2 ವರ್ಷಗಳ ಬಳಿಕ ಮರಳಿದ ಒತ್ತೆಯಾಳುಗಳಿಗೆ ಇಸ್ರೇಲ್ ರಸ್ತೆಯುದ್ದಕ್ಕೂ ಅದ್ದೂರಿ ಸ್ವಾಗತ
ಅಕ್ಟೋಬರ್ 7, 2023ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ 251 ಜನರನ್ನು ಅಪಹರಿಸಿ ಗಾಜಾಗೆ ಕರೆದೊಯ್ದರು. ಕಳೆದ ಎರಡು ವರ್ಷಗಳಲ್ಲಿ, ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಅನೇಕರು ಅಲ್ಲೇ ದುರಂತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದೀಗ 2 ವರ್ಷಗಳ ನಂತರ, ಉಳಿದ 20 ಜೀವಂತ ಒತ್ತೆಯಾಳುಗಳು ಮನೆಗೆ ಮರಳಲಿದ್ದಾರೆ.
ನವದೆಹಲಿ, ಅಕ್ಟೋಬರ್ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಿಂದ ಹಮಾಸ್ ಮತ್ತು ಇಸ್ರೇಲ್ (Israel) ನಡುವಿನ ಯುದ್ಧ ಅಂತ್ಯ ಕಂಡಿದೆ. ಕದನ ವಿರಾಮಕ್ಕೆ ಎರಡೂ ಕಡೆಯ ಒಪ್ಪಿಗೆ ಸಿಕ್ಕಿ ನಂತರ 2 ವರ್ಷಗಳ ಬಳಿಕ 20 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇಂದು ಮೊದಲ ಹಂತವಾಗಿ 7 ಒತ್ತೆಯಾಳುಗಳನ್ನು ಹಮಾಸ್ ರೆಡ್ ಕ್ರಾಸ್‌ನ ವಶಕ್ಕೆ ನೀಡಿದೆ. ಇಸ್ರೇಲಿ ಒತ್ತೆಯಾಳುಗಳು ಸುರಕ್ಷಿತವಾಗಿ ತವರಿಗೆ ಮರಳುವ ಸುದ್ದಿ ಕೇಳಿ ಇಸ್ರೇಲ್ ನಿಟ್ಟುಸಿರು ಬಿಟ್ಟಿದೆ. ಇಸ್ರೇಲಿ ಒತ್ತೆಯಾಳುಗಳನ್ನು ಬಿಗಿ ಭದ್ರತೆಯಲ್ಲಿ ದೇಶದೊಳಗೆ ಕರೆತರುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಇಸ್ರೇಲ್ ಜನರು ಹರ್ಷೋದ್ಘಾರದಿಂದ ಬಾವುಟ ಬೀಸುತ್ತಾ ಅವರನ್ನು ಸ್ವಾಗತಿಸಿದರು.
ಅಕ್ಟೋಬರ್ 7, 2023ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ 251 ಜನರನ್ನು ಅಪಹರಿಸಿ ಗಾಜಾಗೆ ಕರೆದೊಯ್ದರು. ಕಳೆದ ಎರಡು ವರ್ಷಗಳಲ್ಲಿ, ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಅನೇಕರು ಅಲ್ಲೇ ದುರಂತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದೀಗ 2 ವರ್ಷಗಳ ನಂತರ, ಉಳಿದ 20 ಜೀವಂತ ಒತ್ತೆಯಾಳುಗಳು ಮನೆಗೆ ಮರಳಲಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ