Social Media : ಇದು ಸೃಜನಶೀಲ ಆರ್ಥಿಕತೆಯ (Creator Economy) ಯುಗ. ಜನರ ಗಮನವೇ (attention) ಇಂದಿಲ್ಲಿ ಚಲಾವಣೆಯಲ್ಲಿರುವ ನಾಣ್ಯ. Content is king ಎನ್ನುವುದಾರೆ ವೈರಲ್ ಕಂಟೆಂಟ್ ಎನ್ನುವುದು ಚಕ್ರಾಧಿಪತಿ. ಲಕ್ಷಾಂತರ ಲೈಕುಗಳು ನೋಟಗಳು ಸಿಕ್ಕರೆ ಸ್ವರ್ಗಾರೋಹಣ. ಇಲ್ಲದಿದ್ದಲ್ಲಿ ಪ್ರಪಾತ ದರ್ಶನ. ಇಲ್ಲೊಬ್ಬ ಯೂಟ್ಯೂಬರ್ ತನ್ನ ವಿಡಿಯೋವನ್ನು ಹಿಟ್ ಮಾಡಲು ಪ್ರಪಾತ ದರ್ಶನವನ್ನೇ ಮಾಡಿಸಿದ್ದಾನೆ. ತಾನು ಹಾರಿಸುತ್ತಿದ್ದ ಕಿರುವಿಮಾನದಿಂದ ಜಿಗಿದು ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕಚ್ಚುವಂತೆ ಮಾಡಿದ್ದಾನೆ. ಅದ್ಯಾಕೆ ಅಂತೀರಾ? ಸುಮ್ಮನೇ ಒಂದು ಕಡೆಯಿಂದ ಇನ್ನೊಂದು ಕಡೆ ವಿಮಾನ ಹಾರಿಹೋದರೆ ಅದನ್ನ್ಯಾರು ನೋಡುತ್ತಾರಲ್ಲವೆ?
YouTuber is facing 20 years in prison after deliberately crashing a plane for views. pic.twitter.com/RLQodya6yk
ಇದನ್ನೂ ಓದಿ— non aesthetic things (@PicturesFoIder) June 4, 2023
ಇವನ ಇಂಥ ಸಾಹಸಕ್ಕೆ 20 ವರ್ಷ ಜೈಲು ಶಿಕ್ಷೆ ದಕ್ಕುವ ಸಂಭವವಿದೆಯಂತೆ. ‘ಮೂರ್ಖತನದ ಆಟವಾಡಿದವರಿಗೆ ತಕ್ಕ ಬಹುಮಾನ ದಕ್ಕುವುದು,’ ಎಂದೊಬ್ಬರು ತೀರ್ಪು ನೀಡಿದ್ದಾರೆ. ‘ನಾನು ಜಿಟಿಎ (GTA) ಆಡುವಾಗ ಇದನ್ನು ಲೆಕ್ಕವಿಲ್ಲದಷ್ಟು ಸಲ ಮಾಡಿದ್ದೇನೆ ಮತ್ತು ಕ್ಷಣಾರ್ಧದಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ ಕೂಡ’ ಎಂದು ವಿಡಿಯೋ ಗೇಮರ್ ಒಬ್ಬರು ತಮ್ಮ ಅಕ್ಕಿಕಾಳು ಎಸೆದಿದ್ದಾರೆ. ‘ಇದಕ್ಕೆ ಇಪ್ಪತ್ತು ವರ್ಷದ ಶಿಕ್ಷೆಯೇ? ಅತಿಯಾಯಿತು.’ ಎಂದಿದ್ದಾರೆ ಒಬ್ಬರು. ಒಟ್ಟಿನಲ್ಲಿ ಆ ಯೂಟ್ಯೂಬರ್ ಬಗ್ಗೆ ಸಹಾನುಭೂತಿ ತೋರಿಸಿದವರು ಕೆಲ ಮಂದಿಯಷ್ಟೇ.
ಇದನ್ನೂ ಓದಿ : Viral Video: ಕಾಮ್ ಡೌನ್; ಬೆಲ್ಲಿ ಡ್ಯಾನ್ಸ್ ನೋಡಿ; ”ಮಂಡೇ” ಬಿಸಿ ಓಡಿಸಿ
‘ಇದೇ ಕೆಲಸವನ್ನು ಅವನು ಧರ್ಮದ ಕಾರಣದಿಂದ ಮಾಡಿದ್ದರೆ ಆ ಕತೆಯೇ ಬೇರೆಯಿರುತ್ತಿತ್ತು,’ ಎಂದೊಬ್ಬರು ಹೇಳಿ ಇದಕ್ಕೆ ಹೊಸದೇ ಆಯಾಮ ಕೊಟ್ಟಿದ್ದಾರೆ. ಅವನಿಗೆ ಬೇಕಾಗಿದ್ದು ಜನರ ಗಮನ. ಅದಂತೂ ದಂಡಿಯಾಗಿ ದಕ್ಕಿದೆ. ಜೈಲಿಗೆ ಹೋದರೆ ಅಲ್ಲಿಯೂ ಏನಾದರೂ ಹುಂಬತನ ಮಾಡದೇ ಬಿಟ್ಟಾನೆಯೇ?
ಇದನ್ನೂ ಓದಿ : Viral Video: ಯಾರಿಗೆಲ್ಲ ಬೇಕು ಈ ಬೌಲ್ ಕಟ್, ಎಲ್ಲಾ ಸಾಲಾಗಿ ಬನ್ರಿ
ಹೌದು, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್ಗಳು ಮತ್ತು ಟಿಕ್ಟಾಕರ್ಗಳು ವ್ಯೂವ್ಸ್ಗಾಗಿ ನಡೆಸುವ ಅಪಾಯಕಾರೀ ಸರ್ಕಸ್ಗಳು ಆತಂಕಕಾರಿಯಾಗಿವೆ. ಹೇಳದೆ ಕೇಳದೆ ಜನರ ಮನೆಗಳಿಗೆ ನುಗ್ಗುವುದದರಿಂದ ಹಿಡಿದು ಅಪಘಾತಕ್ಕೀಡಾದ ವಿಮಾನಗಳವರೆಗೆ. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ನೀವವರನ್ನು ಪ್ರಶ್ನಿಸಿ, ನಾವು ಕಂಟೆಂಟ್ ಕ್ರಿಯೇಟರ್ಸ್ ಎಂದು ಹೇಳುತ್ತಾರೆ! ಎಂದು ಪ್ರತಿಕ್ರಿಯಿದ್ದಾರೆ ಇನ್ನೊಬ್ಬರು.
ಇದನ್ನು ನೋಡಿ ನಿಮಗೇನನ್ನಿಸಿತು? ಬರೆಯಿರಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:06 pm, Mon, 5 June 23