Fact Check ಗುಜರಾತಿನಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ನಡೆಯಲಿದೆ ಜಿದ್ದಾಜಿದ್ದಿನ ಪೈಪೋಟಿ; ವೈರಲ್ ಆಗಿದ್ದು ಫೇಕ್ ಸಮೀಕ್ಷೆ

ಇದರಲ್ಲಿ ಆಡಳಿತಾರೂಢ ಬಿಜೆಪಿ 76 ರಿಂದ 82 ಸ್ಥಾನಗಳು ಮತ್ತು ಅರವಿಂದ ಕೇಜ್ರಿವಾಲ್‌ನ ಆಮ್ ಆದ್ಮಿ ಪಾರ್ಟಿ (AAP) 81 ರಿಂದ 87 ಸ್ಥಾನಗಳನ್ನು ಗಳಿಸುವ ಮೂಲಕ ಭಾರೀ ಪೈಪೋಟಿ ನಡೆಯಲಿದೆ..

Fact Check ಗುಜರಾತಿನಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ನಡೆಯಲಿದೆ ಜಿದ್ದಾಜಿದ್ದಿನ ಪೈಪೋಟಿ; ವೈರಲ್ ಆಗಿದ್ದು ಫೇಕ್ ಸಮೀಕ್ಷೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 07, 2022 | 7:28 PM

ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ (Gujarat Assembly Election) ಕುರಿತಾದ ಅಭಿಪ್ರಾಯ ಸಂಗ್ರಹವೊಂದು (opinion poll) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇದರಲ್ಲಿ ಆಡಳಿತಾರೂಢ ಬಿಜೆಪಿ 76 ರಿಂದ 82 ಸ್ಥಾನಗಳು ಮತ್ತು ಅರವಿಂದ ಕೇಜ್ರಿವಾಲ್‌ನ ಆಮ್ ಆದ್ಮಿ ಪಾರ್ಟಿ (AAP) 81 ರಿಂದ 87 ಸ್ಥಾನಗಳನ್ನು ಗಳಿಸುವ ಮೂಲಕ ಭಾರೀ ಪೈಪೋಟಿ ನಡೆಯಲಿದೆ ಎಂದು ಹೇಳುತ್ತಿದೆ. ಅಂದಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಗ್ರಾಫಿಕ್ ನಕಲಿ ಎಂದು ಬೂಮ್ ಲೈವ್ ವರದಿ ಮಾಡಿದೆ. ನವೆಂಬರ್ 3, 2022 ರಂದು ಭಾರತದ ಚುನಾವಣಾ ಆಯೋಗ (ECI) ಗುಜರಾತ್ ಚುನಾವಣೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಘೋಷಿಸಿತು. ಮೊದಲ ಹಂತದ ಮತದಾನ ಡಿಸೆಂಬರ್ 1 ರಂದು ನಡೆಯಲಿದೆ ಮತ್ತು ಎರಡನೇ ಹಂತದ ಮತದಾನ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಎಣಿಕೆ ನಡೆಯಲಿದೆ. ಅದೇ ದಿನ ಹಿಮಾಚಲ ಪ್ರದೇಶದ ಫಲಿತಾಂಶವೂ ಪ್ರಕಟವಾಗಲಿದೆ.

ಗ್ರಾಫಿಕ್ಸ್​​ನಲ್ಲೇನಿದೆ?

ಅನಾಮಧೇಯವಾಗಿರುವ ಈ ಅಭಿಪ್ರಾಯ ಸಂಗ್ರಹದಲ್ಲಿ ಬಿಜೆಪಿ – 76 ರಿಂದ 82 ಸ್ಥಾನಗಳು, ಕಾಂಗ್ರೆಸ್ – 19 – 25 ಸ್ಥಾನಗಳು ಮತ್ತು ಎಎಪಿ – 81 ರಿಂದ 87 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. 182 ಸ್ಥಾನಗಳಿರುವ ಗುಜರಾತಿನಲ್ಲಿ ಸರಳ ಬಹುಮತಕ್ಕೆ 92 ಸ್ಥಾನಗಳು ಸಾಕು. ಈ ಗ್ರಾಫಿಕ್ಸ್ ನಲ್ಲಿ ಹಿಂದಿಯಲ್ಲಿ ಹೀಗೆ ಬರೆದಿದೆ- गुजरात के बाद देश से भी धीरे धीरे लुप्त हो जाएगी भाजपा (ಗುಜರಾತ್ ನಂತರ, ದೇಶದಲ್ಲಿ ಬಿಜೆಪಿ ನಿಧಾನವಾಗಿ ಕಣ್ಮರೆಯಾಗಲಿದೆ). ಫ್ಯಾಕ್ಟ್ ಚೆಕ್

ಎಎಪಿ – 81 – 87 ಸ್ಥಾನಗಳು ಮತ್ತು ಬಿಜೆಪಿ – 76 ರಿಂದ 82 ಸ್ಥಾನಗಳನ್ನು ನೀಡುವುದಾಗಿ ಗುಜರಾತ್ ಅಭಿಪ್ರಾಯ ಸಂಗ್ರಹದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅಂತಹ ಯಾವುದೇ ಸಮೀಕ್ಷೆಯನ್ನು ಯಾವುದೇ ಚಾನಲ್ ಅಥವಾ ನಂಬಲರ್ಹ ಪೋಲಿಂಗ್ ಏಜೆನ್ಸಿ ಇನ್ನೂ ಬಿಡುಗಡೆ ಮಾಡಿಲ್ಲ ಎಂದು BOOM ಕಂಡುಹಿಡಿದಿದೆ. 2022 ರ ಗುಜರಾತ್ ಚುನಾವಣೆಯಲ್ಲಿ ಎಎಪಿ ಗೆಲುವನ್ನು ಊಹಿಸುವ ಹಲವಾರು ನಕಲಿ ಅಭಿಪ್ರಾಯ ಸಮೀಕ್ಷೆಗಳು ಹರಿದಾಡಿದ್ದವು.

ಈ ಬಗ್ಗೆ ಕೀವರ್ಡ್ ಹುಡುಕಿದಾಗ ಇತ್ತೀಚೆಗೆ ಬಿಡುಗಡೆಯಾದ ಯಾವುದೇ ಅಭಿಪ್ರಾಯ ಸಂಗ್ರಹವು ಎಎಪಿಗೆ 81 ರಿಂದ 87 ಸ್ಥಾನಗಳನ್ನು ಮತ್ತು ಬಿಜೆಪಿಗೆ 76 ರಿಂದ 82 ಸ್ಥಾನಗಳನ್ನು ನೀಡುತ್ತದೆ ಎಂದು ಹೇಳಿಲ್ಲ. ಅಷ್ಟೇ ಅಲ್ಲದೆ ಈ ಸಂಖ್ಯೆಗಳನ್ನು ಯಾವ ಚುನಾವಣಾ ಪೋಲಿಂಗ್ ಏಜೆನ್ಸಿ ಬಿಡುಗಡೆ ಮಾಡಿದೆ ಎಂಬುದನ್ನು ಗ್ರಾಫಿಕ್ ಉಲ್ಲೇಖಿಸಿಲ್ಲ.

ನವೆಂಬರ್ 4, 2022 ರಂದು ಬಿಡುಗಡೆಯಾದ ಎಬಿಪಿ ನ್ಯೂಸ್-ಸಿವೋಟರ್ ಮತ್ತು ಇಂಡಿಯಾ ಟಿವಿ-ಮ್ಯಾಟ್ರಿಜ್ ಅಭಿಪ್ರಾಯ ಸಂಗ್ರಹಗಳ ಪ್ರಕಾರ, ಅಭಿಪ್ರಾಯ ಸಂಗ್ರಹಣೆಗಳು ಕೇವಲ ಮತದಾನದ ಪ್ರವೃತ್ತಿಗಳ ಸೂಚನೆಯನ್ನು ಮಾತ್ರ ನೀಡುತ್ತವೆ. ಈ ಅಭಿಪ್ರಾಯ ಸಂಗ್ರಹದ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು. ಇಂಡಿಯಾ ಟಿವಿ-ಮ್ಯಾಟ್ರಿಜ್ ಬಿಜೆಪಿಗೆ ಬಹುಮತ 119 ಸ್ಥಾನಗಳು ಮತ್ತು ಎಎಪಿ ಮೂರು ಸ್ಥಾನಗಳನ್ನು ಭವಿಷ್ಯ ನುಡಿದಿದೆ. ಆದರೆ ಎಬಿಪಿ ನ್ಯೂಸ್ – ಸಿವೋಟರ್ ಬಿಜೆಪಿ 131 ರಿಂದ 139 ಸ್ಥಾನ ಮತ್ತು ಎಎಪಿ 7 ರಿಂದ 15 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.

ಇತ್ತೀಚೆಗೆ ಗುಜರಾತಿ ಮಾಧ್ಯಮದ ಜಿಎಸ್‌ಟಿವಿ ನ್ಯೂಸ್, ಎಎಪಿ 98 ರಿಂದ 105 ಸ್ಥಾನಗಳಲ್ಲಿ ಗೆಲ್ಲುತ್ತದೆ ಮತ್ತು ಬಿಜೆಪಿ 52 ರಿಂದ 59 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿರುವ ಮತ್ತೊಂದು ನಕಲಿ ಅಭಿಪ್ರಾಯ ಸಂಗ್ರಹವು ವೈರಲ್ ಆಗಿದೆ. GSTV ನ್ಯೂಸ್ ತಮ್ಮ Instagram ಹ್ಯಾಂಡಲ್‌ನಲ್ಲಿ ಅಕ್ಟೋಬರ್ 28, 2022 ರಂದು ನಕಲಿ ಅಭಿಪ್ರಾಯ ಸಂಗ್ರಹ ನಕಲಿ, ನಾವು ಈ ಅಭಿಪ್ರಾಯ ಸಂಗ್ರಹ ಬಿಡುಗಡೆ ಮಾಡಿಲ್ಲ ಎಂದು ಹೇಳಿದೆ.

Published On - 7:27 pm, Mon, 7 November 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ