Video: 8,000 ಮೈಲಿ ಪ್ರಯಾಣ ಮಾಡಿ ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಯುವಕ

ಪರಿಶುದ್ಧ ಸ್ನೇಹವೇ ಹಾಗೆ, ಈ ನಿಸ್ವಾರ್ಥ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಂದರ ಸ್ನೇಹ ಸಂಬಂಧ ಸಾರುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸ್ನೇಹಿತರ ಪುನರ್ಮಿಲನದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸ್ನೇಹಿತರಿಬ್ಬರ ಹೃದಯ ಸ್ಪರ್ಶಿ ದೃಶ್ಯ ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

 Video: 8,000 ಮೈಲಿ ಪ್ರಯಾಣ ಮಾಡಿ ಸ್ನೇಹಿತನಿಗೆ ಸರ್ಪ್ರೈಸ್ ನೀಡಿದ ಯುವಕ
ವೈರಲ್ ವಿಡಿಯೋ
Image Credit source: Instagram

Updated on: Dec 23, 2025 | 11:48 AM

ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೆಂದರೆ ಅದುವೇ ಸ್ನೇಹ (friendship). ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆತ್ಮೀಯ ಸ್ನೇಹಿತನು ಕಷ್ಟಕಾಲದಲ್ಲಿ ತನ್ನ ಗೆಳೆಯನಿಗೆ ಧೈರ್ಯವಾಗಿ ಜೊತೆಗೆ ನಿಲ್ಲುತ್ತಾನೆ. ಆದರೆ ಇಲ್ಲೊಬ್ಬ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಅಮೆರಿಕದಿಂದ (America) ಪುಣೆಗೆ ಬಂದಿದ್ದಾನೆ. 12,800 ಕಿಲೋಮೀಟರ್ (8,000 ಮೈಲಿ) ಪ್ರಯಾಣ ಮಾಡಿ ತನ್ನ ಸ್ನೇಹಿತನನ್ನು ಭೇಟಿ ಮಾಡಿದ್ದಾನೆ. ಈ ಸ್ನೇಹಿತರಿಬ್ಬರ ಪುನರ್ಮಿಲನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪ್ರೇಶಿತ್ ಗುಜಾರ್ ( Preshit Gujar) ಎಂಬ ವ್ಯಕ್ತಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸರ್ವೇಶ್ ವೈಭವ್ ತಿಖೆ ಹೆಸರಿನ ತನ್ನ ಆತ್ಮೀಯ ಸ್ನೇಹಿತನನ್ನು ಸೇರಿದಂತೆ ಇತರ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾನೆ. ಉಳಿದ ಸ್ನೇಹಿತರು  ಸ್ನೇಹಿತರಿಬ್ಬರ ಪುನರ್ಮಿಲನದ ದೃಶ್ಯವನ್ನು ರೆಕಾರ್ಡ್ ಮಾಡಲು ಸಹಾಯ ಮಾಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಅಲ್ಲೇ ಇದ್ದವರೊಂದಿಗೆ ಮಾತನಾಡುತ್ತಾ ಕುಳಿತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಮುಖಕ್ಕೆ ಕರ್ಚಿಫ್‌ ಸುತ್ತಿಕೊಂಡ ವ್ಯಕ್ತಿಯೂ ಅಲ್ಲೇ ಕುಳಿತಿದ್ದ ವ್ಯಕ್ತಿಯ ಪಕ್ಕದಲ್ಲಿ ಕುಳಿತು ಅವನನ್ನು ನೋಡುತ್ತ ಇರುವುದನ್ನು ಕಾಣಬಹುದು. ಆದರೆ ಈ ವ್ಯಕ್ತಿಗೆ ಮುಖವಾಡ ಧರಿಸಿದ ವ್ಯಕ್ತಿ ಆಪ್ತ ಸ್ನೇಹಿತ ಎಂದು ತಿಳಿದಿಲ್ಲ. 8000 ಮೈಲಿ ದಾಟಿ ತನ್ನ ಸ್ನೇಹಿತನನ್ನು ನೋಡಲು ಬಂದಿದ್ದು ಸರ್ಪ್ರೈಸ್ ನೀಡಿದ್ದಾನೆ. ಅರ್ಧ ಮುಖಕ್ಕೆ ಮುಚ್ಚಲಾದ ಕರ್ಚಿಫ್ ತೆಗೆಯುತ್ತಿದ್ದಂತೆ ಪುಣೆ ಮೂಲದ ಸ್ನೇಹಿತನಿಗೆ ಶಾಕ್ ಆಗಿದ್ದು, ಮುಖಭಾವವೇ ಬದಲಾಗಿದೆ. ಪರಸ್ಪರ ಒಬ್ಬರೊಬ್ಬರನ್ನು ಅಪ್ಪಿಕೊಳ್ಳುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ಇದನ್ನೂ ಓದಿ:ಎಂಟು ವರ್ಷಗಳ ಬಳಿಕ ಹೆತ್ತವರನ್ನು ಭೇಟಿಯಾದ ಮಗ, ಕಣ್ಣೀರು ಹಾಕಿದ ಅಪ್ಪ ಅಮ್ಮ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನೀವು ಈ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಸ್ನೇಹಿತರಿಬ್ಬರ ಪುನರ್ಮಿಲನ, ಈ ದೃಶ್ಯ ನೋಡಿ ಖುಷಿಯಾಯ್ತು ಎಂದಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ಎಷ್ಟು ಸಲ ನೋಡಿದ್ರು ಸಾಲಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ