Viral Video: ಮಸ್ಕ್ ಚಾಟ್ ಭಂಡಾರ್, ಮೆಸ್ಸೀಸ್​ ಆಂಧ್ರಾ ಮೆಸ್, ಆಸ್ಕರ್​ ಚಾಯ್​ವಾಲಾ; ಬಂದರು ನೋಡಿ ಝೊಮ್ಯಾಟೋ ಬಾಣಸಿಗರು

| Updated By: ಶ್ರೀದೇವಿ ಕಳಸದ

Updated on: Jul 03, 2023 | 8:03 PM

Zomato : ಜಗತ್ತಿನ ವಿದ್ಯಮಾನಗಳಿಗೆ ಚುರುಕಾಗಿ ಸ್ಪಂದಿಸಲು ಶುರುವಿಟ್ಟಿದ್ದಾರೆ ಎಐ ಕಲಾವಿದರು. ಇದೀಗ ಝೊಮ್ಯಾಟೋ ಸಾಮಾಜಿಕ ಜಾಲತಾಣದ ತಮ್ಮ ಅನುಯಾಯಿಗಳನ್ನು ರಂಜಿಸಲು ಹೊಸ ಎಐ ವಿಡಿಯೋ ಬಿಡುಗಡೆ ಮಾಡಿದೆ.

Viral Video: ಮಸ್ಕ್ ಚಾಟ್ ಭಂಡಾರ್, ಮೆಸ್ಸೀಸ್​ ಆಂಧ್ರಾ ಮೆಸ್, ಆಸ್ಕರ್​ ಚಾಯ್​ವಾಲಾ; ಬಂದರು ನೋಡಿ ಝೊಮ್ಯಾಟೋ ಬಾಣಸಿಗರು
ಬಾಣಸಿಗರ ಅವತಾರ ತಾಳಿದ ಎಲಾನ್​ ಮಸ್ಕ್​ ಮತ್ತು ಲಿಯೋನಾರ್ಡೋ ಡಿಕ್ಯಾಪ್ರಿಯೋ
Follow us on

Artificial Intelligence : ಇತ್ತೀಚಿನ ದಿನಮಾನಗಳ್ಲಿ ಜಗತ್ತಿನಾದ್ಯಂತ ಇರುವ ಸೆಲೆಬ್ರಿಟಿಗಳೆಲ್ಲಾ ಎಐ ಕಲಾವಿದರ ಕೈಗೂಸುಗಳಾಗಿಬಿಟ್ಟಿದ್ದಾರೆ. ಚಿತ್ರರೂಪದಲ್ಲಿ ಮೂಡಿಬರುತ್ತಿದ್ದ ಅವರೆಲ್ಲರನ್ನೂ ನೀವು ನಿತ್ಯವೂ ನೋಡುತ್ತಿದ್ದೀರಿ. ಈಗ ಝೊಮ್ಯಾಟೋ (Zomato) ವಿಡಿಯೋ ರೂಪದಲ್ಲಿ ಒಂದಿಷ್ಟು ಸೆಲೆಬ್ರಿಟಿಗಳಿಗೆ ತಮ್ಮ ಫುಡ್​ ಸ್ಟಾಲ್​ನಲ್ಲಿ ಮುಖ್ಯ ಬಾಣಸಿಗರ ಕೆಲಸಕ್ಕೆ ನೇಮಿಸಿಕೊಂಡಿದೆ. ಮಸ್ಕ್​ ಚಾಯ್​ ಭಂಡಾರಕ್ಕೆ ಹೋದರೆ ನಿಮಗೆ​ ಎಲಾನ್​ ಮಸ್ಕ್​ (Elon Musk) ಸ್ವಾಗತಿಸುತ್ತಾರೆ. ಮೆಸ್ಸೀಸ್​ ಆಂಧ್ರಾ ಮೆಸ್​ನಲ್ಲಿ ಲಿಯೋನಲ್ ಮೆಸ್ಸಿ (Lionel Messi) ಸಿಗುತ್ತಾರೆ. ಆಸ್ಕರ್ ಚಾಯ್ ವಾಲಾನಲ್ಲಿ ಲಿಯೋನಾರ್ಡೋ ಡಿಕ್ಯಾಪ್ರಿಯೋ (Leonardo DiCaprio) ಇದ್ದಾರೆ. ಬನ್ನಿ ಮಾತಾಡಿಸಿಕೊಂಡು ಬರೋಣ. ಸಾಧ್ಯವಾದರೆ ಅವರು ತಯಾರಿಸಿದ ಖಾದ್ಯಗಳನ್ನೂ ವರ್ಚ್ಯುವಲಿ ಸವಿಯೋಣ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್​ಗಳ ಗಮನ ಸೆಳೆಯಲು ಝೊಮ್ಯಾಟೋ ಹೀಗೆ ಎಐ ವಿಡಿಯೋಗಳನ್ನು ಅಪ್​​​​ಲೋಡ್ ಮಾಡಿದೆ. ‘ಮಾ ಮೇರಿ ಶಕ್ತಿಯೋ ಕಾ ಗಲತ್ ಇಸ್ತೇಮಾಲ್​ ಹುವಾ ಹೈ’ ಹೃತಿಕ್ ರೋಷನ್ ಅಭಿನಯದ ಕ್ರಿಶ್ ಚಿತ್ರದ ಈ ಸಂಭಾಷಣೆಯನ್ನು ಒಕ್ಕಣೆಯಾಗಿ ಈ ವಿಡಿಯೋಗೆ ನೀಡಲಾಗಿದೆ.

ಇದನ್ನೂ ಓದಿ : Viral: ‘ನಿಮ್ಮ ಪ್ರೇಮಿಯ ಜೊತೆ ಹೀಗಿರಲು ನಿಮಗಿರುವ ಅಡ್ಡಿಯೇನು?’

ಮಸ್ಕ್, ಒಂದು ಬನ್​ ಕೊಡಪ್ಪಾ. ಚಹಾದಲ್ಲಿ ಸ್ವಲ್ಪ ಚೀಸ್​ ಹಾಕಿ ಕೊಡಿ. ಮೋಮೋವಾಲಾ ಝುಕರ್​ಬರ್ಗ್ ಎಲ್ಲಿ? ಖುಲ್ಛೆವಾಲೇ ವಿರಾಟ್ ಕೊಹ್ಲಿ ಎಲ್ಲಿ? ಸುಂದರ್ ಪಿಚೈ ಕಾರ್ನರ್​ ಎಲ್ಲಿದೆ, ಹುಡುಕುತ್ತಾ ಇದ್ದೇನೆ. ಈ ವಿಡಿಯೋ ನೋಡಿದರೆ ಮಸ್ಕ್​ ಗ್ಯಾರಂಟೀ ಝೊಮ್ಯಾಟೋ ಖರೀದಿಸಿಬಿಡುತ್ತಾನೆ… ನೆಟ್ಟಿಗರು ಹೀಗೆಲ್ಲ ತಮಾಷೆ ಮಾಡಿ ಮಜಾ ಉಡಾಯಿಸಿದ್ದಾರೆ. ಜಗತ್ತಿನ ವಿದ್ಯಮಾನ ಮತ್ತು ರಾಜಕೀಯ ಬೆಳವಣಿಗೆಗಳು ಏನೇ ಇರಲಿ. ಅಂತೂ ಎಐ (AI) ಕಲಾವಿದರು ದಿನದಿಂದ ದಿನಕ್ಕೆ ಸೃಜನಶೀಲರಾಗುತ್ತಿದ್ದಾರೆ ಎನ್ನುವುದೇ ಖುಷಿ ತರುವ ವಿಷಯ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ