Video: ಕರುವಿನೊಂದಿಗೆ ವಾಕಿಂಗ್ ಹೊರಟ ಯುವಕ, ವೈರಲ್ ಆಯ್ತು ದೃಶ್ಯ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ದೃಶ್ಯಗಳು ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಇಂತಹದ್ದೇ ಪುಟಾಣಿ ಕರುವಿನ ವಿಡಿಯೋ ವೈರಲ್ ಆಗಿದೆ. ಕರುವಿನೊಂದಿಗೆ ಯುವಕನೊಬ್ಬ ವಾಕಿಂಗ್ ಹೋಗುತ್ತಿರುವ ದೃಶ್ಯವು ಎಲ್ಲರ ಗಮನ ಸೆಳೆಯುತ್ತಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Video: ಕರುವಿನೊಂದಿಗೆ ವಾಕಿಂಗ್ ಹೊರಟ ಯುವಕ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Dec 21, 2025 | 12:57 PM

ವಾಕಿಂಗ್‌ ವೇಳೆ ಮನೆಯ ಮುದ್ದಿನ ಶ್ವಾನಗಳನ್ನು (Dog) ತಮ್ಮೊಂದಿಗೆ ಕರೆದುಕೊಂಡು ಬರುವವರನ್ನು ನೀವು ನೋಡಿರುತ್ತೀರಿ. ವಾಕಿಂಗ್‌ಗೆಂದು ಬಂದ ಸಂದರ್ಭದಲ್ಲಿ ಮಾಲೀಕ ಹಾಗೂ ಶ್ವಾನಗಳ ನಡುವಿನ ಪ್ರೀತಿ ಹಾಗೂ ಬಾಂಧವ್ಯಕ್ಕೆ ಈ ಕೆಲ ದೃಶ್ಯಗಳು ಸಾಕ್ಷಿಯಾಗುತ್ತವೆ. ಆದರೆ ಇಲ್ಲೊಬ್ಬ ಯುವಕನು ವಾಕಿಂಗ್‌ಗೆ ಶ್ವಾನವನ್ನು ಕರೆದುಕೊಂಡು ಹೋಗಿಲ್ಲ. ಬದಲಾಗಿ ಪುಟಾಣಿ ಕರುವಿನೊಂದಿಗೆ (calf) ಸಂಜೆಯ ವೇಳೆ ವಾಕಿಂಗ್‌ಗೆ ತೆರಳಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಸೌರಭ್ ಜೈನ್ (Sourabh Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವಕನೊಬ್ಬ ಸಂಜೆಯ ವಾಕಿಂಗ್‌ಗೆ ಸಮಯದಲ್ಲಿ ಪುಟಾಣಿ ಕರುವನ್ನು ತನ್ನೊಂದಿಗೆ ಕರೆದುಕೊಂಡು ಬಂದಿರುವುದನ್ನು ಕಾಣಬಹುದು. ಅಲ್ಲಿದ್ದ ಜನರು ಕರುವನ್ನು ನೋಡುತ್ತಾ ನಿಂತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಕಲಿಸುತ್ತಿದ್ದಂತೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ

ಈ ವಿಡಿಯೋ 1.2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂಟರ್ನೆಟ್‌ನಲ್ಲಿ ಇವತ್ತಿನ ಬೆಸ್ಟ್ ವಿಡಿಯೋ ಎಂದಿದ್ದಾರೆ. ಮತ್ತೊಬ್ಬರು, ಮುದ್ದಾಗಿದೆ ಈ ದೃಶ್ಯ ಎಂದರೆ ಇನ್ನೊಬ್ಬರು, ಶ್ವಾನ ಪ್ರೇಮಿಗಳು ಇದನ್ನು ನೋಡಿ ಅಳ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:57 pm, Sun, 21 December 25