Video: ನಾಯಿ ಮರಿಗಳ ಹೆಜ್ಜೆ ಗುರುತಿನಿಂದ ಮನೆ ಬಾಗಿಲನ್ನು ಅಲಂಕರಿಸಿದ ಯುವತಿಯರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಆದರೆ ಇದೀಗ ಮನೆ ಬಾಗಿಲಿನ ಅಲಂಕಾರಕ್ಕೆ ಯುವತಿಯರಿಬ್ಬರೂ ಕಂಡುಕೊಂಡ ಮಾರ್ಗದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ದೃಶ್ಯ ನೋಡಿದ ಮೇಲೆ ಈ ಇಬ್ಬರೂ ಯುವತಿಯರ ಬುದ್ಧಿವಂತಿಕೆಯನ್ನು ನೀವು ಖಂಡಿತ ಮೆಚ್ಚುತ್ತೀರಿ. ನೆಟ್ಟಿಗರು ಈ ವಿಡಿಯೋ ಕಂಡು ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Video: ನಾಯಿ ಮರಿಗಳ ಹೆಜ್ಜೆ ಗುರುತಿನಿಂದ ಮನೆ ಬಾಗಿಲನ್ನು ಅಲಂಕರಿಸಿದ ಯುವತಿಯರು
ವೈರಲ್‌ ವಿಡಿಯೋ
Image Credit source: Instagram

Updated on: Jan 13, 2026 | 2:18 PM

ಮನೆಯನ್ನು ಸುಂದರವಾಗಿ ಅಲಂಕರಿಸುವುದರಲ್ಲಿ ಹೆಂಗಳೆಯರು ಎತ್ತಿದ ಕೈ. ಹೀಗಾಗಿ ಬಿಸಾಡುವ ವಸ್ತುಗಳನ್ನು ಬಳಸಿ ಸುಂದರವಾದ ಅಲಂಕಾರಿಕ ಸಾಮಗ್ರಿಗಳನ್ನು (decorative items) ತಯಾರಿಸುತ್ತಾರೆ. ಆದರೆ ಈ ಯುವತಿಯರು (young woman’s) ಮನೆ ಬಾಗಿಲನ್ನು ಅಲಂಕರಿಸಲು ಮನೆಯ ಮುದ್ದಿನ ನಾಯಿಮರಿಗಳನ್ನು ಬಳಸಿದ್ದಾರೆ. ಅದೇಗೆ ಅಂತೀರಾ?, ಈ ಕುರಿತಾದ ಸ್ಟೋರಿ ಓದಿ.

Puran8200singh ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವತಿಯರಿಬ್ಬರೂ ತಮ್ಮ ಮನೆಯ ಬಾಗಿಲನ್ನು ಅಲಂಕರಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಈ ಇಬ್ಬರೂ ಯುವತಿಯರು ಅಳವಡಿಸಿಕೊಂಡ ವಿಧಾನದ ಬಗ್ಗೆ ನೀವು ಊಹೆ ಮಾಡಿರಲು ಸಾಧ್ಯವಿಲ್ಲ. ನಾಯಿ ಮರಿಗಳನ್ನು ಹಿಡಿದುಕೊಂಡು ಅದರ ಪಾದಗಳನ್ನು ಬಣ್ಣದಲ್ಲಿ ಅದ್ದಿದ್ದಾರೆ. ಆ ಬಳಿಕ ಬಣ್ಣದಲ್ಲಿ ಅದ್ದಿದ ಪಾದಗಳನ್ನು ಮನೆ ಬಾಗಿಲಿಗೆ ಒತ್ತಿ ಹಿಡಿದು ಸುಂದರವಾದ ವಿನ್ಯಾಸ ಬರುವಂತೆ ಮಾಡಿದ್ದಾರೆ. ಮನೆ ಬಾಗಿಲಿನ ಮೇಲೆ ನಾಯಿ ಮರಿಗಳ ಹೆಜ್ಜೆ ಗುರುತುಗಳು ಮೂಡಿರುವುದನ್ನು ಕಾಣಬಹುದು. ಈ ರೀತಿ ವಿಧಾನಗಳನ್ನು ಬಳಸಿದ್ದು ಇದೇ ಮೊದಲಾಗಿದ್ದು, ಈ ಯುವತಿಯರ ಬುದ್ಧಿವಂತಿಕೆಯನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ನೀವು ಕೂಡ ಮನೆ ಮುಂದೆ ಈ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ನೋಡಿದ್ದೀರಾ?

ಈ ವಿಡಿಯೋ 1.8 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ದೋಗೇಶ್ ಭಾಯ್ ಅವರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇಂತಹ ಐಡಿಯಾ ನಮಗೂ ಹೊಳೆಯಲಿಲ್ಲ ಎಂದಿದ್ದಾರೆ. ಮತ್ತೊಬ್ಬರು ಪಾಪ ಆ ನಾಯಿಮರಿಗಳು ಮನಸ್ಸಲ್ಲಿ ಎಷ್ಟು ಬೈದುಕೊಳ್ಳುತ್ತಿವೆ ದೇವರಿಗೆ ಗೊತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ