
ಕಾರ್ಪೊರೇಟ್ (Corporate) ಜಗತ್ತೇ ಹಾಗೆ, ಕೈ ತುಂಬಾ ಸಂಬಳ ಸಿಕ್ಕಿದ್ರು ಒತ್ತಡ ಮಾತ್ರ ಅಷ್ಟೇ ಡಬಲ್. ಹೀಗಾಗಿ ಈ ವರ್ಕ್ ಲೈಫ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ ಮಾಡೋದಕ್ಕೆ ಒದ್ದಾಡ್ತಾರೆ. ಆದ್ರೆ ಇಲ್ಲೊಬ್ಬ ಯುವತಿಯದ್ದು ಅದೇ ಕಥೆ. ಕೆಲಸದ ಒತ್ತಡಕ್ಕೆ ಸಿಲುಕಿ ಈ ಯುವತಿ ಭಾವನಾತ್ಮಕವಾಗಿ ಕುಸಿದು ಹೋಗಿದ್ದಾಳೆ. ದೀರ್ಘ ಕೆಲಸದ ಸಮಯ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಗೆ ನೆಟ್ಟಿಗರು ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಪ್ರೋಸೆಸ್ಸಿಂಗ್ ಆನ್ ರೆಕಾರ್ಡ್ (processingonrecord) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ತಡರಾತ್ರಿಯವರೆಗೆ ಕೆಲಸ, ಕೆಲಸ ಮುಗಿದ ನಂತರ ಏನನ್ನೂ ಮಾಡಲು ಆಗಲ್ಲ. ತೀರಾ ದಣಿಯುವುದರಿಂದ ಊಟ ಮಾಡಲ್ಲ. ನಿನ್ನೆ ರಾತ್ರಿ 1 ಗಂಟೆಯವರೆಗೆ ಕೆಲಸ ಮಾಡಿದೆ. ನಾನು ಊಟ ಮಾಡಲು ಸಾಧ್ಯವಾಗಲಿಲ್ಲ. ಕೆಲಸ ಮುಗಿಸುವ ಹೊತ್ತಿಗೆ ತುಂಬಾ ತಡವಾಗಿತ್ತು. ಹಸಿವಾಗಿತ್ತು, ಆದರೆ ತುಂಬಾ ಸುಸ್ತಾಗಿದ್ದ ಕಾರಣ ಯಾವುದು ಬೇಡ ಆಗಿತ್ತು ಎಂದು ಹೇಳಿದ್ದಾಳೆ.
ನನ್ನ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ನಾನು ದುಡಿಯುವುದರಿಂದ ನನ್ನ ಮನೆಯವರು ಮೂರೊತ್ತು ಹೊಟ್ಟೆ ತುಂಬಾ ತಿನ್ನಲು ಸಾಧ್ಯ. ಹೀಗಾಗಿ ರಾಜೀನಾಮೆ ನೀಡಲು ಸಾಧ್ಯವಿಲ್ಲ. ನನ್ನ ಸಮಯವನ್ನೆಲ್ಲಾ ಈ ಕೆಲಸಕ್ಕೆ ನೀಡುವುದರಿಂದ ನನಗೆ ಬೇರೆ ಕೆಲಸ ಹುಡುಕಲು ಸಾಧ್ಯವಾಗ್ತಾ ಇಲ್ಲ. ನಾನು ಕುಣಿಕೆಯಲ್ಲಿ ಸಿಲುಕಿಕೊಂಡಂತೆ ಅನಿಸುತ್ತಿದೆ, ಹೊರಬರಲು ಸಾಧ್ಯವಾಗ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ: ದೀಪಾವಳಿಗೆ ಐಫೋನ್ 16 ಗಿಫ್ಟ್ ಕೊಟ್ಟ ಕಂಪನಿ, ಉದ್ಯೋಗಿಗಳು ಫುಲ್ ಖುಷ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಯುವತಿಗೆ ಸಲಹೆ ನೀಡಿದ್ದಾಳೆ. ಒಬ್ಬ ಬಳಕೆದಾರ, ನಿಮ್ಮ ಬಾಸ್ ಹೇಳುವ ಎಲ್ಲಾ ಕೆಲಸವನ್ನು ಮಾಡ್ಬೇಡಿ, ಗಡಿಗಳನ್ನು ಇರಿಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ತುರ್ತು ಕೆಲಸವೇ ಇರಲಿ, ನಿಮ್ಮ ಊಟ ತಿಂಡಿಗೆ ಸಮಯ ನಿಗದಿಸಿಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಏನೇ ಕಮಿಟ್ಮೆಂಟ್ ಇರಲಿ, ಕೆಲಸಕ್ಕೆ ರಾಜೀನಾಮೆ ನೀಡಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ