ಲಾಹೋರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಪಡೆಗಳಿಂದ ಗುಂಡಿನ ದಾಳಿ; 10ಕ್ಕೂ ಹೆಚ್ಚು ಜನ ಸಾವು

Updated on: Oct 13, 2025 | 4:50 PM

ಇಂದು ಮುಂಜಾನೆ ಟಿಎಲ್​ಪಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನಾಪಡೆಯ ರೇಂಜರ್‌ಗಳು ಗುಂಡು ಹಾರಿಸಿದ ನಂತರ ಲಾಹೋರ್‌ನಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್ ಕಡೆಗೆ ಮೆರವಣಿಗೆಗಾಗಿ ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಬೆಳಗಿನ ಪ್ರಾರ್ಥನೆಗೂ ಮುನ್ನ ನಡೆಸಲಾದ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ನವದೆಹಲಿ, ಅಕ್ಟೋಬರ್ 13: ಇಂದು ಮುಂಜಾನೆ ಟಿಎಲ್​ಪಿ ಪ್ರತಿಭಟನಾಕಾರರ (TLP Protesters) ಮೇಲೆ ಪಾಕಿಸ್ತಾನಿ (Pakistan) ಸೇನಾಪಡೆಯ ರೇಂಜರ್‌ಗಳು ಗುಂಡು ಹಾರಿಸಿದ ನಂತರ ಲಾಹೋರ್‌ನಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್ ಕಡೆಗೆ ಮೆರವಣಿಗೆಗಾಗಿ ನೆರೆದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಬೆಳಗಿನ ಪ್ರಾರ್ಥನೆಗೂ ಮುನ್ನ ನಡೆಸಲಾದ ಕಾರ್ಯಾಚರಣೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಈ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಕಾನೂನು ಜಾರಿ ಸಂಸ್ಥೆಗಳು ಮತ್ತು ಟಿಎಲ್‌ಪಿ ಬೆಂಬಲಿಗರ ನಡುವೆ ಉದ್ವಿಗ್ನತೆ ಹೆಚ್ಚಾದಾಗ ಮುರಿಡ್ಕೆಯಲ್ಲಿಯೂ ಅಶಾಂತಿ ಭುಗಿಲೆದ್ದಿತು.

ಭಾನುವಾರ, ಇಸ್ಲಾಮಾಬಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಹೊರಗೆ ಗುಂಪು ಯೋಜಿಸಿರುವ ಇಸ್ರೇಲ್ ವಿರೋಧಿ ಪ್ರತಿಭಟನೆಯ ಕುರಿತು ಪಂಜಾಬ್ ಸರ್ಕಾರ ಮತ್ತು ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (ಟಿಎಲ್‌ಪಿ) ನಡುವೆ ಚರ್ಚೆಗಳು ನಡೆದವು. ಬುಧವಾರ ತಡರಾತ್ರಿ ಲಾಹೋರ್‌ನಲ್ಲಿ ಟಿಎಲ್‌ಪಿ ಬೆಂಬಲಿಗರನ್ನು ಚದುರಿಸಲು ಪಂಜಾಬ್ ಅಧಿಕಾರಿಗಳು ಪ್ರಾರಂಭಿಸಿದ ಪೊಲೀಸ್ ಕಾರ್ಯಾಚರಣೆಯ ನಂತರ ಹಿಂಸಾಚಾರ ಭುಗಿಲೆದ್ದಿತು. ಹೀಗಾಗಿ, ಲಾಹೋರ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ