ಸೀರೆ ತಂದುಕೊಟ್ಟಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಸೀರೆ ತರಲ್ಲಿಲ್ಲ ಎಂಬ ಕಾರಣಕ್ಕೆ ಪ್ರಾರಂಭವಾದ ಜಗಳದಲ್ಲಿ ಪತ್ನಿ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯವನ್ನು ಆರೋಪಿಸಿ ಕುಟುಂಬ ಸಲಹಾ ಕೇಂದ್ರದಲ್ಲಿ ಪರಿಹಾರಕ್ಕಾಗಿ ಮುಂದಾಗಿದ್ದಾಳೆ. ಬಳಿಕ ಕೌನ್ಸಿಲಿಂಗ್ ಅಧಿಕಾರಿಗಳು, ಪೊಲೀಸರ ಸತತ ಸಂಧಾನ ಪ್ರಯತ್ನದಿಂದ ಪತ್ನಿ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ.
2022ರಲ್ಲಿ ಮದುವೆಯಾಗಿದ್ದ ಈ ಜೋಡಿಯ ನಡುವೆ ಕಳೆದ 6 ತಿಂಗಳುಗಳಿಂದ ಒಂದಲ್ಲ ಒಂದು ಕಾರಣಕ್ಕೆ ಪ್ರತಿದಿನ ಜಗಳ ನಡೆಯುತ್ತಿತ್ತು. ಇದೀಗ ಸೀರೆಯೊಂದರ ಕಾರಣಕ್ಕೆ ವಾಗ್ವಾದ ನಡೆದಿದ್ದು, ಇದು ಪರಸ್ಪರ ಡಿವೋರ್ಸ್ ನೀಡುವ ಹಂತಕ್ಕೆ ಬಂದು ತಲುಪಿದೆ. ಕೌಟುಂಬಿಕ ಸಲಹಾ ಕೇಂದ್ರದಲ್ಲಿ, ತನ್ನ ಪತಿ ತನಗೆ ಹೊಸ ಸೀರೆಯನ್ನು ತಂದುಕೊಟ್ಟಿಲ್ಲ ಮತ್ತು ತನ್ನ ಮೇಲೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇದನ್ನೂ ಓದಿ: ಪೆಟ್ರೋಲ್ ಬಂಕ್ನಲ್ಲಿ ಕಾಯುತ್ತಿದ್ದಾಗಲೇ ದಿಢೀರ್ ಹೃದಯಾಘಾತ; ಕುಸಿದು ಬಿದ್ದು ಶಿಕ್ಷಕ ಸಾವು
ಬಳಿಕ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಸಂಧಾನ ನಡೆದಿದ್ದು, ಪತಿ ಪತ್ನಿಗೆ ಸೀರೆ ಕೊಡಿಸುವುದಾಗಿ ಒಪ್ಪಿಕೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ವಿಚ್ಚೇದನ ಪಡೆದುಕೊಳ್ಳದಂತೆ ದಂಪತಿಗೆ ತಿಳುವಳಿಕೆ ನೀಡಲಾಗಿದೆ. ಬಳಿಕ ತ್ನಿ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿದ್ದು, ಇಬ್ಬರನ್ನು ಮನೆಗೆ ಕಳುಹಿಸಲಾಗಿದೆ ಎಂದು ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರರಾದ ಡಾ ಸತೀಶ್ ಸಿಕರ್ವಾರ್ ಹೇಳಿರುವುದು ವರದಿಯಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Tue, 30 July 24