ರದ್ದಾದ ವಿಮಾನ ಪ್ರಯಾಣ; ಎಮಿರೇಟ್ಸ್ ಏರ್ಲೈನ್ಸ್ ಉದ್ಯೋಗಿಯ ಮೇಲೆ ಮಹಿಳೆಯ ಆಕ್ರಮಣಕಾರಿ ವರ್ತನೆ
Flight Missing : ಈ ಮಹಿಳೆ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದು ಒಂದು ಕಾರಣ. ಅವಧಿ ಮುಗಿದ ಪಾಸ್ಪೋರ್ಟ್ನೊಂದಿಗೆ ಚೆಕ್ ಇನ್ ಆಗಲು ಪ್ರಯತ್ನಿಸಿದ್ದು ಇನ್ನೊಂದು ಕಾರಣ. ಪ್ರಯಾಣ ರದ್ದಾದಾಗ ಸಂಘರ್ಷ ಏರ್ಪಟ್ಟಿದೆ.
Viral Video : ವಿಮಾನ ತಪ್ಪಿತೆಂದು ಹತಾಶೆಗೊಳಗಾದ ಮಹಿಳೆಯೊಬ್ಬರು ಸಹಪ್ರಯಾಣಿಕರು ಮತ್ತು ಎಮಿರೇಟ್ಸ್ ಏರ್ಲೈನ್ಸ್ ಸಿಬ್ಬಂದಿಯೊಂದಿಗೆ ಹದ್ದುಮೀರಿ ವರ್ತಿಸಿದ್ದಾರೆ. ಈ ವೇಳೆ ಅವರುಗಳ ಮೇಲೆ ಸೂಟ್ಕೇಸ್ ಎಸೆದಾಡಿದ್ದಾರೆ. ಈ ಗದ್ದಲ ಸೃಷ್ಟಿಯಾಗುತ್ತಿದ್ದಂತೆ ಉದ್ಯೋಗಿಯು ಭದ್ರತಾ ಸಿಬ್ಬಂದಿಗೆ ಕರೆ ಮಾಡುತ್ತಿರುವ ಸಂದರ್ಭದಲ್ಲಿ ಚೆಕ್ ಇನ್ ಡೆಸ್ಕ್ ಅನ್ನೂ ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ. ಇದೀಗ ಈ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ.
Moment woman throws punches at Emirates airline employee and hurls objects at bystanders after missing her flight at #MexicoCity airport pic.twitter.com/sHsPEKkWzl
— Hans Solo (@thandojo) November 7, 2022
ಮೆಕ್ಸಿಕೋ ಸಿಟಿ ಏರ್ಲೈನ್ ಚೆಕ್ ಇನ್ ಡೆಸ್ಕ್ ಮತ್ತು ಸಿಬ್ಬಂದಿ ಮೇಲೆ ಆ ಮಹಿಳೆ ದಾಳಿ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 10 ಸೆಕೆಂಡ್‌ಗಳ ಈ ವೀಡಿಯೊದಲ್ಲಿ ಕೋಪೋದ್ರಿಕ್ತ ಮಹಿಳೆಯು ಕೂಗಾಡುವುದು, ಸಾಮಾಜು ಸರಂಜಾಮುಗಳನ್ನು ಎಸೆದಾಡುವುದು ಜೊತೆಗೆ ಕಂಪ್ಯೂಟರ್ ಅನ್ನು ಎಸೆದಾಡುವುದು ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ.
ಆದರೆ ಈ ಮಹಿಳೆ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದು ಒಂದು ಕಾರಣ. ಅವಧಿ ಮುಗಿದ ಪಾಸ್ಪೋರ್ಟ್ನೊಂದಿಗೆ ಚೆಕ್ ಇನ್ ಆಗಲು ಪ್ರಯತ್ನಿಸಿದ್ದು ಇನ್ನೊಂದು ಕಾರಣ. ಈ ಎರಡು ಕಾರಣಗಳಿಂದಾಗಿ ಆಕೆಯ ಪ್ರಯಾಣವನ್ನು ರದ್ದುಗೊಳಿಸಲಾಗಿ ಸಿಬ್ಬಂದಿಯೊಂದಿಗೆ ಸಂಘರ್ಷ ಏರ್ಪಟ್ಟಿದೆ. ಆಗ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯು ಒಳಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ