AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಂಟರ್ವ್ಯೂ ವೇಳೆ ಸ್ಪ್ಯಾನಿಷ್ ಭಾಷೆ ಮಾತನಾಡಲು ಒತ್ತಡ ಹಾಕಿದ ಮ್ಯಾನೇಜರ್, ಗರಂ ಆದ ಯುವತಿ

ಉದ್ಯೋಗ ಸಂದರ್ಶನಕ್ಕೆ ಹೋದ ವೇಳೆ ಕಹಿ ಅನುಭವ ಆಗೋದಿದೆ. ಇದೀಗ ಈ ಯುವತಿಗೂ ಅದೇ ರೀತಿಯಾಗಿದೆ. ಜೂನಿಯರ್ ವಿಶ್ಲೇಷಕ ಹುದ್ದೆಯ ಸಂದರ್ಶನದ ವೇಳೆ ಕಂಪನಿಯು ಸ್ಪ್ಯಾನಿಷ್ ಮಾತನಾಡಲು ಹಾಗೂ ಬಲವಂತವಾಗಿ ಎಐ ಕೋರ್ಸ್ ಅನ್ನು ಪೂರ್ಣಗೊಳಿಸಲು ಒತ್ತಡ ಹೇರಿದ್ದಾರೆ. ಕಂಪನಿ ಮ್ಯಾನೇಜರ್ ಹೀಗೆ ನಡೆದುಕೊಳ್ಳುತ್ತಿದ್ದಂತೆ ಹಿಂದೆ ಮುಂದೆ ನೋಡದೇನೇ ಯುವತಿ ಜಾಬ್‌ ರಿಜೆಕ್ಟ್ ಮಾಡಿದ್ದಾಳೆ. ಈ ರೆಡ್ಡಿಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral: ಇಂಟರ್ವ್ಯೂ ವೇಳೆ ಸ್ಪ್ಯಾನಿಷ್ ಭಾಷೆ ಮಾತನಾಡಲು ಒತ್ತಡ ಹಾಕಿದ ಮ್ಯಾನೇಜರ್, ಗರಂ ಆದ ಯುವತಿ
ಸಾಂದರ್ಭಿಕ ಚಿತ್ರImage Credit source: skynesher/E+/Getty Images
ಸಾಯಿನಂದಾ
|

Updated on:Nov 16, 2026 | 5:21 PM

Share

ಈಗಿನ ಕಾಲದಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಕಷ್ಟಕರ. ಉದ್ಯೋಗಕ್ಕಾಗಿ (job) ನಾನಾ ರೀತಿಯ ಪ್ರಯತ್ನ ಮಾಡ್ತಾರೆ. ಕೆಲವರು ಇಂಟರ್ವ್ಯೂ ಕೊಟ್ಟು ಸುಸ್ತಾಗಿ ಬಿಡ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಇಂಟರ್ವ್ಯೂ ವೇಳೆ ಮ್ಯಾನೇಜರ್ ನಡೆದುಕೊಂಡ ರೀತಿಗೆ ಸುಸ್ತಾಗಿದ್ದಾಳೆ. ಜೂನಿಯರ್ ವಿಶ್ಲೇಷಕ ಹುದ್ದೆಗೆ ಫೋನ್ ಮೂಲಕ  ಮಾಡಿದ ಸಂದರ್ಶನದಲ್ಲಿ ಉತ್ತೀರ್ಣರಾಗಿದ್ದಾಳೆ. ಆದಾದ ಬಳಿಕ ಆಫೀಸಿಗೆ ಹೋಗಿದ್ದು ಅಲ್ಲಿ ಆಕೆಗೆ ಕಹಿ ಅನುಭವವಾಗಿದೆ. ಮ್ಯಾನೇಜರ್ ವಿಚಿತ್ರವಾಗಿ ನಡೆದುಕೊಂಡಿದ್ದು, ಈ ಉದ್ಯೋಗವೇ ಬೇಡ ಎಂದು ಅಲ್ಲಿಂದ ಹೊರ ನಡೆದಿದ್ದಾಳೆ. ಈ ರೆಡ್ಡಿಟ್ ಪೋಸ್ಟ್ ಸದ್ಯ ಚರ್ಚೆ ಹುಟ್ಟುಹಾಕಿದೆ.

ಇದು ನನ್ನ ಜೀವನದ ಕೆಟ್ಟ ಇಂಟರ್ವ್ಯೂ

ಆರ್‌/ಜಾಬ್‌ (r/jobs) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದು ಯುವತಿ ಇಂಟರ್ವ್ಯೂ ವೇಳೆ ತನಗಾದ ಕಹಿ ಅನುಭವ ಹಂಚಿಕೊಂಡಿದ್ದಾಳೆ. ಈ ಪೋಸ್ಟ್‌ನಲ್ಲಿ ಇದು ನನ್ನ ಜೀವನದ ಕೆಟ್ಟ ಸಂದರ್ಶನ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ನಾನು ಆಫೀಸಿಗೆ ಹೋದಾಗ ರಿಸೆಪ್ಶನಿಷ್ಟ್ ಇರಲಿಲ್ಲ. ಲಿಫ್ಟ್ ಬಳಸಲು ಪಾಸ್ ಅಗತ್ಯವಿತ್ತು. ನನ್ನ ಬಳಿ ಪಾಸ್ ಇರಲಿಲ್ಲ. ನಾನು ಭೇಟಿಯಾಗಲು ಬಂದ ಮ್ಯಾನೇಜರ್ ಹೆಸರು ನನಗೆ ತಿಳಿದಿರಲಿಲ್ಲ. ಸುಮಾರು 100 ಜನರ ಉಪಸ್ಥಿತಿಯಿದ್ರೂ ಆಫೀಸ್ ಸ್ಮಶಾನದಂತೆ ಶಾಂತವಾಗಿತ್ತು ಎಂದು ಹೇಳಿದ್ದಾಳೆ.

ರೆಡ್ಡಿಟ್‌ ಪೋಸ್ಟ್‌ ಇಲ್ಲಿದೆ

Just had the rudest interview experience by u/Classic-Extension-12 in jobs

ಸ್ಪ್ಯಾನಿಷ್ ಭಾಷೆ ಮಾತನಾಡಲು ಒತ್ತಡ ಹಾಕಿದ ಮ್ಯಾನೇಜರ್‌

ನನ್ನನ್ನು ಮೀಟಿಂಗ್ ರೂಮ್‌ಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಜೂಮ್ ಮೂಲಕ ಮತ್ತೊಬ್ಬ ಮ್ಯಾನೇಜರ್ ಸೇರಿಕೊಂಡರು. ಈ ಸಂಭಾಷಣೆಯ ನಡುವೆ ಮ್ಯಾನೇಜರ್ ರೊಬ್ಬರು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದ್ರು, ನನಗೆ ನಿಜವಾಗಿ ಆತಂಕವಾಯ್ತು. ಇನ್ನೊಬ್ಬ ಮ್ಯಾನೇಜರ್ ಸ್ಪ್ಯಾನಿಷ್ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ರು. ನನಗೆ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. ಆದರೆ ನಾನು ಪ್ರತಿ ಬಾರಿ ಪ್ರತಿಕ್ರಿಯಿಸಲು ಪ್ರಯತ್ನಿಸಿದಾಗ್ಲೂ ವ್ಯವಸ್ಥಾಪಕರು ನನ್ನನ್ನು ಅಡ್ಡಿಪಡಿಸುತ್ತಿದ್ದರು ಎಂದು ವಿವರಿಸಿದ್ದಾಳೆ.

ವಿಚಿತ್ರ ಪ್ರಶ್ನೆಗಳನ್ನು ಕೇಳಿದ ಮ್ಯಾನೇಜರ್

ಕೀಬೋರ್ಡ್ ಸಂಪೂರ್ಣ ಸ್ಪ್ಯಾನಿಷ್ ಭಾಷೆಯಲ್ಲಿ ಹೊಂದಿದ್ದ ಲ್ಯಾಪ್‌ಟಾಪ್‌ನಲ್ಲಿ ನನಗೆ ಕೆಲಸ ನೀಡಲಾಯ್ತು. ನಾನು ಕಕ್ಕಾಬಿಕ್ಕಿಯಾದೆ. ಈ ವೇಳೆ ಇದು ಮೂಲಭೂತ ವಿಷಯ ಎಂದು ತಮಾಷೆ ಮಾಡಿದರು. ಅಲ್ಲೇ ಇದ್ದ ಮ್ಯಾನೇಜರ್ ಇದುವರೆಗೆ ಎಷ್ಟು ಸ್ಥಳಗಳಿಗೆ ಅರ್ಜಿ ಸಲ್ಲಿಸಿದ್ದೀರಿ ಎಂಬಂತಹ ವಿಚಿತ್ರ ಪ್ರಶ್ನೆಗಳನ್ನು ಕೇಳಲಾಯಿತು. ಎಐ ಕೋರ್ಸ್ ಕಲಿಯಲು ಸಲಹೆ ನೀಡಿದ್ರು. ಇದನ್ನೆಲ್ಲಾ ಸಹಿಸಿಕೊಳ್ಳಲು ನಾನು ರೆಡಿ ಇರಲಿಲ್ಲ. ಕೋಪವು ಅತಿರೇಕಕ್ಕೆ ಹೋಯಿತು. ಇಂಟರ್ವ್ಯೂಗೆ ವಿದಾಯ ಹೇಳಿದೆ ಎಂದು ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: ಕೆಲಸದಿಂದ ವಜಾಗೊಳಿಸಿದ್ದ ಮಾಜಿ ಉದ್ಯೋಗಿಯಿಂದಲೇ ಬಾಸ್‌ಗೆ ಬಂತು ಜಾಬ್ ಆಫರ್

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮಗಾಗಿ ನೀವು ನಿಂತಿದ್ದನ್ನು ಕಂಡು ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಕೆಲಸಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕೆಲ್ಸ ಮುಖ್ಯವಾದ್ರೂ, ಸ್ವಾಭಿಮಾನಕ್ಕಿಂತ ಏನೂ ಮುಖ್ಯವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Mon, 16 November 26

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ: ತಪ್ಪಿದ ಅನಾಹುತ
ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆ: ತಪ್ಪಿದ ಅನಾಹುತ
‘ತಲೆ ಮೇಲೆ ಗಾನವಿ ಕಾಲಿಟ್ಟಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ
‘ತಲೆ ಮೇಲೆ ಗಾನವಿ ಕಾಲಿಟ್ಟಳು’: ಬಿಗ್ ಬಾಸ್ ಒಳಗಿನ ವಿಷಯ ತೆರೆದಿಟ್ಟ ಸೋನಿಕಾ
ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್‌:ಸಚಿವ ಬೈರತಿ ಸುರೇಶ್ ಮಹತ್ವದ ಮಾಹಿತಿ
ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್‌:ಸಚಿವ ಬೈರತಿ ಸುರೇಶ್ ಮಹತ್ವದ ಮಾಹಿತಿ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
ರೇಷನ್ ಕಾರ್ಡ್‌ಗಾಗಿ 40 ವರ್ಷಗಳಿಂದ ಒಂಟಿ ವೃದ್ಧೆಯ ಪರದಾಟ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
‘ನಾನು ಕನ್ನಡ ನಟರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ’; ಶ್ರೀರಾಮ್ ಸ್ಪಷ್ಟನೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: 280 ಕೋಟಿ ರೂ. ವೇತನ ಹಿಂಬಾಕಿ ಬಿಡುಗಡೆ
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಹೊಸ ಗಂಗಾ ಮನೆಯ ಬಗ್ಗೆ ಮುಕ್ತವಾಗಿ ಹಂಚಿಕೊಂಡ ಸಿಎಂ ಡಿಕೆ ಶಿವಕುಮಾರ್‌
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಇ-ಕೆವೈಸಿ ಹೆಸರಲ್ಲಿ ವಸೂಲಿಗಿಳಿದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
ಜೆಡಿಎಸ್‌-ಬಿಜೆಪಿ ಮೈತ್ರಿ ಭಿನ್ನಾಭಿಪ್ರಾಯವಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​
'ನಿಖಿಲ್​​ಗೆ ದೇಗುಲ ಪ್ರವೇಶ ನಿರಾಕರಣೆ ದೊಡ್ಡ ಸುದ್ದಿನಾ?': ಪ್ರಿಯಾಂಕ್​​