ಗಗನಸಖಿ ವೆಸ್ನಾ ವುಲೋವಿಕ್ಸ್​ ಮಾತ್ರ.

3,333 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರೂ ಹೇಗೆ ಬದುಕುಳಿದಳು ಎಂಬುದು ಅಂದಿಗೂ ಇಂದಿಗೂ ಅಚ್ಚರಿ ಮತ್ತು ದಾಖಲೆಯೇ. ವಿಮಾನವು ಸ್ಫೋಟಗೊಂಡು ಛಿದ್ರವಾಗಿ ಬೀಳುವಾಗ ಫುಡ್​ ಕಾರ್ಟ್​ನ ಭಾಗ ಹಿಮಪ್ರದೇಶದಲ್ಲಿ ಹೋಗಿ ಬಿದ್ದಿತ್ತು. ಆ ಕಾರ್ಟ್​ನಲ್ಲಿಯೇ ವೆಸ್ನಾ ಇದ್ದಿದ್ದು. ಅಪಘಾತ ಸ್ಥಳದಿಂದ ಆಕೆ ಕಿರುಚುತ್ತಿರುವಾಗ ಡಾ. ಬ್ರೂನೋ ಹೊನ್ಕೆ ಎನ್ನುವವರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿದರು. ಆರಂಭದಲ್ಲಿ ಕೆಲ ದಿನಗಳ ಕಾಲ ಆಕೆ ಕೋಮಾ ಅವಸ್ಥೆಯಲ್ಲಿದ್ದರು. ಮೆದುಳು, ಕಾಲುಗಳು, ಪಕ್ಕೆಲುಬು ಸೇರಿದಂತೆ ಆಕೆ ತೀವ್ರವಾಗಿ ಗಾಯಗೊಂಡಿದ್ದಳು.

ನಿನ್ನೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ ಸುಮಾರು 2,600 ಜನರು ನೋಡಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಓಹ್ ಈಕೆ ಸರ್ಬಿಯಾ ಮೂಲದವರು, ಎಂಥ ಅದ್ಭುತ ದಾಖಲೆ ಇದು ಎಂದು ಒಬ್ಬರು ಹೇಳಿದ್ದಾರೆ.

23.12.2016ರಲ್ಲಿ ಈಕೆ ತೀರಿಕೊಂಡರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:32 pm, Mon, 7 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ