ದೆಹಲಿ ಮೆಟ್ರೋ ನಿಲ್ದಾಣದ ಹಳಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ; ಡಿಎಂಆರ್‌ಸಿ ಗಮನಕ್ಕೆ ತಂದ ನೆಟ್ಟಿಗರು
ದೆಹಲಿ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಕ್ತಿಯೊಬ್ಬರು ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಟ್ವಿಟರ್ ಬಳಕೆದಾರರು "ಬಹುಶಃ ಇದು ದೆಹಲಿ ಮೆಟ್ರೋದಲ್ಲಿ ಮೊದಲ ಬಾರಿಗೆ ಸಂಭವಿಸಿರಬಹುದು" ಎಂಬ...
ದೆಹಲಿ ಮೆಟ್ರೋ ನಿಲ್ದಾಣದಲ್ಲಿ (Delhi Metro station )ವ್ಯಕ್ತಿಯೊಬ್ಬರು ಹಳಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಸಹ ಮೆಟ್ರೋ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ ವಿಡಿಯೊ ಯಾವಾಗಿನದ್ದು ಎಂಬುದು ತಿಳಿದಿಲ್ಲ.ಈ ಘಟನೆಯನ್ನು ಆಘಾತಕಾರಿ ಎಂದು ಕರೆದ ನೆಟಿಜನ್‌ಗಳು ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ಗಮನಕ್ಕೆ ತಂದಿದ್ದಾರೆ. ದೆಹಲಿ ಮೆಟ್ರೋ ಸ್ಟೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಕ್ತಿಯೊಬ್ಬರು ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಟ್ವಿಟರ್ ಬಳಕೆದಾರರು “ಬಹುಶಃ ಇದು ದೆಹಲಿ ಮೆಟ್ರೋದಲ್ಲಿ ಮೊದಲ ಬಾರಿಗೆ ಸಂಭವಿಸಿರಬಹುದು” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಕ್ಯಾಮೆರಾದ ಹಿಂದಿನ ವ್ಯಕ್ತಿ, “ನೀವು ಎಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಿ? ನೀವು ಏನು ಮಾಡುತ್ತಿದ್ದೀರಿ?” ಎಂದು ಹೇಳುವುದನ್ನು ಕೇಳಬಹುದು, ಅದಕ್ಕೆ ಆ ವ್ಯಕ್ತಿ “ಹೋ ಗಯಾ, ಝ್ಯಾದಾ ಹೋ ಗಯಾ (ಮೂತ್ರ ಜಾಸ್ತಿ ಬಂದಿತ್ತು)” ಎಂದು ಉತ್ತರಿಸುತ್ತಾನೆ. ವಿಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿ ನಂತರ ಮತ್ತೊಂದು ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿರುವ ತನ್ನ ಮೆಟ್ರೋ ರೈಲನ್ನು ಹಿಡಿಯಲು ಧಾವಿಸಿದನು. ವಿಡಿಯೊದಲ್ಲಿ ಕಂಡುಬರುವಂತೆ, ಕ್ಯಾಮೆರಾ ಹಿಂದೆ ಇರುವ ವ್ಯಕ್ತಿ ಹಳದಿ ಲೈನ್ ಮೆಟ್ರೋ ರೈಲು ಹತ್ತಿದ್ದು, ಆತ ಅಲ್ಲಿಂದಲೂ ಕ್ಯಾಮೆರಾವನ್ನು ಬಾಗಿಲತ್ತ ಹಿಡಿದಾಗ ಆಚೆ ಬದಿಯಲ್ಲಿ ವ್ಯಕ್ತಿ ಮೂತ್ರ ಮಾಡುತ್ತಿರುವುದು ಕಾಣುತ್ತದೆ.
Maybe this Happened first time in Delhi Metro.
Just received a video on wtsapp. Sharing with you pic.twitter.com/iJiWUnBpQy
— Sanjeev Babbar (@SanjeevBabbar) October 29, 2022
ದೆಹಲಿ ಮೆಟ್ರೋ ಸದಾ ಸ್ವಚ್ಛ ದೆಹಲಿ ಮೆಟ್ರೋ ನಿಲ್ದಾಣಗಳು ತಮ್ಮ ಹತ್ತಿರದ ಮತ್ತು ಸ್ವಚ್ಛವಾದ ವಾತಾವರಣಕ್ಕೆ ಹೆಸರುವಾಸಿಯಾಗಿದೆ ಉಗುಳುವುದು ಅಥವಾ ಇನ್ನಿತರ ಕಾರ್ಯಗಳಿಂದ ಹಾಳುಗೆಡವಿದರೆ ದಂಡವನ್ನು ವಿಧಿಸಲಾಗುತ್ತದೆ. ಟ್ವಿಟರ್ ಬಳಕೆದಾರರು ದೆಹಲಿ ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಮೆಟ್ರೋ ರೈಲು ನಿಗಮ (DMRC) ಅನ್ನು ಟ್ಯಾಗ್ ಮಾಡಿದ್ದಾರೆ.
ದೆಹಲಿ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ, “ಸಿಸ್ಟಮ್‌ನೊಳಗೆ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಪ್ರಯಾಣಿಕರಿಗೆ ಸಲಹೆ ನೀಡಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ನಿಲ್ದಾಣದಲ್ಲಿ ಶೌಚಾಲಯಗಳನ್ನು ಒದಗಿಸಲಾಗಿದೆ” ಎಂದು ಹೇಳಿದರು. ಅಂತಹ ಯಾವುದೇ ಚಟುವಟಿಕೆಯನ್ನು ಗಮನಿಸಿದರೆ, ಪ್ರಯಾಣಿಕರು ಹತ್ತಿರದ DMRC ಅಧಿಕಾರಿಯನ್ನು ಸಂಪರ್ಕಿಸಬಹುದು ಅಥವಾ ನಮ್ಮ 24×7 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 155370 ಅಥವಾ ಭದ್ರತಾ ಸಹಾಯವಾಣಿ ಸಂಖ್ಯೆ. 155655 ಆಗಿದ್ದು, ತಕ್ಷಣ ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದರು.
ಹಳದಿ ಲೈನ್ ಮೆಟ್ರೋ ಹಳದಿ ಮಾರ್ಗವು ದೆಹಲಿ ಮೆಟ್ರೋದ ಅತ್ಯಂತ ಹಳೆಯ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿದೆ, ಇದು ಉತ್ತರ ದೆಹಲಿಯ ಸಮಯಪುರ ಬದ್ಲಿ ಮೆಟ್ರೋ ನಿಲ್ದಾಣವನ್ನು ಗುರ್ಗಾಂವ್ (ಹರಿಯಾಣ) ನಲ್ಲಿರುವ ಹುಡಾ ಸಿಟಿ ಸೆಂಟರ್ ಮೆಟ್ರೋ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಹೆಚ್ಚಾಗಿ ಭೂಗತವಾಗಿ, ಹಳದಿ ಲೈನ್ ಮೆಟ್ರೋ ಮಾರ್ಗವು ದೆಹಲಿಯ ಕೆಲವು ಅತ್ಯಂತ ದಟ್ಟಣೆಯ ಪ್ರದೇಶಗಳ ಮೂಲಕ ಹಾದುಹೋಗುತ್ತದೆ, ಹಳದಿ ಮಾರ್ಗದಲ್ಲಿ 37 ನಿಲ್ದಾಣಗಳಿವೆ.